150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಇಟಲಿಯ ಆಟೋ ದೈತ್ಯ ಪಿಯಾಜಿಯೋ ಭಾರತದಲ್ಲಿನ 150 ಸಿಸಿ ಸೆಗ್‍‍ಮೆಂಟಿನ ಮೋಟಾರ್‍‍ಸೈಕಲ್‍‍ಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಎಪ್ರಿಲಿಯಾ 150 ಸಿಸಿ ಮೋಟಾರ್‍‍ಸೈಕಲ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಈ ಯೋಜನೆಯು ಮುಂದಿನ 18 ತಿಂಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಇಂಡಿಯನ್ ಆಟೋಸ್ ಬ್ಲಾಗ್ ವರದಿಗಳ ಪ್ರಕಾರ, ಪಿಯಾಜಿಯೋ ವಾಹನಗಳ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿ‍ಇ‍ಒ, ಡಿಯಾಗೋ ಗ್ರಾಫಿರವರು, ಎಪ್ರಿಲಿಯಾ 150 ಸಿಸಿ - 200 ಸಿಸಿ ಸೆಗ್‍‍ಮೆಂಟಿನಲ್ಲಿ ಮೋಟಾರ್‍‍ಸೈಕಲ್‍‍ಗಳನ್ನು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದರು. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಎಪ್ರಿಲಿಯಾ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಡಿಯಾಗೋ ರವರು ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ 150 ಸಿಸಿ ಎಪ್ರಿಲಿಯಾ ಮೋಟಾರ್‍‍ಸೈಕಲ್‍‍ಗಳ ಬಗೆಯೂ ಮಾತನಾಡಿದ್ದಾರೆ.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಗ್ರಾಫಿರವರ ಪ್ರಕಾರ, ಎಪ್ರಿಲಿಯಾದಂತಹ ಬ್ರಾಂಡ್ ಇಟ್ಟುಕೊಂಡು 150 ಸಿಸಿ ಸೆಗ್‍‍ಮೆಂಟಿನಲ್ಲಿ ಇಲ್ಲದೇ ಇರುವುದು ಸಮರ್ಥನೀಯವಲ್ಲ. ಈ ಯೋಜನೆಯು ನಮ್ಮ ಮಾರುಕಟ್ಟೆಯನ್ನು ವಿಸ್ತರಿಸುವುದರ ಜೊತೆಗೆ ಪವರ್ ಟ್ರೇನ್ ಆಯ್ಕೆಯನ್ನು ಹೆಚ್ಚಿಸುತ್ತದೆ, ಆದ ಕಾರಣ ಎಪ್ರಿಲಿಯಾದ ಮೋಟಾರ್‍‍ಸೈಕಲ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅವಶ್ಯವಾಗಿದೆ.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಪಿಯಾಜಿಯೋ 2018ರ ಆಟೋ ಎಕ್ಸ್ ಪೋದಲ್ಲಿ ಎಪ್ರಿಲಿಯಾ ಆರ್‍ಎಸ್ 150 ಮತ್ತು ಎಪ್ರಿಲಿಯಾ ಟ್ಯೂಯಾನೋ 150 ಮೋಟಾರ್‍‍ಸೈಕಲ್‍‍ಗಳನ್ನು ಅನಾವರಣಗೊಳಿಸಿತ್ತು. ಈಗ ಮೋಟಾರ್‍‍ಸೈಕಲ್ ಮಾರುಕಟ್ಟೆಯ ಬಗ್ಗೆ ಮತ್ತು ಅದರಲ್ಲಿನ ಪೈಪೋಟಿಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

150 ಸಿಸಿ ಮೋಟಾರ್‍‍ಸೈಕಲ್ ಸೆಗ್‍‍ಮೆಂಟಿನ ಬಗ್ಗೆ ಮತ್ತು ಆ ಸೆಗ್‍‍ಮೆಂಟಿನಲ್ಲಿರುವ ಪೈಪೋಟಿಯ ಬಗ್ಗೆ ಮಾತನಾಡಿದ ಗ್ರಾಫಿರವರು, ನಾವು ಭಾರತೀಯ ಮಾರುಕಟ್ಟೆಗೆ ಸರಿಯಾದ ಪರ್ಫಾರ್ಮೆನ್ಸ್ ನೀಡುವ, ಫೀಚರ್ಸ್ ಹೊಂದಿರುವ, ಸ್ಪರ್ಧಾತ್ಮಕ ಬೆಲೆಯಿರುವ ಪ್ರಾಡಕ್ಟ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ. ನಾವು ನಮ್ಮ ಪ್ರತಿಸ್ಪರ್ಧಿಗಳ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದು ಈಗಾಗಲೇ ಕೆಲ ಮೂಲ ಮಾದರಿಗಳನ್ನು ಪರೀಕ್ಷೆ ಮಾಡಿದ್ದೇವೆ. ನಮ್ಮ ಯೋಜನೆಯ ಪ್ರಕಾರ ಎಲ್ಲವೂ ನಡೆದರೆ, ಇನ್ನೂ 18 ತಿಂಗಳ ಒಳಗೆ ನಾವು ಭಾರತೀಯ ಮಾರುಕಟ್ಟೆಯಲ್ಲಿ ಮೋಟಾರ್‍‍ಸೈಕಲ್ ಬಿಡುಗಡೆಗೊಳಿಸಲಿದ್ದೇವೆ ಎಂದು ತಿಳಿಸಿದರು.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಎಪ್ರಿಲಿಯಾ ಆರ್‍ಎಸ್ 150 ಮತ್ತು ಎಪ್ರಿಲಿಯಾ ಟ್ಯೂಯಾನೋ 150 ಮೋಟಾರ್‍‍ಸೈಕಲ್‍‍ಗಳನ್ನು ಅಲ್ಯುಮಿನಿಯಂ ಪೆರಿಮೀಟರ್ ಫ್ರೇಮ್‍‍ನಿಂದ ನಿರ್ಮಿಸಲಾಗಿದೆ. ಎರಡೂ ವಾಹನಗಳಲ್ಲೂ 150 ಸಿಸಿಯ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4 ವಾಲ್ವ್ ನ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‍‍ಗಳಿವೆ. ಈ ಎಂಜಿನ್ 18 ಬಿಹೆಚ್‍‍ಪಿ ಪವರ್ ಅನ್ನು 10,000 ಆರ್‍‍ಪಿ‍ಎಂ ನಲ್ಲಿ ಮತ್ತು 14 ಎನ್‍ಎಂ ಟಾರ್ಕ್ ಅನ್ನು 7,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ. ಎರಡೂ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್‍‍ಗಳಿವೆ.

MOST READ: ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಆರ್‍ಎಸ್ 150 ವಾಹನವು ಟ್ಯೂಯಾನೋ 150 ವಾಹನಕ್ಕಿಂತ ಹೆಚ್ಚಿನ ದಕ್ಷತೆಯನ್ನು ಹೊಂದಿದೆ. ಆರ್‍ಎಸ್ 150 ಹೆಚ್ಚು ವಿನ್ಯಾಸಗಳನ್ನು ಹೊಂದಿದ್ದರೆ, ಟ್ಯೂಯಾನೋ 150 ಅರೆ ವಿನ್ಯಾಸಗಳನ್ನು ಹೊಂದಿದೆ. ಬಿಡುಗಡೆಯ ನಂತರ ಎಪ್ರಿಲಿಯಾ ಆರ್‍ಎಸ್ 150 ಮೋಟಾರ್‍‍ಸೈಕಲ್ ಯಮಹಾ ವೈಝಡ್‍ಎಫ್- ಆರ್15 ವಿ 3.0 ಬೈಕಿನೊಂದಿಗೆ ಮತ್ತು ಎಪ್ರಿಲಿಯಾ ಟ್ಯೂಯಾನೋ 150 ಮೋಟಾರ್‍‍ಸೈಕಲ್ ಯಮಹಾ ಎಂಟಿ-15 ವಾಹನಗಳಿಗೆ ಪೈಪೋಟಿ ನೀಡಲಿವೆ.

150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

150 ಸಿಸಿ ಸೆಗ್‍‍ಮೆಂಟಿನಲ್ಲಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡುವ ಯೋಜನೆಯನ್ನು ಎಪ್ರಿಲಿಯಾ ಬಹಳ ಹಿಂದೆಯೇ ಕಾರ್ಯರೂಪಕ್ಕೆ ತರಬೇಕಿತ್ತು. ಯಾವುದೇ ವಿದೇಶಿ ಬೈಕ್ ತಯಾರಕ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡುವುದಾದರೆ ಅದನ್ನು 150 ಸಿಸಿ ಸೆಗ್‍‍ಮೆಂಟಿನಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ. ಅದುವೇ ಸರಿಯಾದ ಸೆಗ್‍‍ಮೆಂಟ್ ಆಗಿದೆ. ತಡವಾಗಿಯಾದರೂ ಎಪ್ರಿಲಿಯಾ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದು ಶ್ಲಾಘನೀಯ. ಆದರೆ ಎಪ್ರಿಲಿಯಾ 300 ಸಿಸಿ ಮತ್ತು 400 ಸಿಸಿ ಸೆಗ್‍‍ಮೆಂಟಿನಲ್ಲಿ ಪೈಪೋಟಿ ನೀಡಲು ಯೋಚಿಸುವುದು ಸೂಕ್ತ, ಆ ಸೆಗ್‍‍ಮೆಂಟಿನಲ್ಲಿಯೇ ನಿಜವಾದ ಪೈಪೋಟಿ ಇದೆ. ಇದೇ ಕಾರಣಕ್ಕಾಗಿ ಕೆ‍‍ಟಿ‍ಎಂ ಬೈಕುಗಳು ಯಶಸ್ವಿಯಾಗುತ್ತಿರುವುದು.

More from DriveSpark

Article Published On: Wednesday, May 15, 2019, 18:45 [IST]
English summary
Aprilia 150CC Motorcycle Launching In 2020 — Fun Attractions Coming Soon! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+