ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವೆಹಿಕಲ್ ಗ್ರಾಹಕರಿಗಾಗಿ ಟಾಟಾ ಮೋಟಾರ್ಸ್ ಸರ್ವಿಸ್ ಕನೆಕ್ಟ್ ಹೆಸರಿನ ಸರ್ವಿಸ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದೆ. ಈ ಆಪ್ ಅನ್ನು ಆಂಡ್ರಾಯ್ಡ್ ಮೊಬೈಲ್‍‍ಗಳಿಗಾಗಿ ಪ್ಲೇ ಸ್ಟೋರ್ ನಿಂದ ಮತ್ತು ಐ‍ಒ‍ಎಸ್ ಮೊಬೈಲ್‍‍ಗಳಿಗಾಗಿ ಆಪಲ್ ಐ ಸ್ಟೋರ್‍‍ನಿಂದ ಉಚಿತವಾಗಿ ಡೌನ್‍‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಟೀಂ ಬಿ‍‍ಹೆಚ್‍‍ಪಿ ವರದಿಗಳ ಪ್ರಕಾರ, ಈ ಆಪ್ ತನಗೆ ಕನೆಕ್ಟ್ ಆಗಿರುವ ವಾಹನದ ಬಗ್ಗೆ ಎಲ್ಲಾ ವಿವರಗಳನ್ನು ನೀಡುತ್ತದೆ. ಚಾಸೀಸ್ ನಂಬರಿನ ಬಗ್ಗೆ, ಮ್ಯಾನುಫ್ಯಾಕ್ಛರ್ ವಾರಂಟಿಯ ಬಗ್ಗೆ, ವ್ಯಾಲಿಡಿಟಿ ಮತ್ತು ವಾರ್ಷಿಕ ಮೆಂಟೆನೆನ್ಸ್ ಕಾಂಟ್ರಾಕ್ಟ್ ಗಳನ್ನು ನವೀಕರಿಸುವ ಬಗ್ಗೆ ಮಾಹಿತಿಗಳನ್ನು ನೀಡುತ್ತದೆ. ಇದರಲ್ಲಿರುವ ಆರ್ಗನೈಜರ್‍‍ನಲ್ಲಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಇನ್ಶೂರೆನ್ಸ್, ಪೊಲ್ಯೂಷನ್ ಕಂಟ್ರೋಲ್ ಸರ್ಟಿಫಿಕೇಟ್‍‍ಗಳನ್ನು ಸ್ಕ್ಯಾನ್ ಮಾಡಿ ಸಂಗ್ರಹಿಸಬಹುದಾಗಿದೆ. ಕಾರು ಮಾಲೀಕರಿಗೆ ಹೊಸ ಕೊಡುಗೆಗಳ ಬಗ್ಗೆ, ಹೊಸ ವಾಹನಗಳ ಬಗ್ಗೆ ಮತ್ತು ಸರ್ವಿಸ್ ಕ್ಯಾಂಪ್‍‍ಗಳ ಬಗ್ಗೆ ಮಾಹಿತಿ ನೀಡುತ್ತದೆ.

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಇದಲ್ಲದೇ ಮಾಲೀಕರಿಗೆ ವಾಹನಗಳ ಸಣ್ಣ ಪುಟ್ಟ ರಿಪೇರಿಗಳ ಬಗ್ಗೆ ಹಾಗೂ ಮೆಂಟೆನೆನ್ಸ್ ಬಗ್ಗೆ ಕೆಲವು ಟಿಪ್ಸ್ ಗಳನ್ನು ನೀಡುತ್ತದೆ. ಈ ಆಪ್‍‍ನಲ್ಲಿ ರಿಮೈಂಡರ್ ಇದ್ದು, ಸರ್ವಿಸ್ ಬುಕ್ ಮಾಡಲು, ಇನ್ಶೂರೆನ್ಸ್ ನವೀಕರಿಸಲು, ಪೊಲ್ಯೂಷನ್ ಕಂಟ್ರೋಲ್ ಸರ್ಟಿಫಿಕೇಟ್ ಪಡೆಯಲು, ಬ್ಯಾಟರಿ ಬದಲಿಸಲು, ಟಯರ್‍‍ಗಳನ್ನು ಬದಲಿಸಲು ಕಾಲ ಕಾಲಕ್ಕೆ ನೆನಪಿಸುತ್ತದೆ.

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಈ ಆಪ್‍‍ನಿಂದ ತಮ್ಮ ಕಾರುಗಳಿಗಾಗಿರುವ ತೊಂದರೆ ಬಗ್ಗೆ ದೂರು ನೀಡಬಹುದು, ಫೀಡ್‍‍ಬ್ಯಾಕ್‍‍ಗಳನ್ನು ಸಹ ನೀಡಬಹುದು. ಗ್ರಾಹಕರು ಸೇವೆಯಲ್ಲಿ ತಮಗಾಗಿರುವ ಅನುಭವಗಳ ಬಗ್ಗೆ ಹೇಳಬಹುದು. ಟಾಟಾ ಮೋಟಾರ್ಸ್ ಸರ್ವಿಸ್ ಕನೆಕ್ಟ್ ಆಪ್ ನಲ್ಲಿ ಮೊದಲೇ ದಾಖಲಿಸಲಾದ ಡೇಟಾದಲ್ಲಿ, ಟಾಟಾ ಮೋಟಾರ್ಸ್ ಡೀಲರ್ ಮತ್ತು ಸರ್ವಿಸ್ ಸ್ಟೇಷನ್‍‍ಗಳ ಬಗ್ಗೆ ಮಾಹಿತಿಯಿದೆ.

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಕಾರುಗಳು ಕೈಕೊಟ್ಟಾಗ ಸರ್ವಿಸ್ ಸ್ಟೇಷನ್ ಇರುವ ಜಾಗಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಆಪ್ ಕಾರುಗಳಿಂದ ತುಂಬಿರುವ ಪಾರ್ಕಿಂಗ್ ಜಾಗದಲ್ಲಿ, ಕಾರನ್ನು ಎಲ್ಲಿ ಪಾರ್ಕ್ ಮಾಡಲಾಗಿದೆ ಎಂಬುದರ ಬಗ್ಗೆ ತಿಳಿಸುತ್ತದೆ. ಟ್ರಾಫಿಕ್ ಬಗ್ಗೆ ತಾಜಾ ನ್ಯೂಸ್‍‍ಗಳನ್ನು ಪಡೆಯುತ್ತದೆ. ಈ ಆಪ್‍‍ನಿಂದಾಗಿ ಗ್ರಾಹಕರು ಹೊಸ ಸರ್ವಿಸ್ ಅಪಾಯಿಂಟ್‍‍ಮೆಂಟ್‍‍ಗಳನ್ನು ಪಡೆಯಬಹುದು ಮತ್ತು ಹಿಂದಿನ ಸರ್ವಿಸ್‍‍ಗಳ ಬಗೆಗಿನ ಮಾಹಿತಿಯನ್ನು ಪಡೆಯಬಹುದು.

MOST READ: 250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಹೆಚ್ಚುವರಿಯಾದ ಮತ್ತು ಉಪಯುಕ್ತವಾದ ಫೀಚರ್ ಎಂದರೆ, ಸರ್ವಿಸ್‍‍ನ ವೆಚ್ಚದ ಮಾಹಿತಿಯನ್ನು ಗ್ರಾಫಿಕಲ್ ಮತ್ತು ಟ್ಯಾಬ್ಯುಲರ್ ಎರಡೂ ವಿಧದಲ್ಲಿ ಪಡೆಯಬಹುದು, ಇದರಲ್ಲಿ ಇನ್-ಬಿಲ್ಟ್ ಸರ್ವಿಸ್ ಕಾಸ್ಟ್ ಕ್ಯಾಲ್ಕುಲೇಟರ್ ಅಳವಡಿಸಲಾಗಿದೆ.

ಕಾರು ಮಾಲೀಕರಿಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಟಾಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಹೊಸ ಆಪ್‍‍ನಿಂದ ಕಾರು ಮಾಲೀಕರು ಕಾರುಗಳನ್ನು ಬಳಸುವುದು ಸುಲಭವೂ, ಸರಳವೂ ಆಗಲಿದೆ. ಕಾರುಗಳ ಸರ್ವಿಸ್‍‍ಗೆ ಎಷ್ಟು ಖರ್ಚಾಗುತ್ತದೆ, ಯಾವಾಗ ಸರ್ವಿಸ್ ಮಾಡಿಸಬೇಕು ಎಂಬ ವಿವರಗಳನ್ನು ನೀಡುತ್ತದೆ. ಈ ರೀತಿಯ ಆಪ್‍‍ಗಳಿಂದ ಕಾರನ್ನು ಹೇಗೆ ಮೆಂಟೇನ್ ಮಾಡಬೇಕು ಎಂದು ಗೊತ್ತಿಲ್ಲದೇ ಪರದಾಡುವವರಿಗೆ ಸಹಾಯವಾಗಲಿದೆ.

Most Read Articles

Kannada
English summary
Tata Launches Service Connect App For Car Owners — Everything At One Place - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X