250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಸಿ‍ಎಫ್ ಮೋಟೊ ಸಣ್ಣ ಗಾತ್ರದ ಸ್ಪೋರ್ಟ್ಸ್ ಕಾನ್ಸೆಪ್ಟ್ ಬೈಕ್ ಅನ್ನು ಅನಾವರಣಗೊಳಿಸಿದೆ, ಈ ಬೈಕಿಗೆ 250 ಎಸ್‍ಆರ್ ಎಂದು ಹೆಸರಿಡಲಾಗಿದೆ. ಲಭ್ಯವಾಗಿರುವ ಚಿತ್ರಗಳಲ್ಲಿರುವಂತೆ ಸಿ‍ಎಫ್ ಮೋಟೊ 250 ಎಸ್‍ಆರ್ ಬೈಕ್, 250 ಎನ್‍‍ಕೆ ಬೈಕಿನಲ್ಲಿದ್ದಂತಹ ಚಾಸೀಸ್ ಮತ್ತು ಎಂಜಿನ್‍‍ಗಳನ್ನೆ ಹೊಂದಿರಲಿದೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಈ ಮೋಟಾರ್‍‍ಸೈಕಲ್ ಅನ್ನು ರೇಸ್ ಟ್ರಾಕ್‍‍ಗಳಿಗಾಗಿ ತಯಾರಿಸಲಾಗಿದ್ದು, ಈ ಬೈಕಿನಲ್ಲಿ ಹೆಡ್‍‍ಲ್ಯಾಂಪ್, ಟೇಲ್ ಲ್ಯಾಂಪ್, ಟರ್ನ್ ಸಿಗ್ನಲ್ ಇಂಡಿಕೇಟರ್ ಮತ್ತು ಮಿರರ್‍‍ಗಳಿಲ್ಲ. ಟ್ರಾಕ್ ಆಧಾರಿತವಾಗಿರುವ ಈ ಬೈಕ್ ಇನ್ನೂ ಉತ್ಪಾದನೆಯ ಹಂತದಲ್ಲಿರುವ ಕಾರಣ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುವಂತಿಲ್ಲ. 250 ಎಸ್‍ಆರ್ ಬೈಕ್ ಸಹ 250 ಎನ್‍‍ಕೆ ಬೈಕಿನಲ್ಲಿದ್ದಂತಹ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳನ್ನು, ಎಲ್‍ಇ‍‍ಡಿ ಟೇಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‍‍ಗಳನ್ನು ಹೊಂದುವ ನಿರೀಕ್ಷೆಗಳಿವೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಈ ಬೈಕ್ ನಲ್ಲಿ ದೊಡ್ಡ ಏರ್ ಸ್ಕೂಪ್‍‍ನ ಒಳಗೆ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳಿರುವ ಸಾಧ್ಯತೆಗಳಿವೆ. 250 ಎಸ್‍ಆರ್ ನಲ್ಲಿ ಅಕ್ರಾಪೋವಿಕ್ ಎಕ್ಸಾಸ್ಟ್ ಗಳಿರುವುದಿಲ್ಲ, ಆದರೆ 250 ಎನ್‍‍ಕೆ ಯ ರೀತಿಯ ಎಕ್ಸಾಸ್ಟ್ ಯೂನಿಟ್ ಹೊಂದಿರಲಿದೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಚಿತ್ರಗಳಲ್ಲಿ ತೋರಿಸಿರುವಂತೆ ಈ ಮೋಟಾರ್‍‍ಸೈಕಲ್‍‍ನ ಹ್ಯಾಂಡಲ್ ಬಾರ್‍‍ಗಳ ಮೇಲೆ ಕ್ಲಿಪ್ ಇರಲಿದ್ದು, ರೇರ್ ಸೆಟ್ ಫುಟ್‍‍ಪೆಗ್‍‍ಗಳಿರಲಿವೆ. ಈ ಬೈಕ್ ಅನ್ನು ರೇಸ್‍‍‍‍‍‍ಗಳಿಗೆ ತಕ್ಕ ರೀತಿಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ದೊಡ್ಡ ಬಣ್ಣದ ಟಿ‍ಎಫ್‍‍ಟಿ ಸ್ಕ್ರೀನ್ ಇರಲಿದೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಸ್ಪೀಡೊ ಮೀಟರ್, ಟ್ಯಾಕೋ ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಫ್ಯೂಯಲ್ ಗೇಜ್, ಆಂಬಿಯಂಟ್ ಏರ್ ಟೆಂಪರೆಚರ್ ಮತ್ತು ಎಂಜಿನ್ ಟೆಂಪರೇಚರ್‍‍ಗಳಿರಲಿವೆ. ಈ ಬೈಕಿನಲ್ಲಿ ಬೇರೆ ಟ್ರಾಕ್ ಬೈಕ್‍‍ಗಳಲ್ಲಿರುವಂತಹ ರೈಡಿಂಗ್ ಮೋಡ್‍‍ಗಳಿರುವುದಿಲ್ಲ. ಈ ಕಾನ್ಸೆಪ್ಟ್ ಮೋಟಾರ್‍‍ಸೈಕಲ್‍‍ನಲ್ಲೂ, 250 ಎನ್‍‍ಕೆ ಬೈಕಿನಲ್ಲಿದ್ದಂತಹ ಚಾಸೀಸ್, ಸಸ್ಪೆಂಷನ್, ಅಪ್‍‍ಸೈಡ್ ಡೌನ್ ಫೋರ್ಕ್ ಮತ್ತು ಮೊನೊ ಶಾಕ್ ಗಳಿರಲಿವೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಸಿ‍ಎಫ್ ಮೋಟೊ ಕಂಪನಿಗೆ ಎರಡೂ 250 ಸಿಸಿ ಬೈಕ್‍‍ಗಳಲ್ಲಿನ ಬಿಡಿ ಭಾಗಗಳನ್ನು ಹಂಚಿಕೊಳ್ಳುವ ಅವಕಾಶವಿದ್ದು, ಒಂದೇ ರೀತಿಯ ಚಾಸೀಸ್ ಹೊಂದಿರಲು ಸಾಧ್ಯವಾಗಲಿದೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಕಾನ್ಸೆಪ್ಟ್ ಮೋಟಾರ್‍‍ಸೈಕಲ್‍‍ನ ಮುಂಭಾಗದಲ್ಲಿ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್‍‍ಗಳಿದ್ದು, ಅವುಗಳು ಉತ್ಪಾದನೆಯಾದ ನಂತರದಲ್ಲಿ ಈ ಬೈಕಿನಲ್ಲಿ ಕಾಣುವ ಸಾಧ್ಯತೆಗಳಿಲ್ಲ. ರೋಡಿಗಿಳಿವ ಬೈಕಿನಲ್ಲಿ ರಾಡಿಕಲ್ ಕ್ಯಾಲಿಪರ್ ಬ್ರೇಕ್‍‍ಗಳಿರುವ ಸಾಧ್ಯತೆಗಳಿವೆ.

MOST READ: ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಈ ಬೈಕಿನಲ್ಲಿ 249.2 ಸಿಸಿಯ ಲಿಕ್ವಿಡ್ ಕೂಲ್ ಎಂಜಿನ್ ಇರುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿಗಳು ದೊರಕದೇ ಇದ್ದರೂ, ಹೊಸ 250 ಎಸ್‍ಎರ್ ಬೈಕಿನ ಉತ್ಪಾದನೆಯನ್ನು ನವೆಂಬರ್‍‍ನಲ್ಲಿ ನಡೆಯುವ ಇಐ‍‍ಸಿ‍ಎಂ‍ಎ ಸಮಾರಂಭದ ನಂತರ ಆರಂಭಿಸುವ ಸಾಧ್ಯತೆಗಳಿವೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಸಿ‍ಎಫ್ ಮೋಟೊ ಇಂಡಿಯಾ ಕಂಪನಿಯು, 250 ಸಿಸಿಯ ಮೋಟಾರ್ ಸೈಕಲನ್ನು ಭಾರತದಲ್ಲಿ ಬಿಡುಗಡೆ ಮಾಡುವ ತವಕದಲ್ಲಿದೆ. ಆದರೆ ಬಿಡುಗಡೆ ಮಾಡುವ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಬಿಡುಗಡೆಯಾದ ನಂತರ ಕೆ‍‍ಟಿ‍ಎಂ ಆರ್‍‍ಸಿ 200, ಹೋಂಡಾ ಸಿ‍‍ಬಿ‍ಆರ್250‍‍ಆರ್ ಮತ್ತು ಸುಜುಕಿ ಕಂಪನಿಯ ಹೊಸ ಜಿಕ್ಸರ್ ಎಸ್‍ಎಫ್ 250 ಬೈಕುಗಳಿಗೆ ಪೈಪೋಟಿ ನೀಡಲಿದೆ. ಹೊಸ ಸಿ‍ಎಫ್ ಮೋಟೊ 250 ಎಸ್‍ಆರ್ ನ ಬೆಲೆಯು ಭಾರತದಲ್ಲಿರುವ ಎಕ್ಸ್ ಶೋರೂಂ ದರದಂತೆ ರೂ. 2 ಲಕ್ಷಗಳಾಗಿರಲಿದೆ.

250ಎಸ್‍ಆರ್ ಕಾನ್ಸೆಪ್ಟ್ ಬೈಕ್ ಅನಾವರಣಗೊಳಿಸಿದ ಸಿ‍ಎಫ್ ಮೋಟೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೆಲವೊಮ್ಮೆ ಬೈಕು ತಯಾರಕರು ಉತ್ಪಾದನೆ ಹಂತದಲ್ಲಿರುವ ಬೈಕುಗಳಿಗಿಂತ ಕಾನೆಪ್ಟ್ ಬೈಕುಗಳನ್ನೆ ಬಿಡುಗಡೆ ಮಾಡುವುದೇ ಲೇಸು ಎಂದು ಅನಿಸದೇ ಇರದು. 250 ಎಸ್‍ಆರ್ ಕಾನ್ಸೆಪ್ಟ್ ಬೈಕ್ ಸಹ ಆಕರ್ಷಕವಾಗಿದೆ.

Most Read Articles

Kannada
English summary
CFMoto Unveils 250 SR Concept Motorcycle — May Go Into Production In November - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X