ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಸೀಮಿತ ಆವೃತಿಯ ಬೈಕ್ ಅನ್ನು ತಯಾರಿಸಲು ಬ್ರಿಟಿಷ್ ಕಾರು ತಯಾರಕ ಆಸ್ಟನ್ ಮಾರ್ಟಿನ್ ಕಂಪನಿಯು ಯುನೈಟೆಡ್ ಕಿಂಗ್‍‍ಡಮ್ ಮೂಲದ ಬ್ರೋ ಸುಪೀರಿಯರ್ ಜೊತೆ ಪಾಲುಗಾರಿಕೆಯನ್ನು ಹೊಂದಿದೆ. ಈ ಪಾಲುಗಾರಿಕೆಯಲ್ಲಿ ತಯಾರಿಸಲಾದ ಮೊದಲ ಬೈಕ್ ಮುಂದಿನ ನವೆಂಬರ್‍ ತಿಂಗಳಲ್ಲಿ ನಡೆಯುವ ಇಐಸಿಎಂಎನಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಐಷಾರಾಮಿ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ನುರಿತ ಎಂಜಿನಿಯರ್‍‍‍ಗಳಿಂದ ತಯಾರಾದ ಈ ಬೈಕ್ ಆಕರ್ಷಕವಾಗಿದೆ. ಆಸ್ಟನ್ ಮಾರ್ಟಿನ್ ಕಂಪನಿಯು ಪತ್ರಿಕಾ ಪ್ರಕಟನೆಯ ಮೂಲಕ ಬೈಕ್ ಸೀಮಿತ ಆವೃತ್ತಿಯಾಗಲಿದೆ ಎಂದು ತಿಳಿಸಿದೆ. 2019ರ ಇಐಸಿಎಂಎನಲ್ಲಿ ಮೊದಲ ಬಾರಿಗೆ ಆಸ್ಟನ್ ಮಾರ್ಟಿನ್ ಬ್ರ್ಯಾಂಡಿಂಗ್ ಮತ್ತು ಬೈಕ್‍‍ನ ಲೋಗೊವನ್ನು ಪ್ರದರ್ಶಿಸಲಿದೆ. ಗ್ಲೋಬಲ್ ವಿನ್ಯಾಸದ ಕೇಂದ್ರವಾಗಿರುವ ಇಟಿಲಿಯಲ್ಲಿ ಇಐಸಿಎಂಎ 2019, ನವೆಂಬರ್ 5 ರಂದು ನಡೆಯಲಿದೆ.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಲ್ಲಾ ಹೊಸ ಬೈಕ್‍‍ಗಳು, ಆಸ್ಟನ್ ಮಾರ್ಟಿನ್‍‍ನ ಕ್ರಿಯೆಟಿವ್ ಅಫೀಸರ್ ಮಾರೆಕ್ ರೀಚ್‍‍ಮನ್ ಮತ್ತು ಬ್ರೋ ಸುಪೀರಿಯರ್‍‍ನ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಥಿಯೆರ್ರಿ ಹೆನ್ರಿಯೆಟ್ ಅವರ ದೂರದೃಷಿಯಾಗಿದೆ. ರೀಚ್‍‍ಮನ್ ಮತ್ತು ಹೆನ್ರಿಯೇಟ್ ಇಬ್ಬರೂ ಬೈಕ್‍ ಪ್ರಿಯರಾಗಿದ್ದಾರೆ.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಆಸ್ಟನ್ ಮಾರ್ಟಿನ್‍‍ನ ಕ್ರಿಯೆಟಿವ್ ಅಫೀಸರ್ ಮಾರೆಕ್ ರೀಚ್‍‍ಮನ್ ಅವರು ಮಾತನಾಡಿ, ಇದು ನನಗೆ ಮತ್ತು ನನ್ನ ತಂಡಕ್ಕೆ ಲಭಿಸಿದ ಪ್ರಮುಖ ಮತ್ತು ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಬ್ರೋ ಸುಪೀರಿಯರ್ ಜೊತೆ ಕಾರ್ಯನಿರ್ವಹಿಸುವ ಅವಕಾಶ ಮತ್ತು ಎಂಜಿ‍ನಿಯರ್‍‍ಗಳು ಯಾವ ರೀತಿ ವಿನ್ಯಾಸಗೊಳಿಸಬೇಕು ಎಂಬುದರ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಲು ಅವಕಾಶವನ್ನು ನೀಡಿದೆ. ಅಂತಿಮ ಫಲಿತಾಂಶದ ಬಗ್ಗೆ ನಮಗೆ ಕೂತೂಹಲವಿದೆ ಮತ್ತು ಮುಂದಿನ ವರ್ಷ ಅದು ಬಹಿರಂಗವಾದಾಗ ಬೈಕಿಗೆ ಸಿಗುವ ಪ್ರತಿಕ್ರಿಯೆಯನ್ನು ನೋಡಲು ನಾವು ಉತ್ಸುಕರಾಗಿದ್ದೇವೆ.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಬ್ರೋ ಸುಪೀರಿಯರ್‍‍ನ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಥಿಯೆರ್ರಿ ಹೆನ್ರಿಯೆಟ್ ಅವರು ಮಾತನಾಡಿ, ಆಸ್ಟನ್ ಮಾರ್ಟಿನ್ ಮತ್ತು ಬ್ರೋ ಸುಪೀರಿಯರ್, ಈ ಎರಡೂ ಕಂಪನಿಗಳು ಐಷಾರಾಮಿ ವಾಹನ ತಯಾರಕ ಕಂಪನಿಗಳಾಗಿವೆ. ವಿಶೇಷ ವಿನ್ಯಾಸ, ಕಾರ್ಯಕ್ಷಮತೆಯ ಹಂಚಿಕೆ ಮತ್ತು ಎರಡು ಕಂಪನಿಗಳ ಸಹಭಾಗಿತ್ವದಲ್ಲಿ ಒಂದೇ ಸೂರಿನಡಿ ಬೈಕ್ ಅನ್ನು ಅಭಿವೃದ್ದಿಪಡಿಸುವ ಕಲ್ಪನೆಯು ಸ್ವಾಭಾವಿಕವಾಗಿ ಬಂತು ಎಂಬುದನ್ನು ಅವರು ಹೇಳಿದರು.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಬ್ರೋ ಸುಪೀರಿಯರ್ ಇಂಗ್ಲೇಂಡ್ ಮೂಲದವರಾಗಿದ್ದು 1919 ಮತ್ತು 1940ರ ನಡುವೆ ಬೈಕ್‍‍ಗಳು , ಸೈಡ್‍‍ಕಾರು‍ಗಳು ಮತ್ತು ಕಾರುಗಳನ್ನು ತಯಾರಿಸಿದರು. ಅವರು ನಿರ್ಮಿಸಿದ ಬೈಕ್‍‍ಗಳನ್ನು ರೊಲ್ಸ್ ರಾಯ್ಸ್ ಎಂದು ಪರಿಗಣಿಸಲಾಗಿದೆ. ಕಂಪನಿಯು ಕಾರ್ಯನಿರ್ವಹಿಸಿದ ವರ್ಷಗಳಲ್ಲಿ ಸರಿಸುಮಾರು 3048 ಬೈಕ್‍ಗಳನ್ನು ಉತ್ಪಾದಿಸಿತ್ತು.

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಬ್ರೋ ಸುಪೀರಿಯರ್ ಹೆಸರನ್ನು ಮತ್ತು ತಯಾರಿಕೆಯನ್ನು ಜರ್ಸಿ-ನೋಂದಾಯಿತ ಕಾರ್ಪೊರೇಷನ್ ಕಂಪನಿಯು ಸ್ವಾಧೀನಪಡಿಸಿಕೊಂಡಿತು ಮತ್ತು ಈಗಾಗಲೇ ಬಾಕ್ಸ್ ವಿನ್ಯಾಸದ ಎಸ್‍ಎಸ್ 100 ಬೈಕ್ ಅನ್ನು ಉತ್ಪಾದಿಸಿದೆ. 88 ಡಿಗ್ರಿ 990 ಸಿಸಿ ಎಂಜಿನ್ ಹೊಂದಿರುವ ಬೈಕ್ ಅನ್ನು ಇಐಸಿಎಂಎ 2013ರಲ್ಲಿ ಬಿಡುಗಡೆಗೊಳಿಸಲಾಗಿತ್ತು, ಹೆಚ್ಚಿನ ಉತ್ಪಾದನೆಯು 2016ರಲ್ಲಿ ಪ್ರಾರಂಭವಾಯಿತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಬ್ರೋ ಸುಪೀರಿಯರ್‍‍ನ ಬೈಕ್‍‍ನಲ್ಲಿ ಫಿಯರ್-ಮಾದರಿಯ ಫ್ರಂಟ್ ಫೋರ್ಕ್, ಹಿಂಭಾಗದಲ್ಲಿ ಓಹ್ಲಿನ್ ಮೊನೊ-ಶಾಕ್, ಟೈಟಾನಿಯಂ - ಕಾರ್ಬನ್ ಫೈಬರ್-ಅಲ್ಯೂಮಿನಿಯಂ ಫ್ರೇಮ್ ಮತ್ತು ಬೆರಿಂಜರ್ ಬ್ರೇಕ್‍, ನಾಲ್ಕು ರೋಟೊರ್‍‍‍ಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ವಿಭಿನ್ನ ಬೈಕ್ ತಯಾರಿಸಲಿದೆ ಆಸ್ಟನ್ ಮಾರ್ಟಿನ್

ಈ ಎರಡೂ ಐಷಾರಾಮಿ ಕಾರು ತಯಾರಕ ಕಂಪನಿಗಳು, ಬೈಕ್ ಅನ್ನು ತಯಾರಿಸುತ್ತಿರುವುದು ರೋಚಕ ವಿಷಯವಾಗಿದೆ. ಇದರ ಹಿಂದೆ ಜೀಮ್ಸ್ ಬಾಂಡ್ ಮಾದರಿಯ ಒಬ್ಬ ಹೀರೋ ಇದ್ದಾರೆ ಎಂದು ಹೇಳಬಹುದು. ಮುಂದಿನ ವರ್ಷ ನಡೆಯುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೆಚ್ಚು ಕೂತೂಹಲ ಮೂಡಿಸಿರುವ ಈ ಬೈಕ್ ನೋಡುವ ಅವಕಾಶ ಲಭಿಸುತ್ತದೆ ಎಂದು ನಾವು ಭಾವಿಸುತ್ತೇವೆ.

More from DriveSpark

Article Published On: Monday, October 28, 2019, 16:00 [IST]
English summary
Aston Martin To Manufacture Limited Edition Motorcycles: Partners With Brough Superior - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+