ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಅವಾನ್ ಮೋಟಾರ್ಸ್ ಸಂಸ್ಥೆಯು ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆದ 'ಟ್ರೆಂಡ್ ಇ'ಯನ್ನು ಬೆಂಗಳೂರಿನಲ್ಲಿ ನಡೆದ 6ನೆಯ ಆಟೋಮೊಬೈಲ್ ಎಕ್ಸ್ಪೋ ಮೇಳದಲ್ಲಿ ಅನವಾರಣಗೊಳಿಸಲಾಗಿದ್ದು, ಇದೀಗ ಇಂದು ತಮ್ಮ 'ಟ್ರೆಂಡ್ ಇ' ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಟ್ರೆಂಡ್ ಇ ಸ್ಕೂಟರ್‍‍ಗಳು ಈಗಾಗಲೆ ಅವಾನ್ ಮೋಟಾರ್ಸ್‍ರವರು ಮಾರಾಟ ಮಾಡುತ್ತಿರುವ 'ಕ್ಸೆರೊ' ಸಿರೀಸ್‍ನಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಬಿಡುಗಡೆಯಾದ ಅವಾನ್ ಮೋಟಾರ್ಸ್‍ನ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಎರಡೂ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 56,9000 ಬೆಲೆಯನ್ನು ನಿಗದಿ ಮಾಡಲಾಗಿದೆ. ಟ್ರೆಂಡ್ ಇ ಎಲೆಕ್ತ್ರಿಕ್ ಸ್ಕೂಟರ್‍‍‍ಗಳು ಸಿಂಗಲ್ ಬ್ಯಾಟರಿ ಅಥವಾ ಎರಡು ಬ್ಯಾಟರಿಯ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಡ್ಯುಯಲ್ ಬ್ಯಾಟರಿ ಆಧಾರಿತ ಟ್ರೆಂಡ್ ಇ ಸ್ಕೂಟರ್‍‍ಗಳು ರೂ. 81,269 ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಲಾಗಿದ್ದು, ರೂ. 1,100 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ವೈಶಿಷ್ಟ್ಯತೆಗಳು

ಟ್ರೆಂಡ್ ಇ ಸ್ಕೂಟರ್‍‍ನಲ್ಲಿ ಎಲ್ಇಡಿ ಡಿಆರ್ಎಲ್, ಎಲ್ಇಡಿ ಹೆಡ್‍ಲ್ಯಾಂಪ್ಸ್ ಮತ್ತು ಟೈಲ್‍ಲೈಟ್ಸ್ ಅನ್ನು ನೀಡಲಾಗಿದೆ. ಇವುಗಳ ಜೊತೆಗೆ ಇದರಲ್ಲಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಗಿದ್ದು, ಚಾಲಕನಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಇದರಲ್ಲಿ ಕಾಣಬಹುದಾಗಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಟ್ರೆಂಡ್ ಇ ಅವಾನ್ ಮೋಟಾರ್ಸ್ ಸಂಸ್ಥೆಯಿಂದ ಬಿಡುಗಡೆಯಾದ ಮೂರನೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಈಗಾಗಲೆ ಸಂಸ್ಥೆಯು ಬಿಡುಗಡೆಗೊಳಿಸಿದ ಕ್ಸೆರೊ ಮತ್ತು ಕ್ಸೆರೊ+ ಸ್ಕೂಟರ್‍‍ಗಳು ಜನಪ್ರೀಯತೆಯನ್ನು ಪಡೆದುಕೊಂಡಿದೆ. ಇನ್ನೆರಡು ಸ್ಕೂಟರ್‍‍ಗಳಂತೆಯೆ ಟ್ರೆಂಡ್ ಇ ಸ್ಕೂಟರ್‍‍ನಲ್ಲಿಯೂ ಸಹ ಸುಮಾರು 60 ಕಿಲೋಮೀಟರ್ ಚಲಿಸಬಲ್ಲ 48 ವೋಲ್ಟ್ಸ್, 28ಎಹೆಚ್ ಲೀಥಿಯಂ ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಇನ್ನು ಟ್ರೆಂಡ್ ಇ ಸ್ಕೂಟರ್‍‍ನ ಡಬಲ್ ಬ್ಯಾಟರಿಯ ಆವೃತ್ತಿಗಳು ಸುಮಾರು 110 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಈ ಸ್ಕೂಟರ್ ಪಡೆದುಕೊಂಡಿದೆ. ಅಲ್ಲದೇಯೆ ಬ್ಯಾಟರಿ ಚಾರ್ಜ್ ಆಗಲು ಸುಮಾರು 2 ರಿಂದ 4 ಗಂಟೆಯ ಸಮಯ ಬೇಕಾಗುತ್ತದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಟ್ರೆಂಡ್ ಇ ಸ್ಕೂಟರ್‍‍ಗಳು ಸುಮಾರು 150 ಕಿಲೋಗ್ರಾಂ ತೂಕವನ್ನು ಹೊರಬಲ್ಲ ಸಾಮರ್ಥ್ಯವನ್ನು ಮಾತ್ರ ಪಡೆದುಕೊಂಡಿದೆ. ಸ್ಕೂಟರ್‍‍ನ ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆಂಶನ್ ಅನ್ನು ನೀಡಲಾಗಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಇವುಗಳ ಜೊತೆಗೆ ಟ್ರೆಂಡ್ ಇ ಸ್ಕೂಟರ್‍‍ಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು, ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ಒದಗಿಸಲಾಗಿದೆ. ನೀಡುವ ಬೆಲೆಗಿಂತಲೂ ಹೆಚ್ಚಾಗಿ ಸ್ಕೂಟರ್‍‍ನಲ್ಲಿ ಡಿಸ್ಕ್ ಬ್ರೇಕ್ ಅನ್ನು ಈ ಸ್ಕೂಟರ್‍‍ಗೆ ಅಳವಡಿಸಿರುವುದು ಗಮನಾರ್ಹ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಅವಾನ್ ಮೋಟಾರ್ಸ್ ಸಂಸ್ಥೆಯು ಈ ಹಿಂದೆಯೆ ತಮ್ಮ ಕ್ಸೆರೊ ಮತ್ತು ಕ್ಸೆರೊ+ ವಾಹನಗಳನ್ನು ಬಿಡುಗಡೆ ಮಾಡಲಗಿದ್ದು, ಕಾರಣಾಂತರಗಳಿಂದ ಕ್ಸೆರೊ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಆದರೆ ಕ್ಸೆರೊ ಪ್ಲಸ್ ಸ್ಕೂಟರ್ ಮಾತ್ರ ಇನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 47,000 ಕ್ಕೆ ಮಾರಾಟವಾಗುತ್ತಿದೆ. ಟ್ರೆಂಡ್ ಇ ಸ್ಕೂಟರ್‍‍ಗಳು ಒಕಿನಾವ ಪ್ರೈಸ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡ ಅವಾನ್ ಮೋಟಾರ್ಸ್‍ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್...

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸ್ಟೈಲಿಷ್ ವಿನ್ಯಾಸವನ್ನು ನೀಡಿ ಅವಾನ್ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ರುಚಿಗೆ ಸರಿ ಹೊಂದುವ ಹಾಗೆ ಆರು ತಿಂಗಳಿನಲ್ಲಿ ಇನ್ನೂ ಆರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಮಾಹಿತನ್ನು ನೀಡಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್ ಸ್ಕೂಟರ್ ಅನ್ನಬಹುದು.

More from DriveSpark

Article Published On: Friday, March 22, 2019, 17:00 [IST]
English summary
Avan Trend E Electric Scooter Launched In India — Prices Start At Rs 56,900. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+