ಅನಾವರಣಗೊಂಡ ಅವಾನ್ ಮೋಟಾರ್ಸ್‍ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಅವಾನ್ ಮೋಟಾರ್ಸ್ ಸಂಸ್ಥೆಯು ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆದ 'ಟ್ರೆಂಡ್ ಇ'ಯನ್ನು ಬೆಂಗಳೂರಿನಲ್ಲಿ ನಡೆದ 6ನೆಯ ಆಟೋ ಎಕ್ಸ್ಪೋ ಮೋಳದಲ್ಲಿ ಅನವಾರಣಗೊಳಿಸಲಾಯಿತು. ಈ ಟ್ರೆಂಡ್ ಈ ಸ್ಕೂಟರ್ ಈಗಾಗಲೆ ಅವನ್ ಮೋಟಾರ್ಸ್‍ರವರು ಮಾರಾಟ ಮಾಡುತ್ತಿರುವ 'ಕ್ಸೆರೊ' ಸಿರೀಸ್‍ನಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ.

ಅನಾವರಣಗೊಂಡ ಅವಾನ್ ಮೋಟಾರ್ಸ್‍ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಅವಾನ್ ಮೋಟಾರ್ಸ್ ಪ್ರಕಾರ ಟ್ರೆಂಡ್ ಇ ಸ್ಕೂಟರ್ ಹೆಚ್ಚು ಸಮರ್ಥ್ಯ ಮತ್ತು ಅಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ. ಅಷ್ಟೆ ಅಲ್ಲದೇ ಎಲ್ಇಡಿ ಡಿಆರ್‍ಎಲ್‍‍ನೊಂದಿಗೆ ಸ್ಟೈಲಿಶ್ ವಿನ್ಯಾಸವನ್ನು ನೀಡುವುದರಿಂದ ಯುವ ಸಮುದಾಯವನ್ನು ಸೆಳೆಯುವ ತವಕದಲ್ಲಿದೆ. ದೇಶದಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಮಯವಾಗುತ್ತಿರುವ ಕಾರಣ ನಾವು ಭವಿಷ್ಯದಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಅನಾವರಣಗೊಂಡ ಅವಾನ್ ಮೋಟಾರ್ಸ್‍ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಅವಾನ್ ಮೋಟಾರ್ಸ್ ಅನವಾರಣಗೊಳಿಸಿದ ಟ್ರೆಂಡ್ ಇ ಸ್ಕೂಟರ್‍‍‍ನ ಸಾಮರ್ಥ್ಯದ ಬಗ್ಗೆ ಹೇಳುವುದಾದ್ರೆ ಈ ಸ್ಕೂಟರ್ ಲೀಥಿಯಂ ಐಯಾನ್ ಬ್ಯಾಟರಿನಿಂದ ಚಲಿಸಲಿದ್ದು, ಇದು ಒಂದು ಬಾರಿಯ ಚಾರ್ಜ್‍ಗೆ ಸುಮಾರು 60 ಕಿಲೋಮೀಟರ್‍‍ನ ಮೊಲೇನ್ ನೀಡಬಲ್ಲದು. ಇದರ ಜೊತೆಗೆ ಎರಡು ಬ್ಯಾಟರಿಯನ್ನು ನೀವಿದರಲ್ಲಿ ಇರಿಸಿಕೊಳ್ಳಬಹುದಾಗಿದ್ದು, ಎರಡು ಬ್ಯಾಟರಿ ಜೊಗೆತೆ ಈ ಸ್ಕೂಟರ್ ಸುಮಾರು 110 ಕಿಲೋಮೀಟರ್‍‍ನ ಮೊಲೇಜ್ ನೀಡಬಲ್ಲದು.

ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಅವಾನ್ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಅನ್ನು ಪಡೆದುಕೊಂಡಿದ್ದು, ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ಒದಗಿಸಲಾಗಿದೆ. ಒಟ್ಟಾರೆಯಾಗಿ ಈ ಸ್ಕೂಟರ್ 150ಕಿಲೋಗ್ರಾಂನ ತೂಕವನ್ನು ನಿಭಾಯಿಸಬಲ್ಲದು.

ಅನಾವರಣಗೊಂಡ ಅವಾನ್ ಮೋಟಾರ್ಸ್‍ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಅವಾನ್ ಜೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 47,000 ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ 48ವ್ಯಾಟ್, 28ಎಹೆಚ್ ಲೀಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಹೀಗಾಗಿ ಈ ಸ್ಕೂಟರ್‌ನಲ್ಲಿ ಕೂಡಾ ಎರಡು ಬ್ಯಾಟರಿಗಳನ್ನು ನೀಡಲಾಗಿದ್ದು, ಸಿಂಗಲ್ ಚಾರ್ಜ್ ಬ್ಯಾಟರಿ ಮಾದರಿಯು ಪ್ರತಿ ಚಾರ್ಜ್‌ಗೆ 60ಕಿ.ಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದಲ್ಲಿ ಡ್ಯುಯಲ್ ಬ್ಯಾಟರಿ ಸೌಲಭ್ಯದ ಮೂಲಕ ಒಟ್ಟು 110 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದಾಗಿದೆ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಅನಾವರಣಗೊಂಡ ಅವಾನ್ ಮೋಟಾರ್ಸ್‍ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಹೊಸ ಜೆರೊ ಪ್ಲಸ್ ಸ್ಕೂಟರ್‌ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಗಮನಹರಿಸಿರುವ ಅವಾನ್ ಮೋಟಾರ್ಸ್ ಸಂಸ್ಥೆಯು ಮುಂಭಾದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಒದಗಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಕೂಟರ್ ಹಿಂಭಾದಲ್ಲಿ ಟಾಪ್ ಬಾಕ್ಸ್ ಸೇರಿದಂತೆ ರೆಡ್, ವೈಟ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ನೀಡಿದೆ.

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಅವಾನ್ ಮೋಟಾರ್ಸ್ ಸಂಸ್ಥೆಯು ಸಧ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪರಿಚಯಿಸುವುದರಿಂದ ಮರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿದ್ದು, ಇತ್ತೀಚೆಗೆ ತಮ್ಮ ಕ್ಸೆರೊ+ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಕ್ಸೆರೊ+ ಸ್ಕೂಟರ್‍‍ಗಳಿ ಈಗಾಗಲೆ ಮಾರಾಟಕ್ಕೆ ಲಭ್ಯವಿರುವ ಒಕಿನಾವಾ ಪ್ರೈಸ್ ಮತ್ತು ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Avan Motors Unveils ‘Trend E’ Electric Scooter — Promises Blend Of Performance & Design. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X