ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಭಾರತೀಯ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪನಿ ಅವೆರಾ ಎಲೆಕ್ಟ್ರಿಕ್ ವೆಹಿಕಲ್ಸ್ ತನ್ನ ರೆಟ್ರೊಸಾ ಸ್ಕೂಟರ್‍‍ಗಳ ಬುಕ್ಕಿಂಗ್‍‍ಗಳನ್ನು ಶುರು ಮಾಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಈ ಎಲೆಕ್ಟ್ರಿಕ್ ಸ್ಕೂಟರ್‍‍ನ ಬೆಲೆಯು ಆಂಧ್ರ ಪ್ರದೇಶದ ಎಕ್ಸ್ ಶೋರೂಂ ದರದಂತೆ ರೂ.1.08 ಲಕ್ಷಗಳಾಗಿದೆ.

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಈ ಸ್ಕೂಟರ್ ಅನ್ನು ಕೊಳ್ಳಲು ಬಯಸುವ ಗ್ರಾಹಕರು ರೂ.11,200 ಟೋಕನ್ ಅಡ್ವಾನ್ಸ್ ಪಾವತಿಸಿ ಬುಕ್ ಮಾಡಬಹುದಾಗಿದೆ. ಆದರೆ ಕಂಪನಿಯು ಸದ್ಯಕ್ಕೆ ಆನ್‍‍ಲೈನ್ ಮುಖಾಂತರ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿ ಮಾತ್ರ ವ್ಯವಹಾರ ನಡೆಸುತ್ತಿದೆ. ಈ ಸ್ಕೂಟರ್‍‍ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಒಂದು ಬಾರಿ ಚಾರ್ಜ್‍ ಮಾಡಿದರೆ 120-140 ಕಿ.ಮೀ ಚಲಿಸಬಹುದು. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಮನೆಯಲ್ಲಿರುವ ಮಾಮೂಲಿ ಪವರ್ ಸಾಕೆಟ್‍‍ಗಳಲ್ಲಿ 3 ರಿಂದ 4 ಗಂಟೆ ತಗುಲುತ್ತದೆ.

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಅವೆರಾದ ಹೋಂ ಚಾರ್ಜಿಂಗ್ ಸ್ಟೇಷನ್‍‍ನಲ್ಲಿ 1 ರಿಂದ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ. ಈ ರೆಟ್ರೊಸಾ ಸ್ಕೂಟರಿನಲ್ಲಿ 3000 ಡಬ್ಲ್ಯು ಬಿ‍ಎಲ್‍‍ಡಿ‍‍ಸಿ (ಬ್ರಷ್‍‍ಲೆಸ್ ಡಿಸಿ) ಮೋಟಾರ್ ಅಳವಡಿಸಲಾಗಿದ್ದು, ಕಂಪನಿಯ ಪ್ರಕಾರ ಟಾಪ್ ವೇಗವು ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ.

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಗಮನಿಸಬೇಕಾದ ಸಂಗತಿಯಾದರೆ, ಈ ಸ್ಕೂಟರ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಫೇಮ್ 2 ಯೋಜನೆಯಡಿ ರೂ.25,000 ಸಬ್ಸಿಡಿ ಪಡೆಯಲಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೊಲ್, ಬ್ಯಾಟರಿ ಮಾನಿಟರಿಂಗ್ ಸಿಸ್ಟಂ, ಎಲ್‍ಇ‍‍ಡಿ ಲೈಟ್, ಸೈಡ್ ಸ್ಟಾಂಡ್ ಸೆನ್ಸಾರ್, ರೇರ್ ವೀವ್ ಮಿರರ್ ನೀಡಲಾಗಿದೆ.

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಇದರ ಜೊತೆಗೆ ಮುಂಭಾಗದಲ್ಲಿ ಅಧಿಕವಾದ ಸ್ಟೋರೇಜ್‍, ಪಾರ್ಕ್ ಅಸಿಸ್ಟ್ ಗಳಿದ್ದು, ಎಕನಾಮಿ ಹಾಗೂ ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ. ಈ ಸ್ಕೂಟರಿನಲ್ಲಿ ಅಲ್ಯುಮಿನಿಯಂ ಬಾಡಿ ಫ್ರೇಂ ಇದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಟ್ವಿನ್ ಶಾಕ್ ಸೆಟ್‍ಅಪ್‍‍ಗಳಿವೆ. ಸ್ಕೂಟರಿನ ಮುಂದೆ, ಹಿಂದೆ ಎರಡೂ ಕಡೆಯಿರುವ ಡಿಸ್ಕ್ ಬ್ರೇಕ್‍‍ಗಳು ಸ್ಕೂಟರ್ ಅನ್ನು ನಿಯಂತ್ರಿಸುತ್ತವೆ. ಅವೆರಾ ರೆಟ್ರೊಸಾ ಸ್ಕೂಟರ್‍‍ನ ತೂಕವು 88 ಕೆ.ಜಿಗಳಷ್ಟಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಪೆಟ್ರೋಲ್‍‍ನಿಂದ ಚಲಿಸುವ ಟಿ‍‍ವಿ‍ಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್‍ 97 ಕೆ.ಜಿಗಳಷ್ಟು ತೂಕವನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿರುವ ಅಥೆರ್ 450 ಸ್ಕೂಟರ್‍‍ನೊಂದಿಗೆ ರೆಟ್ರೊಸಾ ಸ್ಕೂಟರ್ ಅನ್ನು ಹೋಲಿಸಬಹುದು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಅವೆರಾ ಕಂಪನಿಯು ಈ ಸ್ಕೂಟರಿನಲ್ಲಿರುವ ಬ್ಯಾಟರಿಗೆ 5 ವರ್ಷಗಳ ವಾರಂಟಿ ನೀಡುವುದರ ಜೊತೆಗೆ, 5 ವರ್ಷಗಳ ಕಾಲ ಸ್ಕೂಟರಿನ ವಿಮೆಯನ್ನು ಉಚಿತವಾಗಿ ನೀಡಲಿದೆ. ಅವೆರಾ ಕಂಪನಿಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ 100 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಿ ಬ್ಯಾಟರಿ ಸ್ವಾಪ್ ಮಾಡುವ ಟೆಕ್ನಾಲಜಿಯನ್ನು ನೀಡಲಿದೆ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ಬುಕ್ಕಿಂಗ್ ಶುರು ಮಾಡಿದ ಅವೆರಾ

ಅವೆರಾ ರೆಟ್ರೊಸಾ ಎಲೆಕ್ಟ್ರಿಕ್ ಸ್ಕೂಟರ್‍ ದೇಶಿಯ ಮಾರುಕಟ್ಟೆಯಲ್ಲಿ ಒಕಿನಾವಾ ಐ ಪ್ರೈಸ್ ಹಾಗೂ ಅಥೆರ್ 450 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Avera starts bookings For Retrosa Electric Scooter In India - Read in kannada
Story first published: Saturday, June 8, 2019, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X