ಹೊಸ ಬಜಾಜ್ ಡಾಮಿನಾರ್ 400 ಬೈಕ್ ಬೆಲೆ ಕಡಿತ

vಬಜಾಜ್ ಆಟೋ ಸಂಸ್ಥೆಯು ಕಳೆದ ತಿಂಗಳಷ್ಟೆ ತಮ್ಮ ಜನಪ್ರಿಯ ಡಾಮಿನಾರ್ 400 ಬೈಕಿನ ಹಲವಾತು ಬದಲಾವಣೆಗಳನ್ನು ಮಾಡಿ ರೂ. 1.7 ಲಕ್ಷಕ್ಕೆ ಮಾರಾಟದ ಬೆಲೆಯನ್ನು ನಿಗದಿ ಮಾಡಿ ಬಿಡುಗಡೆ ಮಾಡಿತ್ತು. ಹೀಗಿರುವಾಗ ಬಜಾಜ್ ಡಾಮಿನಾರ್ 400 ಬೈಕಿನ ಬೆಲೆಯಲ್ಲಿ ರೂ. 4000 ಕಡಿತ ಮಾಡಿದೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಇದೀಗ ಬಜಾಜ್ ಸಂಸ್ಥೆಯು ಬಿಡುಗಡೆ ಮಾದಿರುವ ಹೊಸ ಟಿವಿಸಿ ಜಾಹಿರಾತಿನಲ್ಲಿ ಬಜಾಜ್ ಡಾಮಿನಾರ್ 400 ಬೈಕ್ ಮತ್ತೆರಡು ಬಣ್ಣಗಳಲ್ಲಿ ಲಭ್ಯವಿರಲಿದೆ ಎಂಬ ಸುಳಿವನ್ನು ನೀಡಿದೆ. ಅಂದರೇ ಜಾಹಿರಾತಿನ ಪ್ರಕಾರ ಬಜಾಜ್ ಡಾಮಿನಾರ್ 400 ಬೈಕ್‍ಗಳು ಗ್ಲಾಸಿ ರೆಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಬಿಡುಗಡೆಗೂ ಮುನ್ನವೇ ಬಜಾಜ್ ಆಟೋ ಡೀಲರ್‍‍ಗಳು ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಪ್ರಾರಂಭಿಸಲಾಗಿದ್ದು, ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಬಜಾಜ್ ಡೀಲರ್‍‍ನ ಬಳಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆಯೆ ಈ ಬೈಕಿನ ವಿತರಣೆಯನ್ನು ಸಹ ಡೀಲರ್‍‍ಗಳು ಪ್ರಾರಂಭಿಸಿದ್ದಾರೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜಾಜ್ ಡಾಮಿನಾರ್ 400 ಬೈಕ್‍ಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಪಡೆಸಿಲ್ಲವಾಗಿದ್ದು, ಈ ಬಾರಿ ಹೊಸ ವೈಷ್ಟ್ಯತೆಗಳು ಮತ್ತು ತಾಂತ್ರಿಕತೆಯಲ್ಲಿ ಬದಲಾವಣೆಯನ್ನು ಪಡೆದುಕೊಂಡಿದೆ. ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಹೊಸ ಫೀಚರ್ಸ್

ಪ್ರಸ್ತುತ ಇರುವ ಬೈಕಿನಲ್ಲಿ ನೀಡಲಾದ ಸ್ಕ್ರೀನ್ ಅನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಅನ್ನು ಪಡೆದುಕೊಳ್ಳಲಿದೆ. ಇಷ್ಟೆ ಅಲ್ಲದೆ ಈ ಬೈಕಿನಲ್ಲಿ ಸೆಕೆಂಡರಿ ಡಿಸ್ಪ್ಲೇ ಕೂಡಾ ಬಳಸಲಾಗಿದ್ದು, ಇದು ಫ್ಯುಯಲ್ ಟ್ಯಾಂಕ್‍ನ ಮೇಲೆ ಕಾಣಿಸಿಕೊಳ್ಳುತ್ತೆ. ಇದರಲ್ಲಿ ಗೇರ್ ಪೊಸಿಷನ್, ಟ್ರಿಪ್ ಮೀಟರ್ ಮತ್ತು ಟೈಮ್ ತೋರಿಸುತ್ತದೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 40 ಬಿಹೆಚ್‍ಪಿ ಮತ್ತು 34ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಂದರೆ ಹಿಂದಿನ ಮಾದರಿಯ ಬೈಕಿಗೆ ಹೋಲಿಸಿದರೆ 6 ಬಿಹೆಚ್‍ಪಿ ಹೆಚ್ಚಿನದಾಗಿ ಹೊಸ ಬೈಕ್ ಪಡೆದಿದೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಅಷ್ಟೆ ಅಲ್ಲದೇ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ಹೊಸ ಎಕ್ಸಾಸ್ಟ್ ಸಿಸ್ಟಂ ಅನ್ನು ನೀಡಲಾಗಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಪೋರ್ಟ್ಸ್, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ. ಜೊತೆಗೆ ಈ ಹೊಸ ಎಕ್ಸಾಸ್ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಬಜಾಜ್ ಡಾಮಿನಾರ್ 400 ಖರೀದಿ ಮೇಲೆ ಬೆಲೆ ಕಡಿತ

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಸಂಸ್ಥೆಯಲ್ಲಿನ ಜನಪ್ರಿಯ ಡಾಮಿನಾರ್ ಬೈಕ್ ಈ ಬಾರಿ ಹಲವಾರು ಬದಲಾವಣೆಗಳನ್ನು ಪಡೆದು ಇದೀಗ ಬಿಡುಗಡೆಗೊಂಡಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಮತ್ತು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Source: cartoq

Article Published On: Thursday, May 2, 2019, 15:27 [IST]
English summary
2019 Bajaj Dominar Gets Rs.4000 Price Cut Within A Months Of Launch. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+