ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

2019ರ ಆರಂಭದಲ್ಲಿ ಸಾಕಷ್ಟು ನೀರಿಕ್ಷೆಯೊಂದಿಗೆ ಹೊಸ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದ್ದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ವರ್ಷದ ಆರಂಭದಿಂದಲೇ ಭಾರೀ ನಿರಾಸೆ ಉಂಟಾಗಿದ್ದು, ವರ್ಷದ ಆರಂಭದಿಂದ ಇದುವರೆಗೂ ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡಿಲ್ಲ. ಹೀಗಾಗಿ ಸ್ಟಾಕ್ ಪ್ರಮಾಣದಲ್ಲಿ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಮೊರೆಹೋಗಿವೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಸತತ ತೈಲ ಬೆಲೆಗಳ ಏರಿಕೆ ಅಲ್ಲದೇ ವಾಹನಗಳ ನಿರ್ವಹಣಾ ವೆಚ್ಚವು ಹೆಚ್ಚುತ್ತಿದ್ದಂತೆ ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಇಳಿಕೆ ಕಂಡಿಬಂದಿದ್ದಲ್ಲದೇ ಲೋಕಸಭಾ ಚುನಾವಣೆಯಿಂದಲೂ ಕೂಡಾ ಹೊಸ ವಾಹನ ಮಾರಾಟ ಪ್ರಮಾಣವು ಹಿನ್ನಡೆ ಅನುಭವಿಸಿದ್ದು, 2019ರ ಆರಂಭದಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಗರಿಷ್ಠ ಪ್ರಮಾಣದ ನಷ್ಟ ಅನುಭವಿಸಿವೆ. ಹೀಗಾಗಿ ಹೊಸ ವಾಹನಗಳ ಮಾರಾಟದಲ್ಲಿ ಮತ್ತೆ ಚೇತರಿಕೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಜಾಜ್ ಸಂಸ್ಥೆಯು ಸ್ಟಾಕ್ ಪ್ರಮಾಣವನ್ನು ಕರಗಿಸಲು ಬಂಪರ್ ಆಫರ್ ಮೋರೆ ಹೋಗುತ್ತಿದೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಹೌದು, ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ಬಜಾಜ್ ಆಟೋ ಸಂಸ್ಥೆಯು ಕೂಡಾ ಪ್ರಸಕ್ತ ವರ್ಷದ ಬೈಕ್ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ಸ್ಟಾಕ್ ಪ್ರಮಾಣವನ್ನು ಕರಗಿಸಲು ಸಾಧ್ಯವಾಗದೇ ಹೊಸ ಬೈಕ್ ಉತ್ಪಾದನೆಗೂ ಅವಕಾಶವಿಲ್ಲದಂತಾಗಿದೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಇದಕ್ಕಾಗಿಯೇ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಪ್ರಮಾಣದ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಗರಿಷ್ಠ ಪ್ರಮಾಣದಲ್ಲಿ ಬೈಕ್ ಮಾರಾಟ ಮಾಡುವ ನೀರಿಕ್ಷೆಯ್ಲಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಹೊಸ ಆಫರ್‌ಗಳನ್ನು ಘೋಷಣೆ ಮಾಡಲು ಸಿದ್ದನಡೆಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಬಜಾಜ್ ನಿರ್ಮಾಣದ ಬಹುತೇಕ ಬೈಕ್ ಮಾದರಿಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಇದಲ್ಲದೇ ಮುಂದಿನ 2021ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಅಷ್ಟರಲ್ಲೇ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳನ್ನು ಸ್ಥಗಿತಗೊಳಿಸಿ ಹೊಸ ನಿಯಮದಂತೆ ಹೊಸ ವಾಹನಗಳ ಮಾರಾಟಕ್ಕೆ ಚಾಲನೆ ನೀಡಬೇಕಿದೆ. ಹೀಗಿರುವಾಗ ಮಾರಾಟವಾಗದೆ ನಿಂತಿರುವ ಲಕ್ಷಾಂತರ ಬಿಎಸ್-4 ಬೈಕ್‌ಗಳನ್ನು ಮಾರಾಟಮಾಡಲೇಬೇಕಿರುವ ಬಜಾಜ್ ಸಂಸ್ಥೆಯು, ಆಫರ್‌ಗಳ ಹೊಳೆಯನ್ನೇ ಹರಿಸುವುದರಲ್ಲಿ ಎರಡು ಮಾತಿಲ್ಲ.

ಈ ಕುರಿತಂತೆ ಮಾಧ್ಯಮ ಸಂಸ್ಥೆಗಳೊಂದಿಗೆ ಮಾತನಾಡಿರುವ ಬಜಾಜ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ನಿಗದಿತ ಅವಧಿಯಲ್ಲಿ ಮಾರಾಟವಾಗದ ಬೈಕ್ ಸ್ಟಾಕ್ ಪ್ರಮಾಣವು ದಿನಗಳಿದಂತೆ ಆರ್ಥಿಕವಾಗಿ ಹೊರೆಯಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ನಾವು ಆಫರ್‌ಗಳ ಮೂಲಕ ಸ್ಟಾಕ್ ಪ್ರಮಾಣವನ್ನು ಕರಗಿಸಬೇಕಿದೆ ಎಂದಿದ್ದಾರೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಇದರಿಂದ ಮುಂದಿನ ವಾರದಿಂದ ಆಯ್ದ ಬಜಾಜ್ ಬೈಕ್‌ಗಳ ಮೇಲೆ ಆಫರ್‌ಗಳ ಸುರಿಮಳೆಯೇ ಕಾದಿದೆ ಎನ್ನಲಾಗುತ್ತಿದ್ದು, ಬಿಎಸ್-6 ಎಂಜಿನ್ ಅಪ್‌ಡೇಟ್ ಮಾಡುತ್ತಿರುವ ಬಜಾಜ್ ಸಂಸ್ಥೆಗೆ ಆಫರ್ ನೀಡದೆ ಬೇರೆ ವಿಧಿಯೇ ಇಲ್ಲ. ಒಟ್ಟಿನಲ್ಲಿ ಹೊಸ ಬೈಕ್ ಖರೀದಿಸುವ ವಾಹನ ಸವಾರರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿ ದಾಖಲೆಯ ಕುಸಿತವಾಗಿದ್ದು, ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಸಂಸ್ಥೆಗೂ ಕೂಡಾ ಭಾರೀ ಹಿನ್ನಡೆಯಾಗಿದೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

2001ರ ತನಂತರ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿರುವ ಹೋಂಡಾ ಸಂಸ್ಥೆಯು 19 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸ್ಕೂಟರ್ ಉತ್ಪಾದನೆಯನ್ನು ಶೇ. 15ರಿಂದ ಶೇ.20ರಷ್ಟು ಕಡಿತಗೊಳಿಸಿದ್ದು, ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿರುವುದು ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸ್ಟಾಕ್ ಹೊರೆಯಾಗಿ ಪರಿಣಮಿಸಿದೆ.

ಹೊಸ ಬೈಕ್ ಮಾರಾಟದಲ್ಲಿ ಪೈಪೋಟಿ- ಬಜಾಜ್‌ನಿಂದ ಆಫರ್‌ಗಳ ಸುರಿಮಳೆ..!?

ಹೀಗಾಗಿ ನಿಗದಿತ ಮಟ್ಟದಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸಾಧಿಸಲು ಸಾಧ್ಯವಾಗದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಆಫರ್‌ಗಳ ಮೂಲಕ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳುತ್ತಿದ್ದು, ಕೆಲವು ದಿನಗಳ ಮಟ್ಟಿಗೆ ಹೊಸ ವಾಹನಗಳನ್ನು ಉತ್ಪಾದನೆ ಮಾಡದಿರಲು ನಿರ್ಧರಿಸಿ ಉತ್ಪಾದನಾ ಘಟಕಗಳನ್ನೇ ಬಂದ್ ಮಾಡಿವೆ.

Article Published On: Monday, July 1, 2019, 14:15 [IST]
English summary
Bajaj Auto Ready To Trigger Price War — A Train Of Consequences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+