2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಬಜಾಜ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿದ್ದು, 2020ರ ಜನವರಿ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಚೇತಕ್ ಎಲೆಕ್ಟ್ರಿಕ್ ಮಾದರಿಯ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ "ಚೇತಕ್ ಎಲೆಕ್ಟ್ರಿಕ್ ಯಾತ್ರೆ"ಯನ್ನು ಪೂರ್ಣಗೊಳಿಸಿರುವ ಬಜಾಜ್ ಸಂಸ್ಥೆಯು ಬರೋಬ್ಬರಿ 3 ಸಾವಿರ ಕಿ.ಮೀ ದೂರ ಕ್ರಮಿಸಿದ್ದು, ದೆಹಲಿಯಿಂದ ಆರಂಭಗೊಂಡಿದ್ದ ಚೇತಕ್ ಎಲೆಕ್ಟ್ರಿಕ್ ಯಾತ್ರೆಯು ಆಗ್ರಾ, ಜೈಪುರ್, ಉದಯಪುರ, ಅಹಮದಾಬಾದ್, ಮುಂಬೈ, ಪಣಜಿ ಮೂಲಕ ಅಂತಿಮವಾಗಿ ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕಕ್ಕೆ ಬಂದು ತಲುಪುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಎಲೆಕ್ಟ್ರಕ್ ಸ್ಕೂಟರ್ ಮಾದರಿಯನ್ನು ಅಭಿವೃದ್ದಿಪಡಿಸಿರುವುದಾಗಿ ಭರವಸೆ ನೀಡಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಬಜಾಜ್ ಆಟೋ ಸಂಸ್ಥೆಯು 2020ರ ಜನವರಿ ಅಂತ್ಯಕ್ಕೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಸ್ಕೂಟರ್ ಬಿಡುಗಡೆಗೂ ಮುನ್ನ ಜನವರಿ ಆರಂಭದಲ್ಲಿ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಲಿದೆ ಎನ್ನಲಾಗಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಸದ್ಯಕ್ಕೆ ಬಹಿರಂಗಗೊಂಡಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲವು ಸುದ್ದಿ ಮೂಲಗಳ ಪ್ರಕಾರ ಪ್ರೀಮಿಯಂ ಫೀಚರ್ಸ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.1.05 ಲಕ್ಷದಿಂದ ರೂ.1.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ಮೆಟಲ್ ಬಾಡಿ ಪ್ಯಾನೆಲ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಕೀ ಲೆಸ್ ಸ್ಟಾರ್ಟ್, ಮಲ್ಟಿ ಸ್ಪೋಕ್ ವೀಲ್ಹ್‌ಗಳು, ಪ್ರೀಮಿಯಂ ಟಿಪಿಎಫ್ ಯುನಿಟ್‌ನಂತಹ ಹಲವು ಸುಧಾರಿತ ಸೌಲಭ್ಯಗಳನ್ನು ನೀಡಿದ್ದು, ಜೊತೆಗೆ ರಿವರ್ಸ್ ಮೋಡ್ ಸೌಲಭ್ಯವನ್ನು ನೀಡಿರುವುದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಲಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಪ್ರೇರಣೆಯ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋ‌ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 75ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 70 ಕಿ.ಮೀ ಗರಿಷ್ಠ ಮೈಲೇಜ್ ಒದಗಿಸಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದ್ರೆ, ಹೊಸ ಸ್ಕೂಟರ್‌ನಲ್ಲಿ ಕೀ ಲೆಸ್ ಸ್ಟಾರ್ಟ್ ಸೌಲಭ್ಯ ನೀಡಿರುವ ಬಜಾಜ್ ಸಂಸ್ಥೆಯು ಸ್ಕೂಟರ್ ನಿರ್ವಹಣೆಗಾಗಿ ಪ್ರತ್ಯೇತ ಆ್ಯಪ್ ನೀಡಲಿದ್ದು, ಆ್ಯಪ್ ಮೂಲಕ ಹೊಸ ಸ್ಕೂಟರ್‌ನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿರ್ವಹಣೆ ಮಾಡಬಹುದಾಗಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಸರ್ವೀಸ್ ಮತ್ತು ವಾರಂಟಿ

ಚೇತರ್ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದ್ದು, ಬಜಾಜ್ ಸಂಸ್ಥೆಯು 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ. ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ.

2020ರ ಜನವರಿಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್..!

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ ಸುರಕ್ಷಾ ಭದ್ರತೆಗಳು ಕೂಡಾ ಇರಲಿದ್ದು, ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳಿದ್ದು, ಹೊಸ ಸ್ಕೂಟರಿನ ಬೆಲೆ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
English summary
Bajaj Chetak e-scooter bookings to open in January 2020. Read in Kannada.
Story first published: Saturday, November 16, 2019, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more