ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಬಜಾಜ್ ಆಟೋ ಸಂಸ್ಥೆಯು 2020ರ ಜನವರಿ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಮುಂದಿನ ತಿಂಗಳು ನವೆಂಬರ್ ಕೊನೆಯಲ್ಲಿ ಸ್ಕೂಟರ್ ಖರೀದಿಗೆ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸುವ ಸುಳಿವು ನೀಡಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸದ್ಯ ಅನಾವರಣಗೊಳಿಸಿ ಮತ್ತಷ್ಟು ತಾಂತ್ರಿಕ ಅಂಶಗಳ ಬದಲಾವಣೆವಣೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಂದುವರಿಸಿರುವ ಬಜಾಜ್ ಸಂಸ್ಥೆಯು, ಹೊಸ ಸ್ಕೂಟರ್ ಅನ್ನು ಮೊದಲ ಹಂತವಾಗಿ ಅಂಗಸಂಸ್ಥೆಯಾದ ಕೆಟಿಎಂ ಡೀಲರ್ಸ್‌ಗಳಲ್ಲಿ ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದೆ.

ಹೀಗಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮೊದಲ ಹಂತದಲ್ಲಿ ಮೆಟ್ರೊ ನಗರಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿದ್ದು, ತದನಂತರ ಚಾರ್ಜಿಂಗ್ ಸ್ಟೆಷನ್‌ಗಳ ಸಂಖ್ಯೆ ಹೆಚ್ಚಳ ನಂತರವಷ್ಟೇ ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲೂ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಲಭ್ಯವಿರಲಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಸದ್ಯಕ್ಕೆ ಅನಾವರಣಗೊಳಿಸಲಾಗಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲವು ಸುದ್ದಿ ಮೂಲಗಳ ಪ್ರಕಾರ ರೂ.1.05 ಲಕ್ಷದಿಂದ ರೂ.1.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ತುಸು ದುಬಾರಿಯಾಗಿರಲಿದೆ ಎನ್ನಲಾಗಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನ ಮಾರುಕಟ್ಟೆಯ ಅಧ್ಯಯನ ನಡೆಲಿಸಲಿರುವ ಬಜಾಜ್ ಸಂಸ್ಥೆಯು ಬೆಂಗಳೂರಿನ ಪ್ರೊ ಬೈಕಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರ ಸಲಹೆಗಳನ್ನು ತಿಳಿದುಕೊಂಡು ಬಿಡುಗಡೆ ವೇಳೆಗೆ ಮತ್ತಷ್ಟು ಬದಲಾವಣೆ ಮಾಡುವ ಸುಳಿವು ನೀಡಿದ್ದು, ಇದರಿಂದಾಗಿ ಅನಾವರಣಗೊಳಿಸಲಾದ ಸ್ಕೂಟರ್ ವೈಶಿಷ್ಟ್ಯತೆಗಳಲ್ಲಿ ಬಿಡುಗಡೆ ವೇಳೆಗೆ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಅನಾವರಣಗೊಳಿಸಲಾಗಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಮಹಾ ಫ್ಯಾಸಿನೊ ಸ್ಟೈಲ್ ಹೊಂದಿದ್ದರು ಫ್ಯಾಸಿನೊಗಿಂತಲೂ ವಿಭಿನ್ನ ತಾಂತ್ರಿಕ ಅಂಶಗಳನ್ನು ಪಡೆದಿರುವ ಹೊಸ ಸ್ಕೂಟರ್ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ಮೆಟಲ್ ಬಾಡಿ ಪ್ಯಾನೆಲ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಕೀ ಲೆಸ್ ಸ್ಟಾರ್ಟ್, ಪ್ರೀಮಿಯಂ ಟಿಪಿಎಫ್ ಯುನಿಟ್‌ನಂತಹ ಹಲವು ಸುಧಾರಿತ ಸೌಲಭ್ಯಗಳನ್ನು ನೀಡಿದ್ದು, ಹೊಸ ಸ್ಕೂಟರ್‌ನಲ್ಲಿರುವ ಬ್ಯಾಟರಿ ಸೌಲಭ್ಯ ಕೂಡಾ ಗಮನಸೆಳೆಯಲಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಪ್ರೇರಣೆಯ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋ‌ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಗರಿಷ್ಠ ಮೈಲೇಜ್ ಒದಗಿಸಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಆದರೆ ಹೊಸ ಸ್ಕೂಟರ್‌ನಲ್ಲಿ ಸದ್ಯಕ್ಕೆ ಇನ್ ಬಿಲ್ಟ್ ಚಾರ್ಜರ್ ಸೌಲಭ್ಯವನ್ನು ಮಾತ್ರವೇ ನೀಡುತ್ತಿರುವ ಬಜಾಜ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ನೀಡುವ ಸುಳಿವು ನೀಡಿದೆ.

ನವೆಂಬರ್ ಅಂತ್ಯಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ..!

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದ್ರೆ, ಹೊಸ ಸ್ಕೂಟರ್‌ನಲ್ಲಿ ಕೀ ಲೆಸ್ ಸ್ಟಾರ್ಟ್ ಸೌಲಭ್ಯ ನೀಡಿರುವ ಬಜಾಜ್ ಸಂಸ್ಥೆಯು ಸ್ಕೂಟರ್ ನಿರ್ವಹಣೆಗಾಗಿ ಪ್ರತ್ಯೇತ ಆ್ಯಪ್ ನೀಡಲಿದ್ದು, ಆ್ಯಪ್ ಮೂಲಕ ಹೊಸ ಸ್ಕೂಟರ್‌ನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ ಸುರಕ್ಷಾ ಭದ್ರತೆಗಳು ಕೂಡಾ ಇರಲಿದ್ದು, ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳಿರಲಿವೆ.

Source: Bikewale

Article Published On: Wednesday, October 30, 2019, 11:02 [IST]
English summary
According to media report, Bajaj Chatak electric scooter online bookings will begin from next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+