ಅತಿ ಕಡಿಮೆ ಬೆಲೆಯಲ್ಲಿ ಬಜಾಜ್ ಹೊಸ ಸಿಟಿ 110 ಬಿಡುಗಡೆ
ಬಜಾಜ್ ಆಟೋ ಸಂಸ್ಥೆಯು ಮಾರುಕಟ್ಟೆಯ ಬೇಡಿಕೆ ಅನುಸಾರವಾಗಿ ತನ್ನ ಜನಪ್ರಿಯ ಬೈಕ್ ಆವೃತ್ತಿಯಾಗಿರುವ ಸಿಟಿ100 ಎಂಟ್ರಿ ಲೆವೆಲ್ ಮಾದರಿಯಲ್ಲೇ ಹೊಚ್ಚ ಹೊಸ ಸಿಟಿ110 ಆವೃತ್ತಿಯೊಂದನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಸಿಟಿ 110 ಮಾದರಿಯು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಎಂಟ್ರಿ ಲೆವೆಲ್ ಕಮ್ಯುಟರ್ ಬೈಕ್ ಮಾರಾಟದಲ್ಲಿ ಈಗಾಗಲೇ ಸಿಟಿ100 ಮಾದರಿಯು ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಬಿಡುಗಡೆ ಮಾಡಲಾಗಿರುವ ಸಿಟಿ110 ಮಾದರಿಯ ಹೊಸ ಎಂಜಿನ್‌ನೊಂದಿಗೆ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ರೆಡಿಯಾನ್ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಬೆಲೆ ವಿಚಾರವಾಗಿ ಮತ್ತಷ್ಟು ಸದ್ದುಮಾಡಲಿದೆ.
ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯಲ್ಲಿ ಹೊಸ ಸಿಟಿ110 ಬೈಕ್ ಮಾದರಿಯು ಖರೀದಿಗೆ ಲಭ್ಯವಿದ್ದು, ಡಿಸ್ಕವರ್ ಮತ್ತು ಪ್ಲ್ಯಾಟಿನಾ ಬೈಕ್ ಮಾದರಿಗಳಿಗಾಗಿ ಅಭಿವೃದ್ಧಿಪಡಿಸಲಾದ ಹೊಸ ಎಂಜಿನ್ ಮಾದರಿಯನ್ನೇ ಸಿಟಿ110 ಬೈಕ್‌ನಲ್ಲಿ ಜೋಡಿಸಲಾಗಿದೆ.

ಬೈಕ್ ಬೆಲೆ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)
ಕಿಕ್ ಸ್ಟಾರ್ಟ್ ಸಿಟಿ 110 ಮಾದರಿಯು ರೂ.33,997 ಕ್ಕೆ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು ರೂ. 44,352 ಕ್ಕೆ ಖರೀದಿಸಬಹುದಾಗಿದ್ದು, ಎಂಟ್ರಿ ಲೆವಲ್ ಬೈಕ್ ಮಾದರಿಗಳಲ್ಲೇ ಇದು ಅತಿ ಕಡಿಮೆ ಬೆಲೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಹೊಸ ಸಿಟಿ110 ಬೈಕ್ ಮಾದರಿಯು 115ಸಿಸಿ ಎಂಜಿನ್ ಪಡೆದುಕೊಂಡಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಜೊತೆ ಆಲ್ ಡೌನ್ ಶಿಫ್ಟ್ ಪ್ಯಾಟರ್ನ್ ಪ್ರೇರಣೆಯೊಂದಿಗೆ ಗರಿಷ್ಠ 8.6-ಬಿಎಚ್‌ಪಿ ಮತ್ತು 9.81-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೀಗಾಗಿ ಇದು ಡಿಸ್ಕವರ್ ಮತ್ತು ಪ್ಲ್ಯಾಟಿನಾ ಬೈಕ್‌ಗಳಿಗೆ ಸಮನಾಗಿರಲಿದ್ದು, ವಿಶಿಷ್ಟ್ಯತೆ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಇನ್ನುಳಿದಂತೆ ಹೊಸ ಬೈಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಿಂಬದಿಯ ಸವಾರರಿಗೆ ಅನುಕೂಲವಾಗುವಂತೆ ವಿಸ್ತರಿಸಿದ ಸೀಟು, ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್, ಕಪ್ಪು ಬಣ್ಣ ಹೊಂದಿರುವ ಎಂಜಿನ್ ಹೊರಭಾಗ, ರಬ್ಬರ್ ಮಿರರ್ ಕವರ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.
ಹಾಗೆಯೇ ಹೊಸ ಸಿಟಿ110 ಬೈಕ್ ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಮ್ಯಾಟೆ ಒಲಿವ್ ಗ್ರೀನ್, ಎಬೊನಿ ಬ್ಲ್ಯಾಕ್ ಮತ್ತು ಗ್ರಾಸ್ ಫ್ಲೆಮ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಇದರ ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಬದಿ ಚಕ್ರದಲ್ಲಿ ಸಿಬಿಎಸ್ ಬ್ರೇಕಿಂಗ್ ಮತ್ತು ಹಿಂಬದಿ ಚಕ್ರದಲ್ಲಿ ಡ್ರಮ್ ಬ್ರೇಕ್ ಜೋಡಿಸಲಾಗಿದೆ.

ಈಗಾಗಲೇ ಹೊಸ ಬೈಕ್ ಅಧಿಕೃತ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಇಂದಿನಿಂದಲೇ ಆಸಕ್ತ ಗ್ರಾಹಕರು ಹೊಸ ಬೈಕ್ ಖರೀದಿಸಬಹುದಾಗಿದೆ. ಇದರಲ್ಲಿ ಕಿಕ್ ಸ್ಟಾರ್ಟ್ ಮಾದರಿಗಿಂತ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು ಖರೀದಿಗೆ ಉತ್ತಮವಾಗಿದ್ದು, ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದೆ.

ಈ ಮೂಲಕ ಡಿಸ್ಕವರ್ 110 ಬೈಕಿಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಸಿಟಿ110 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಹೀರೋ ಸ್ಪ್ಲೆಂಡರ್ ಪ್ಲಸ್, ಟಿವಿಎಸ್ ರೆಡಿಯಾನ್, ಹೀರೋ ಎಚ್ಎಫ್ ಡಿಲಕ್ಸ್ ಮತ್ತು ಟಿವಿಎಸ್ ಸ್ಪೋರ್ಟ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.


Click it and Unblock the Notifications