ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಂಬಂಧ ಜಿಎಸ್‌ಟಿ ದರಗಳಲ್ಲಿ ಭಾರೀ ಪ್ರಮಾಣದ ಇಳಿಕೆ ಮಾಡಿರುವ ಬೆನ್ನಲ್ಲೆೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಸೆಸ್ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಆವೃತ್ತಿಗಳ ಮೂಲ ಬೆಲೆಯಲ್ಲಿ ಏರಿಕೆ ಮಾಡಿವೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಬಜಾಜ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಪ್ಲಾಟಿನಾ, ಪಲ್ಸರ್ ಮತ್ತು ಡೊಮಿನಾರ್ 400 ಬೈಕ್‌ಗಳಲ್ಲಿ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಎಕ್ಸ್‌ಶೋರೂಂ ಬೆಲೆಗಳಿಗೆ ಅನುಗುಣವಾಗಿ ರೂ. 479 ರಿಂದ ರೂ.6 ಸಾವಿರ ತನಕ ಏರಿಕೆಯಾಗಿದ್ದು, ಬೈಕ್ ಖರೀದಿ ಪ್ರಕ್ರಿಯೆ ಇದೀಗ ಮತ್ತಷ್ಟು ದುಬಾರಿಯಾಗಲಿದೆ. ಇದರಲ್ಲಿ ಡೊಮಿನಾರ್ 400 ಬೈಕ್ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಏರಿಕೆ ಮಾಡಲಾಗಿದ್ದು, ಎಂಟ್ರಿ ಲೆವಲ್ ಪ್ಲಾಟಿನಾ ಬೈಕ್ ಕೂಡಾ ಇದೀಗ ದುಬಾರಿಯಾಗಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಹೆಚ್ಚುವರಿ ಸೆಸ್ ಜೊತೆಗೆ ಬೀಡಿಭಾಗಗಳ ಆಮದು ಮೇಲೆ ಸುಂಕ ಕೂಡಾ ಹೆಚ್ಚಳವಾಗಿರುವುದು ಉತ್ಪಾದನಾ ಖರ್ಚು ಹೆಚ್ಚಳವಾಗಲು ಮೂಲ ಕಾರಣವಾಗಿದ್ದು, ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳ ನೀತಿಯನ್ನು ಅನುಸರಿಸುತ್ತಿವೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಹೀಗಾಗಿ ಬಜಾಜ್ ಕೂಡಾ ಪ್ಲಾಟಿನಾ ಬೆಲೆಯಲ್ಲಿ ರೂ.1 ಸಾವಿರ ಹೆಚ್ಚಳ ಮಾಡಿದ್ದಲ್ಲಿ ಮತ್ತೊಂದು ಜನಪ್ರಿಯ ಆವೃತ್ತಿಯಾದ ಪಲ್ಸರ್ ಸರಣಿಯಲ್ಲಿ 150 ಆವೃತ್ತಿಯು ಆರಂಭಿಕವಾಗಿ ರೂ.479 ಮತ್ತು 220 ಆವೃತ್ತಿಯು ರೂ.2980 ಹೆಚ್ಚುವರಿ ಬೆಲೆ ಪಡೆದುಕೊಂಡಿವೆ. ಹಾಗೆಯೇ ಪರ್ಫಾಮೆನ್ಸ್ ಆವೃತ್ತಿಯಾದ ಡೋಮಿನಾರ್ ಬೆಲೆಯಲ್ಲಿ ರೂ.6 ಸಾವಿರ ಬೆಲೆ ಹೆಚ್ಚಳ ಮಾಡಲಾಗಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಹೊಸ ಬೆಲೆಗಳು ಅಗಸ್ಟ್ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದ್ದು, ಇನ್ನು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಸೆಪ್ಟೆಂಬರ್ 1ರಿಂದ ಬೆಲೆ ಹೆಚ್ಚಳ ಮಾಡುವುದಾಗಿ ಮಾಧ್ಯಮ ಪ್ರಕಟನೆ ಹೊರಡಿಸಿವೆ. ವಾಹನಗಳ ಬೆಲೆ ಮತ್ತು ಬೇಡಿಕೆಯ ಆಧಾರದ ಮೇಲೆ ಶೇ.2ರಿಂದ ಶೇ.4ರಷ್ಟು ಏರಿಕೆ ಮಾಡಲಾಗುತ್ತಿದ್ದು, ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವ ಸಂಬಂಧ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಇಂತಹ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಇನ್ನು ಬಜಾಜ್ ಆಟೋ ಸಂಸ್ಥೆಯು ಇದೇ ವರ್ಷದ ಏಪ್ರಿಲ್‍ನಲ್ಲಿ ತಮ್ಮ ಜನಪ್ರಿಯ ಡೊಮಿನಾರ್ 400 ಬೈಕಿಗೆ ಹಲವಾರು ಬದಲಾವಣೆಗಳೊಂದಿಗೆ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ ಸಮಯದಲ್ಲಿ ಬಜಾಜ್ ಸಂಸ್ಥೆಯು ಡೊಮಿನರ್ 400 ಬೈಕಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.74 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಇದೀಗ ಈ ಬೈಕಿನ ಬೆಲೆಯು ರೂ.1.80 ಲಕ್ಷಕ್ಕೆ ಏರಿಕೆಯಾಗಿದ್ದು, ಇದು ಒಂದೇ ವರ್ಷದಲ್ಲಿ ಎರಡನೇ ಬಾರಿ ಬೆಲೆ ಏರಿಕೆಯಾಗಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಬಜಾಜ್ ಡೊನಿನಾರ್ 400 ಬೈಕ್‍ಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಪಡೆದಿಲ್ಲವಾದರೂ, ಈ ಬಾರಿ ಹೊಸ ವೈಷ್ಟ್ಯತೆಗಳು ಮತ್ತು ತಾಂತ್ರಿಕವಾಗಿ ಕೆಲವು ಹೊಸ ಬದಲಾವಣೆಯನ್ನು ಪಡೆದುಕೊಂಡಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಕೇಂದ್ರ ಸರ್ಕಾರವು 2020ರ ಏಪ್ರಿಲ್ 1ರ ನಂತರ ಜಾರಿಗೆ ತರಲು ನಿರ್ಧರಿಸಿರುವ ಬಿಎಸ್-6 ಎಂಜಿನ್ ಕಡ್ಡಾಯ ಅಳವಡಿಕೆಯ ನಿಯಮವನ್ನು ಈಗಾಗಲೇ ಡೊಮಿನಾರ್ 400 ಬೈಕಿನಲ್ಲಿ ಅಳವಡಿಸಲಾಗಿದ್ದು, ಪರ್ಫಾಮೆನ್ಸ್ ಮತ್ತಷ್ಟು ಸುಧಾರಣೆ ಕಂಡಿದೆ.

ಕೇಂದ್ರದಿಂದ ಹೊಸ ನೀತಿ ಜಾರಿ- ಬಜಾಜ್ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ..!

ಇದೀಗ ಬಜಾಜ್ ಸಂಸ್ಥೆಯು ಡೊಮಿನಾರ್ 400 ನಂತರ ಇನ್ನುಳಿದ ಬೈಕ್ ಮಾದರಿಗಳನ್ನು ಸಹ ಬಿಎಸ್-6 ಎಂಜಿನ್‌ಗೆ ಉನ್ನತಿಕರಿಸುವ ಯೋಜನೆಗೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಬಿಎಸ್-6 ಪಲ್ಸರ್, ಪ್ಲಾಟಿನಾ ಬೈಕ್‌ಗಳು ಸಹ ಮಾರುಕಟ್ಟೆ ಪ್ರವೇಶಿಸಲಿವೆ.

Article Published On: Thursday, August 1, 2019, 11:23 [IST]
English summary
Bajaj Auto has increased prices. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+