ಪಲ್ಸರ್ 125 ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗಿತಗೊಳಿಸಿದ ಬಜಾಜ್
ಆಟೋ ಮಾರುಕಟ್ಟೆಯಲ್ಲಿ ಸದ್ಯ ಗ್ರಾಹಕರು ಹೆಚ್ಚಿನ ಮಟ್ಟದ ಸುರಕ್ಷತೆಯುಳ್ಳ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದು, ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿವೆ.

ಬಜಾಜ್ ಸಹ ತನ್ನ ಜನಪ್ರಿಯ ಪಲ್ಸರ್ ಬೈಕ್ ಸರಣಿ ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದ್ದು, 125 ಪಲ್ಸರ್ ಡ್ರಮ್ ಬೈಕ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಶೇ.95 ಗ್ರಾಹಕರು ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿರುವ ಬೈಕ್ ಮಾದರಿಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಹಕರಿಂದಲೇ ಬೇಡಿಕೆ ಇಲ್ಲದ ಹಿನ್ನಲೆಯಲ್ಲಿ ಡಿಸ್ಕ್ ಬ್ರೇಕ್ ಮಾದರಿಯನ್ನು ಹೊರತುಪಡಿಸಿ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ.

ಪಲ್ಸರ್ 125 ನಿಯೋ ಆವೃತ್ತಿಯಲ್ಲಿ ಸದ್ಯ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಗಳು ಮಾರಾಟ ಲಭ್ಯವಿದ್ದು, ಡ್ರಮ್ ಬ್ರೇಕ್ ಆವೃತ್ತಿಗಿಂತ ಡಿಸ್ಕ್ ಬ್ರೇಕ್ ಆವೃತ್ತಿಯು ಕೇವಲ ರೂ.3 ಸಾವಿರ ಮಾತ್ರವೇ ಹೆಚ್ಚುವರಿ ಬೆಲೆ ಹೊಂದಿದೆ.

ಈ ಹಿನ್ನಲೆಯಲ್ಲಿ ಶೇ.95 ಗ್ರಾಹಕರು ಡಿಸ್ಕ್ ಬ್ರೇಕ್ ಆವೃತ್ತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗಿತಗೊಳಿಸುವ ಸೂಚನೆ ನೀಡಿದೆ. ಇದರಿಂದ ಡ್ರಮ್ ಬ್ರೇಕ್ ಉತ್ಪಾದನೆಯನ್ನು ಈಗಾಗಲೇ ಬಂದ್ ಮಾಡಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಬೈಕ್ ಉತ್ಪಾದನಾ ಸಂಸ್ಥೆಗಳು 110ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಗಳನ್ನು ನೀಡಲಾಗುತ್ತಿದ್ದು, 125ಸಿಸಿ ಬೈಕ್ ಮತ್ತು ಸ್ಕೂಟರ್ ಕಡ್ಡಾಯವಾಗಿ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಹೀಗಿರುವಾಗ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗತಗೊಳಿಸಲು ನಿರ್ಧರಿಸಿರುವ ಬಜಾಜ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಡಿಸ್ಕ್ ಬ್ರೇಕ್ ತಂತ್ರಜ್ಞಾನ ಪ್ರೇರಿತ ಬೈಕ್ ಮಾದರಿಯ ಮಾರಾಟದ ಮೇಲೆಯೇ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ಪಲ್ಸರ್ 125 ನಿಯೋ ಬೈಕ್ ಮಾದರಿಯು ಆನ್ ರೋಡ್ ಪ್ರಕಾರ ರೂ.70,939(ಡ್ರಮ್ ಬ್ರೇಕ್ ಮಾದರಿ) ಮತ್ತು ರೂ.73,706 (ಡಿಸ್ಕ್ ಬ್ರೇಕ್ ಮಾದರಿ) ಬೆಲೆ ಹೊಂದಿದ್ದು, 124.4-ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ನೊಂದಿಗೆ 12-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 62ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು. ಜೊತೆಗೆ 125 ಸಿಸಿ ಬೈಕ್ ವಿಭಾಗದಲ್ಲೇ ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಪಲ್ಸರ್ 125 ಬೈಕ್ ಮಾದರಿಯು ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿದೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಇನ್ನು ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಬಜಾಜ್ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಸುಧಾರಿತ ತಂತ್ರಜ್ಞಾನದೊಂದಿಗೆ ಬಿಎಸ್-6 ಬೈಕ್ ಮಾರಾಟಕ್ಕೆ ಸಿದ್ದವಾಗುತ್ತಿವೆ.
MOST READ: ಡಿ.1ರಿಂದ ಕಡ್ಡಾಯವಾಗಲಿರುವ ಫಾಸ್ಟ್‌ಟ್ಯಾಗ್ ಈಗಲೇ ಉಚಿತವಾಗಿ ಪಡೆಯಿರಿ..!

2020ರ ಮಾರ್ಚ್ ಹೊತ್ತಿಗೆ ಅನೇಕ ವಾಹನಗಳು ಬಿಎಸ್-6 ನಿಯಮದೊಂದಿಗೆ ಮಾರಾಟಕ್ಕೆ ಲಭ್ಯವಾಗಲಿದ್ದು, ಹೊಸ ನಿಯಮ ಜಾರಿಯಿಂದಾಗಿ ಮಾಲಿನ್ಯ ಹೊರಸೂಸುವಿಕೆಯಲ್ಲಿ ಭಾರೀ ಸುಧಾರಣೆಯಾಗಿರುವ ಹೊಸ ಎಂಜಿನ್‌ಗಳು ದುಬಾರಿ ಬೆಲೆ ಪಡೆದುಕೊಳ್ಳಲಿವೆ.


Click it and Unblock the Notifications








