ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಪಲ್ಸರ್ 125 ಬೈಕ್
ನಮಗೆಲ್ಲರಿಗು ತಿಳಿದಿರುವ ಹಾಗೆ ಬಜಾಜ್ ಆಟೋ ಸಂಸ್ಥೆಯು 125ಸಿಸಿ ಪಲಸ್ರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾದುವ ಯೋಜನೆಯ ಬಗ್ಗೆ ತಿಳಿದೇ ಇದೆ. ಆದರೆ ಅಂತರ್ಜಾಲದಲ್ಲಿ ಹಲಾವ್ರು ಭಾರತದಲ್ಲಿ ಬಿಡುಗಡೆಯಾಗಲಿರುವ 125ಸಿಸಿ ಪಲ್ಸರ್ ಬೈಕ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಪಲ್ಸರ್ 125 ಬೈಕ್ ಎಂದು ತಿಳಿದಿದ್ದಾರೆ.

ವಿದೇಶಿ ಮಾರುಕಟ್ಟೆಯಲ್ಲಿ ಪಲ್ಸರ್ ಎನ್ಎಸ್ ಸರಣಿಯಲ್ಲಿ ಬಿಡುಗಡೆಯಾಗುವ ಬೈಕ್‍ಗಳು ಹೆಚ್ಚಿನ ಜನಪ್ರೀಯತೆಯನ್ನು ಪಡೆಯುತ್ತಿದ್ದು, ಎನ್‍ಎಸ್ ಬ್ರ್ಯಾಂಡ್ ಅಲ್ಲಿ ಹೆಚ್ಚಿನ ಜನಪ್ರೀಯತೆಯನ್ನ ಪಡೆದಿದೆ. ಆದರೆ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಪಲ್ಸರ್ ಎಂದರೆಯೆ ಒಂದು ಬ್ರ್ಯಾಂಡ್ ಎನ್ನುವ ಭಾವನೆ ಇಲ್ಲಿದೆ. ಆದುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎನ್ಎಸ್ 125 ಅಲ್ಲದೆಯೆ ಸಾಧಾರಣ ಪಲ್ಸರ್ 125 ಬೈಕ್ ಆಗಿ ಬಿಡುಗಡೆಯಾಗಲಿದೆ.

ಮಾರುಕಟ್ಟೆಯಲ್ಲಿ ಹಲವಾರು ಹೊಸ ನಿಯಮಗಳು ಬರುತ್ತಿರುವ ಕಾರಣ ಹಲವಾರು ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಅಧಿಕ ಸಾಮರ್ಥ ಇರುವ ಬೈಕ್‍ಗಳನ್ನು ತಯಾರು ಮಾಡುವುದರ ಹೊರತಾಗಿ ಕಡಿಮೆ ಸಮಾರ್ಥ್ಯವಿರುವ ಬೈಕ್‍ಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ. ಅವುಗಳಲ್ಲಿ ಬಜಾಜ್ ಸಂಸ್ಥೆಯು ಕೂಡಾ ಒಂದಾಗಿದ್ದು, ಇದೇ ತಿಂಗಳಿನಲ್ಲಿ ಸಂಸ್ಥೆಯು ಮಾರುಕಟ್ಟೆಗೆ ತಮ್ಮ ಪಲ್ಸರ್ 125 ಬೈಕ್ ಅನ್ನು ಬಿಡಗಡೆ ಮಾಡಲಿದೆ.

18ವರ್ಷದ ನಂತರ ಬಜಾಜ್ ಸಂಸ್ಥೆಯು 125ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ ಅಂತಾನೇ ಹೇಳ್ಬೋದು. ಬಜಾಜ್ ಸಂಸ್ಥೆಯು ಏಕೆ ಕಡಿಮೆ ಸಾಮರ್ಥ್ಯದ ಬೈಕ್ ತಯಾರಿಸಲು ಮುಂದಾಗಿದೆ ಎಂಬುದಕ್ಕೆ ಕಾರಣವೆಂದರೆ ನಿಯಂತ್ರಣ ಬದಲಾವಣೆಗಳು ವಸ್ತುಗಳನ್ನು ದುಬಾರಿಯನ್ನಾಗಿ ಮಾಡುತ್ತಿದೆ.

ಮೊದಲಿಗೆ ಎಬಿಎಸ್ ಕಾಯ್ದೆ, ನಂತರ ವಿಮೆ ಹಣದಲ್ಲಿ ಏರಿಕೆ ಮತ್ತು ಇದೀಗ ಕೊನೆಯದಾಗಿ ಬಿಎಸ್-6 ಎಮಿಷನ್ ನಿಯಮಾವಳಿಗಳು. ಇದರಿಂದ ದ್ವಿಚಕ್ರ ವಾಹನ ಗ್ರಾಹಕರು ಕಳೆದ ಎರಡು ಮೂರು ವರ್ಷದಲ್ಲಿ ಶೇಕಡ 30 ಅಥವಾ ಶೇಕಡ 30ಕ್ಕು ಅಧಿಕವಾದ ಬೆಲೆಯ ಏರಿಕೆಯಿಂದಾಗಿ ವಾಹನಗಳನ್ನು ಖರೀದಿ ಮಾಡುವುದನ್ನೆ ನಿಲ್ಲಿಸುತ್ತಿದ್ದಾರೆ ಎನ್ನಬಹುದು.

ಇದೇ ಗುರಿಯನ್ನಾಗಿಟ್ಟುಕ್ಕೊಂಡು ಬಜಾಜ್ ಆಟೋ ಸಂಸ್ಥೆಯು ತಮ್ಮ 125ಸಿಸಿ ಪಲ್ಸರ್ ಬೈಕ್ ಅನ್ನು ಬಿಡಗಡೆ ಮಾಡಲಿದೆ. ಏಕೆಂದರೆ 125ಸಿಸ್ಸಿ ಸೆಗ್ಮೆಂಟ್ ಬೈಕ್‍ಗಳಿಗೆ ಎಬಿಎಸ್ ಬೇಕಿಲ್ಲವಾದ ಕಾರಣ ಇದು ಅಗ್ಗದ ಬೆಲೆಯಲ್ಲಿ ದೊರೆಯಲಿದೆ. ವರದಿ ಪ್ರಕಾರ 125ಸಿಸಿ ಪಲ್ಸರ್ ಬೈಕ್ ಪಲ್ಸರ್ 150 ಬೈಕ್‍ನಂತೆಯೆ ವಿನ್ಯಾಸವನ್ನು ಪಡೆಯಬಹುದಾಗಿದೆ.

ಅಂದರೆ ಬಜಾಜ್ ಸಂಸ್ಥೆಯು ಇತ್ಟೀಚೆಗೆ ಪಲ್ಸರ್ 150 ಬೈಕಿನ ನಿಯಾನ್ ಮಾದರಿಗಳನ್ನು ಬಿಡುಗಡೆ ಮಾಡಿದ ವಿನ್ಯಾಸವನ್ನು 125 ಬೈಕಿನಲ್ಲಿಯು ಸಹ ನೀಡಲಾಗಿದ್ದು, ಸಿಂಗಲ್ ಸೀಟ್ ಅನ್ನು ಹೊಂದಿರಲಿದೆ. ಈ ಬೈಕ್ ರಿಯರ್ ಡ್ರಂ ಬ್ರೇಕ್ ಅನ್ನು ಪಡೆಯಲಿದ್ದು, ಫ್ಯುಯಲ್ ಟ್ಯಾಂಕ್‍ನಲ್ಲಿ ಯಾವುದೇ ಬದಲಾವಣೆಯು ಹೊಂದಿರುವುದಿಲ್ಲ ಎನ್ನಲಾಗಿದೆ.

ಭಾರತೀಯ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಕಳೆದ ವರ್ಷ ಪಲ್ಸರ್ ಎನ್‍ಎಸ್125 ಬೈಕ್ ಅನ್ನು ಪೋಲಾಂಡ್‍ನಲ್ಲಿ ಅನಾವರಣಗೊಳಿಸಿತ್ತು. ಪೋಲಾಂಡ್‍ನಲ್ಲಿ ಅನಾವರಣಗೊಂಡ ಎನ್‍ಎಸ್125 ಬೈಕಿನ ಬೆಲೆ ಪಿಎಲ್‍ಎನ್ 7,999ಗಳಾಗಿದ್ದು, ಭಾರತದ ಮೌಲ್ಯದಲ್ಲಿ ರೂ.1.60 ಲಕ್ಷಗಳಾಗಿದೆ. ಅದಾದ ನಂತರ ಈ ಬೈಕ್ ಅನ್ನು ಕೊಲಂಬಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಮಾಹಿತಿಗಳ ಪ್ರಕಾರ ಎಂಜಿನ್ ವಿಚಾರದಲ್ಲಿಯೂ ಕೂಡಾ ಯಾವುದೇ ಬದಲಾವಣೆಗಳನ್ನು ಮಾಡದೆಯೆ ಬಜಾಜ್ ಪಲ್ಸರ್ ಎನ್‍ಎಸ್125 ಬೈಕಿನಲ್ಲಿ ನೀಡಲಾದ 124.45ಸಿಸಿ ಏರ್‍ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದ್ದು, 8,500 ಆರ್‍ಪಿಎಂನಲ್ಲಿ 12 ಬಿಹೆಚ್‍ಪಿ ಪವರ್ ಹಾಗೂ 6,000 ಆರ್‍ಪಿಎಂನಲ್ಲಿ 11 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications








