ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಆಟೋ ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಪಲ್ಸರ್ 125 ಬೈಕ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಹೊಸ ಬಜಾಜ್ ಪಲ್ಸರ್ 125 ಎರಡು ತಿಂಗಳ ಹಿಂದೆ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 40,000 ಯುನಿ‍ಟ್‍ಗಳಿಗಿಂತ ಅಧಿಕ ಮಾರಾಟವಾಗಿದೆ.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಪಲ್ಸರ್ 125 ಆಗಸ್ಟ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಇಲ್ಲಿಯವರೆಗೆ ಬರೊಬ್ಬರಿ 40,000 ಯು‍‍ನಿ‍ಟ್‍‍ಗಳನ್ನು ಮಾರಾಟ ಮಾಡಿದೆ. ಪಲ್ಸರ್ 125, ಈ ಶ್ರೇಣಿಯಲ್ಲಿನ ಎಂಟ್ರಿ ಲೆವೆಲ್ ಬೈಕ್‍ ಆಗಿದೆ. ಈ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಸ್ಟಾಂಡರ್ಡ್ ಡ್ರಮ್ ಬ್ರೇಕ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.64,000ಗಳಾದರೆ, ಫ್ರಂಟ್ ಡಿಸ್ಕ್ ಬ್ರೇಕ್ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,618ಗಳಾಗಿದೆ. ಪಲ್ಸರ್ 125 ಬೈಕ್ ತನ್ನ ಬ್ರ್ಯಾಂಡ್‍‍ನ ಪಲ್ಸರ್ 150 ಬೈಕ್‍ನ ಮಾದರಿಯಲ್ಲಿದೆ. ಪಲ್ಸರ್ 150 ಬೈಕಿ‍ನಲ್ಲಿರುವ ಹಲವಾರು ವೈಶಿಷ್ಟ್ಯಗಳನ್ನು ಪಲ್ಸರ್ 125 ಬೈಕ್‍ನಲ್ಲಿ ಕಾಣಬಹುದು. ಹಲವಾರು ವೈಶಿಷ್ಟ್ಯಗಳೊಂದಿಗೆ ಸ್ಪ್ಲಿಟ್ ಸೀಟ್ ಮತ್ತು ನಿಯಾನ್ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಪಲ್ಸರ್ 125 ಬೈಕ್ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12 ಬಿಎಚ್‍ಪಿ ಪವರ್ ಮತ್ತು 11 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಫೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಪಲ್ಸರ್ 125 ಬೈಕ್ ಬಿಎಸ್-4 ಎಂಜಿನ್ ಹೊಂದಿದೆ, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಜಾರಿಯಾಗುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಇನ್ನೂ ನವೀಕರಿಸಿಲ್ಲ ಎಂಬುದನ್ನು ಗಮನಿಸಬೇಕು.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಪಲ್ಸರ್ 125 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹೊಂದಿದ್ದು, ಹಿಂಭಾಗವು ಗ್ಯಾಸ್ ಜಾರ್ಜ್ಡ್ ಸ್ಪ್ರಿಂಗ್ ಸಸ್ಪೆಂಷನ್ ಸೆ‍ಟ್ಅಪ್ ಅನ್ನು ಹೊಂದಿದೆ. ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‍‍ಗಳನ್ನು ಹೊಂದಿದೆ. ಆದರೆ ಟಾಪ್ ಮಾದರಿಯ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಬಜಾಜ್ ಪಲ್ಸರ್ 125 ಡ್ರಮ್ ಬ್ರೇಕ್ ರೂಪಾಂತರವು ಸ್ಟ್ಯಾಂಡರ್ಡ್ ಸಿಬಿಎಸ್ ಕಾಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಆಟೋ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿ ಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಬಜಾಜ್ ಇತ್ತೀಚೆಗೆ ಜನಪ್ರಿಯ ಚೇತಕ್ ಎಲೆಕ್ಟ್ರಿಲ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತು. ಬಜಾಜ್ ಎಲೆಕ್ಟ್ರಿಕ್ ಚೇತಕ್ ಅನ್ನು ಕಂಪನಿಯ ಹೊಸ ಉಪ - ಬ್ರ್ಯಾಂಡ್ ಅರ್ಬನೈಟ್ ಅಡಿಯಲ್ಲಿ ಮಾರಾಟ ಮಾಡಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಹೊಸ ಸ್ಕೂಟರ್ ಬಗ್ಗೆ ನಿರ್ದಿಷ್ಟ ಮಾಹಿತಿಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಸ್ಕೂಟರ್‍‍ನ ವಿನ್ಯಾಸವು ಹಳೆಯ ಚೇತಕ್ ಸ್ಕೂಟರ್‍‍ಗಳನ್ನು ನೆನಪಿಸುವಂತಿದೆ. ಎಲೆಕ್ಟ್ರಿಕ್ ಸ್ಕೂಟರ್ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಪಲ್ಸರ್ 125 ಬೈಕ್‍ಗಳು

ಬಜಾಜ್ ಪಲ್ಸರ್ 125 ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಪಲ್ಸರ್ ಶ್ರೇಣಿಯಿಂದ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಪಲ್ಸರ್ 125 ಬೈಕ್ ದೇಶಿಯ ಮಾರಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಬೈಕಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಪಲ್ಸರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಭಾರತದ ಆಟೋಮೊಬೈಲ್ ಕ್ಷೇತ್ರವು ಮಂದಗತಿಯ ಪ್ರಗತಿಯನ್ನು ಕಾಣುತ್ತಿರುವ ವೇಳೆಯಲ್ಲಿ ಬಜಾಜ್ ಪಲ್ಸರ್ 125 ಬೈಕ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.

More from DriveSpark

Article Published On: Thursday, October 24, 2019, 17:13 [IST]
English summary
Bajaj Pulsar 125 Sales In India: Crosses 40,000 Units Of Sales In The First Two Months - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+