ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಮುಂದಿನ ಕೆಲವೇ ದಿನಗಳಲ್ಲಿ ಬೈಕ್ ಉತ್ಪಾದನೆ ಮತ್ತು ಸುರಕ್ಷತೆಯ ವಿಚಾರದಲ್ಲಿ ಕೆಲವು ಬದಲಾವಣೆ ತರಲು ಕೇಂದ್ರ ಸರ್ಕಾರವು ಸಜ್ಜಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಪ್ರೀಮಿಯಂ ಬೈಕ್ ಮಾದರಿಯಾದ ವಿ15 ಉತ್ಪಾದನೆಯನ್ನು ಕೈಬಿಡಲು ಚಿಂತನೆ ನಡೆಸುತ್ತಿದೆ.

ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಹೌದು, 2019 ಏಪ್ರಿಲ್ 1ರಿಂದ ಏಪ್ರಿಲ್ 1ರಿಂದ 125ಸಿಸಿ ಮೇಲ್ಪಟ್ಟ ಪ್ರತಿ ವಾಹನಕ್ಕೂ ಸಿಬಿಯು(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು 150 ಸಿಸಿ ಮೇಲ್ಪಟ್ಟ ವಾಹನಗಳಿಗೆ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವನ್ನು ಕಡ್ಡಾಯಗೊಳಿಸುತ್ತಿದ್ದು, ಇದರಿಂದ ಬಹುತೇಕ ಬೈಕ್ ಉತ್ಪಾದನಾ ಸಂಸ್ಥೆಗಳು ತಮ್ಮ ಬೈಕ್ ಉತ್ಪನ್ನಗಳನ್ನ ಹೊಸ ನಿಯಮಾವಳಿಗೆ ಅನುಗುಣವಾಗಿ ಮರುಬಿಡುಗಡೆ ಮಾಡುತ್ತಿವೆ.

ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಹೀಗಾಗಿ ಬಜಾಜ್ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಡಿಸ್ಕವರ್ 125 ಆವೃತ್ತಿಯಲ್ಲಿ ಸಿಬಿಯು ಸೌಲಭ್ಯದೊಂದಿಗೆ ಬಿಡುಗಡೆ ಮಾಡಿದ್ದಲ್ಲದೇ ಅವೆಂಜರ್ 180 ಮಾದರಿಯನ್ನು ಎಬಿಎಸ್‌‌ನೊಂದಿಗೆ ಬಿಡುಗಡೆ ಮಾಡುತ್ತಿದೆ. ಆದ್ರೆ 150ಸಿಸಿ ಮಾದರಿಯಾದ ವಿ15 ಬೈಕ್ ಅನ್ನು ಎಬಿಎಸ್‌ನೊಂದಿಗೆ ಉನ್ನತಿಕರಿಸುವ ಕುರಿತು ಯಾವುದೇ ಮಾಹಿತಿ ಕೊಡದಿರುವುದು ವಿ15 ಮಾದರಿಯನ್ನು ಸ್ಥಗಿತಗೊಳಿಸಬಹುದು ಅನುಮಾನಗಳಿಗೆ ಕಾರಣವಾಗಿದೆ.

ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಒಂದು ವೇಳೆ ವಿ15 ಮಾದರಿಯನ್ನು ಎಬಿಎಸ್‌ನೊಂದಿಗೆ ಮರುಬಿಡುಗಡೆ ಮಾಡಿದರೂ ಸಹ ಬೆಲೆ ಹೆಚ್ಚಳದಿಂದಾಗಿ ಬಜಾಜ್ ಸಂಸ್ಥೆಗೆ ಮತ್ತಷ್ಟು ನಷ್ಟ ಸಂಭವಿಸುವ ಸಾಧ್ಯತೆಗಳಿದ್ದು, ಜೊತೆಗೆ ಪಲ್ಸರ್ 150 ಮತ್ತು ಪಲ್ಸರ್ 180 ಬೈಕ್ ಮಾದರಿಗಳ ಮಾರಾಟದ ಮೇಲೂ ಪರಿಣಾಮ ಬೀರಬಹುದು ಎನ್ನುವುದು ಬಜಾಜ್ ಲೆಕ್ಕಾಚಾರ.

ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಇದರಿಂದಾಗಿ ವಿ15 ಎಬಿಎಸ್ ಬಿಡುಗಡೆಯ ಕುರಿತಂತೆ ತಟಸ್ಥವಾಗಿರುವ ಬಜಾಜ್ ಸಂಸ್ಥೆಯು ತನ್ನ ಇತರೆ ಜನಪ್ರಿಯ ಮಾದರಿಗಳಾದ ಪಲ್ಸರ್ ಸರಣಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟನೆ ನೀಡಲಿದೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ವಿ15 ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಲು ಮುಂದಾದ ಬಜಾಜ್..!

ಇನ್ನು ಬಜಾಜ್ ಸಂಸ್ಥೆಯು 1971ರ ಇಂಡೋ-ಪಾಕ್ ಯುದ್ದದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಐಎನ್ಎಸ್ ವಿಕ್ರಾಂತ್ ಯುದ್ದ ನೌಕೆಯ ಪ್ರೇರಣೆಯೊಂದಿಗೆ ವಿ15 ಬೈಕ್ ಅನ್ನು 2016ರಲ್ಲಿ ಬಿಡುಗಡೆ ಮಾಡಿತ್ತು. 1961ರಲ್ಲಿ ಭಾರತೀಯ ಸೇನೆಯಲ್ಲಿ ಸೇರ್ಪಡೆಯಾಗಿ ಸುಮಾರು 4 ದಶಕಗಳ ದೇಶ ಸೇವೆಯ ನಂತರ ಐಎನ್‌ಎಸ್ ವಿಕ್ರಾಂತ್ ಬಳಕೆಯನ್ನು 1997ರಲ್ಲಿ ಸ್ಥಗಿತಗೊಳಿಸಲಾಗಿತ್ತು. ತದನಂತರ 2012ರ ವರೆಗೆ ಮುಂಬೈನಲ್ಲಿ ಸಂರಕ್ಷಿಸಿಡಲಾಗಿತ್ತು. ಕೊನೆಗೆ 2014ರಲ್ಲಿ ಹಡಗಿನ ಬಿಡಿ ಭಾಗಗಳನ್ನು ಕಳಚಿ ವಿಲೇವಾರಿ ಮಾಡಲು ಗುಜರಿಗೆ ಕಳಿಸಲಾಗಿತ್ತು ಆಗ ಈ ಐತಿಹಾಸಿಕ ಯುದ್ಧ ನೌಕೆಯ ಅವಶೇಷಗಳನ್ನು ಖರೀದಿಸಿದ್ದ ಬಜಾಜ್ ಆಟೋ ಸಂಸ್ಥೆಯು ಅದೇ ಬಿಡಿಭಾಗಗಳನ್ನು ಬಳಸಿ ವಿ15 ಮಾರುಕಟ್ಟೆಗೆ ತಂದಿತ್ತು.

Most Read Articles

Kannada
Read more on ಬಜಾಜ್
English summary
Bajaj Might Discontinue Production Of The V15. Read in Kannada.
Story first published: Monday, March 11, 2019, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X