ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಮುಂದಿನ ಕೆಲವೇ ದಿನಗಳಲ್ಲಿ ಹೊಸ ವಾಹನಗಳ ಉತ್ಪಾದನೆ ಮತ್ತು ಸುರಕ್ಷತೆಯ ವಿಚಾರದಲ್ಲಿ ಹಲವು ಹೊಸ ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಸಿದ್ದತೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಪ್ರೀಮಿಯಂ ಬೈಕ್ ಮಾದರಿಯಾದ ವಿ15 ಮಾರಾಟವನ್ನು ಸ್ಥಗಿತಗೊಳಿಸುವ ಸೂಚನೆ ನೀಡಿದೆ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಹೌದು, 2019 ಏಪ್ರಿಲ್ 1ರಿಂದ 125ಸಿಸಿ ಮೇಲ್ಪಟ್ಟ ಪ್ರತಿ ವಾಹನಕ್ಕೂ ಸಿಬಿಯು(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು 150 ಸಿಸಿ ಮೇಲ್ಪಟ್ಟ ವಾಹನಗಳಿಗೆ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರವು ಮುಂಬರುನ ಏಪ್ರಿಲ್ 1ರಿಂದ ಬಿಎಸ್-6 ಎಂಜಿನ್ ಕಡ್ಡಾಯಗೊಳಿಸುತ್ತಿದ್ದು, ಇದರಿಂದ ಬಹುತೇಕ ಬೈಕ್ ಉತ್ಪಾದನಾ ಸಂಸ್ಥೆಗಳು ಕೆಲವು ಬೈಕ್ ಉತ್ಪನ್ನಗಳನ್ನು ಹೊಸ ನಿಯಮಾವಳಿಗೆ ಅನುಗುಣವಾಗಿ ಮರುಬಿಡುಗಡೆ ಸಾಧ್ಯವಿಲ್ಲದೇ ಉತ್ಪಾದನೆಯನ್ನೇ ಬಂದ್ ಮಾಡಿ ಹೊಸ ಬೈಕ್ ಮಾದರಿಗಳತ್ತ ಮುಖಮಾಡುತ್ತಿವೆ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಹೀಗಿರುವಾಗ ಬಜಾಜ್ ಆಟೋ ಸಂಸ್ಥೆಯು ತನ್ನ 150ಸಿಸಿ ಎಂಜಿನ್ ಸಾಮಾರ್ಥ್ಯದ ವಿ15 ಬೈಕ್ ಮಾದರಿಯನ್ನ ಬಂದ್ ಮಾಡುವ ಬಗ್ಗೆ ಸುಳಿವು ನೀಡಿದ್ದು, ಎಬಿಎಸ್ ಸೇರಿದಂತೆ ಕಳೆದ ಕೆಲತಿಂಗಳಿನಿಂದ ವಿ15 ಬೈಕಿನಲ್ಲಿ ಯಾವುದೇ ರೀತಿಯ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಿಲ್ಲ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಒಂದು ವೇಳೆ ವಿ15 ಮಾದರಿಯನ್ನು ಎಬಿಎಸ್‌ನೊಂದಿಗೆ ಮರುಬಿಡುಗಡೆ ಮಾಡಿದರೂ ಸಹ ಬೆಲೆ ಹೆಚ್ಚಳದಿಂದಾಗಿ ಬಜಾಜ್ ಸಂಸ್ಥೆಗೆ ಮತ್ತಷ್ಟು ನಷ್ಟ ಸಂಭವಿಸುವ ಸಾಧ್ಯತೆಗಳಿದ್ದು, ಜೊತೆಗೆ ಪಲ್ಸರ್ 150 ಮತ್ತು ಪಲ್ಸರ್ 180 ಬೈಕ್ ಮಾದರಿಗಳ ಮಾರಾಟದ ಮೇಲೂ ಪರಿಣಾಮ ಬೀರಬಹುದು ಎನ್ನುವುದು ಬಜಾಜ್ ಲೆಕ್ಕಾಚಾರ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಇದರಿಂದಾಗಿ ವಿ15 ಎಬಿಎಸ್ ಬಿಡುಗಡೆಯ ಯೋಜನೆಯನ್ನು ಕೈಬಿಟ್ಟಿರುವ ಬಜಾಜ್ ಸಂಸ್ಥೆಯು ತನ್ನ ಇತರೆ ಜನಪ್ರಿಯ ಮಾದರಿಗಳಾದ ಪಲ್ಸರ್ ಸರಣಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸ್ಟಾಕ್ ಮಾರಾಟ ಪೂರ್ಣಗೊಂಡ ನಂತರ ಅಧಿಕೃತವಾಗಿ ಮಾರಾಟಕ್ಕೆ ತೆರೆ ಎಳೆಯಲಿದೆ. ಸದ್ಯಕ್ಕೆ ಬಜಾಜ್ ಆಟೋ ವೆಬ್‌ಸೈಟ್‌ನಲ್ಲಿ ವಿ15 ಖರೀದಿ ಲಭ್ಯವಿದ್ದರೂ ಸಹ ಹೊಸ ಬೈಕ್ ಉತ್ಪಾದನೆ ಸ್ಥಗಿತಗೊಂಡು 2 ತಿಂಗಳಾಗಿದೆಯೆಂತೆ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಈ ಹಿನ್ನೆಲೆ ಕೆಲವು ಸುದ್ದಿಸಂಸ್ಥೆಗಳು ವಿ15 ಸ್ಥಗಿತಗೊಳಿಸುತ್ತಿರುವ ಬಗ್ಗೆ ವರದಿ ಮಾಡಿದ್ದು, ಈ ಹಿಂದೆ ವಿ12 ಬೈಕ್ ಸ್ಥಗಿತಗೊಳಿಸಿದ ಮಾದರಿಯಲ್ಲೇ ವಿ15 ಆವೃತ್ತಿಯನ್ನು ಸಹ ಬಜಾಜ್ ಸಂಸ್ಥೆಯು ಮಾರಾಟ ಬಂದ್ ಮಾಡಲಿದೆ ಎನ್ನಲಾಗಿದೆ.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಇನ್ನು 1971ರ ಇಂಡೋ-ಪಾಕ್ ಯುದ್ದದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಐಎನ್ಎಸ್ ವಿಕ್ರಾಂತ್ ಯುದ್ದ ನೌಕೆಯ ಪ್ರೇರಣೆಯೊಂದಿಗೆ ವಿ15 ಬೈಕ್ ಅನ್ನು 2016ರಲ್ಲಿ ಬಿಡುಗಡೆ ಮಾಡಿದ್ದ ಬಜಾಜ್ ಆಟೋ ಸಂಸ್ಥೆಯು ಭಾರತೀಯ ನೌಕಾ ಪಡೆಯ ಮೆಚ್ಚುಗೆ ಪಾತ್ರವಾಗಿತ್ತು.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

1961ರಲ್ಲಿ ಭಾರತೀಯ ಸೇನೆಯಲ್ಲಿ ಸೇರ್ಪಡೆಯಾಗಿ ಸುಮಾರು 4 ದಶಕಗಳ ದೇಶ ಸೇವೆಯ ನಂತರ ಐಎನ್‌ಎಸ್ ವಿಕ್ರಾಂತ್ ಬಳಕೆಯನ್ನು 1997ರಲ್ಲಿ ಸ್ಥಗಿತಗೊಳಿಸಲಾಗಿತ್ತು. ತದನಂತರ 2012ರ ವರೆಗೆ ಮುಂಬೈನಲ್ಲಿ ಸಂರಕ್ಷಿಸಿಡಲಾಗಿತ್ತು. ಕೊನೆಗೆ 2014ರಲ್ಲಿ ಹಡಗಿನ ಬಿಡಿ ಭಾಗಗಳನ್ನು ಕಳಚಿ ವಿಲೇವಾರಿ ಮಾಡಲು ಗುಜರಿಗೆ ಕಳಿಸಲಾಗಿತ್ತು ಆಗ ಈ ಐತಿಹಾಸಿಕ ಯುದ್ಧ ನೌಕೆಯ ಅವಶೇಷಗಳನ್ನು ಖರೀದಿಸಿದ್ದ ಬಜಾಜ್ ಆಟೋ ಸಂಸ್ಥೆಯು ಅದೇ ಬಿಡಿಭಾಗಗಳನ್ನು ಬಳಸಿ ವಿ15 ಮಾರುಕಟ್ಟೆಗೆ ತಂದಿತ್ತು.

ವಿ15 ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದ ಬಜಾಜ್..!

ಆದರೆ ಬಿಡುಗಡೆಯಾದ ಮೊದಮೊದಲು ಕೆಲವು ತಿಂಗಳು ಕಾಲ ಉತ್ತಮ ಬೇಡಿಕೆ ಹೊಂದಿದ್ದ ವಿ15 ಬೈಕ್ ಮಾದರಿಯು ತದನಂತರ ಪ್ರತಿಸ್ಪರ್ಧಿ ಬೈಕ್‌ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಲೇ ಬಂದಿತ್ತು. ಇಂತಹ ಸನ್ನಿವೇಶದಲ್ಲೂ ಗ್ರಾಹಕರ ಆಕರ್ಷಣೆಗಾಗಿ ವಿ12 ಬಿಡುಗಡೆ ಮಾಡಿದರೂ ಸಹ ವಿ ಬ್ರಾಂಡ್ ಬೈಕ್ ಸಂಪೂರ್ಣವಾಗಿ ಬೇಡಿಕೆ ಕುಸಿದಿದ್ದು, ಕಳೆದ ವರ್ಷ ವಿ12 ಬೈಕ್ ಸ್ಥಗಿತದ ನಂತರ ಇದೀಗ ವಿ15 ಕೂಡಾ ಮಾರಾಕಟ್ಟೆಯಿಂದ ನಿರ್ಗಮಿಸುವುದು ಖಚಿತವಾಗಿದೆ.

Article Published On: Friday, July 12, 2019, 11:05 [IST]
English summary
Bajaj V15 Discontinued In India — Will Bajaj Come Out With A Replacement Soon? Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+