ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ವಿತರಣೆಯನ್ನು ಆರಂಭಿಸಿದ ಬೆನೆಲ್ಲಿ
ಬೆನೆಲ್ಲಿ ಇಂಡಿಯಾ ತನ್ನ ಬಹುನೀರಿಕ್ಷಿತ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಮಾದರಿಯನ್ನು ಕಳೆದ ವಾರವಷ್ಟೇ ಬಿಡುಗಡೆ ಮಾಡಿದ್ದು, ಬುಕ್ಕಿಂಗ್ ಮಾಡಿದ್ದ ನೂರಕ್ಕೂ ಅಧಿಕ ಗ್ರಾಹಕರಿಗೆ ಇಂದು ಮೊದಲ ಹಂತದ ಬೈಕ್ ವಿತರಣೆಗೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಇಂಪೀರಿಯಲ್ 400 ಬೈಕ್ ಖರೀದಿಗಾಗಿ ಈಗಾಗಲೇ ಸಾವಿರಾರು ಆಸಕ್ತ ಗ್ರಾಹಕರು ಬುಕ್ಕಿಂಗ್ ಮಾಡಿದ್ದು, ದೀಪಾವಳಿ ಉತ್ಸವದಂದೇ ಮೊದಲ ಬ್ಯಾಚ್ ಬೈಕ್‌ಗಳನ್ನು ವಿತರಣೆ ಮಾಡಿದೆ. ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.69 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್‌ಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ ಮಾದರಿಯ ಬೈಕ್‌ಗಳಲ್ಲೇ ವಿಶೇಷ ಡಿಸೈನ್ ಹೊಂದಿರುವ ಇಂಪೀರಿಯಲ್ 400 ಬೈಕ್‌ಗಳು 1950ರ ಅವಧಿಯಲ್ಲಿ ಜನಪ್ರಿಯತೆ ಹೊಂದಿದ್ದ ಬೆನೆಲ್ಲಿ ಮೊಟೊ ಬಿ ಬೈಕ್ ಪ್ರೇರಣೆಯೊಂದಿಗೆ ನಿರ್ಮಾಣ ಮಾಡಲಾಗಿದ್ದು, ಆಕರ್ಷಕ ಬೆಲೆಗಳೊಂದಿಗೆ ಗ್ರಾಹಕರ ಸೆಳೆಯುವ ವಿಶ್ವಾಸದಲ್ಲಿದೆ.

ಕ್ರೋಮ್ ಸೌಲಭ್ಯ ಹೊಂದಿರುವ ರೌಂಡ್ ಹೆಡ್‌ಲ್ಯಾಂಪ್, ಟೈಲ್ ಲೈಟ್ಸ್, ಟರ್ನ್ ಇಂಡಿಕೇಟರ್ ಮತ್ತು ಲಿವರ್ಸ್ ಜೊತೆಗೆ ಸ್ಪೋಕ್ ವೀಲ್ಹ್, ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಸೀಟ್, ರೆಟ್ರೋ ಸ್ಟೈಲ್ ಫ್ಯೂಲ್ ಟ್ಯಾಂಕ್ ಫೀಚರ್ಸ್ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಇಂಪೀರಿಯಲ್ 400 ಬೈಕ್ ಮಾದರಿಯು 374 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಪಡೆದುಕೊಂಡಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20.7-ಬಿಎಚ್‌ಪಿ ಮತ್ತು 29-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ. ಹೊಸ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೊಫಿಕ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಶಾಕ್ ಅಬ್ಸಾರ್ವರ್ ನೀಡಲಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ ರೈಡರ್ ಸುರಕ್ಷೆತೆಗಾಗಿ ಮುಂಭಾಗದ ಚಕ್ರದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಜೋಡಿಸಲಾಗಿದೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ಇಂಪೀರಿಯಲ್ 400 ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಣ್ಣದ ಆಯ್ಕೆ ನೀಡಲಿದೆ ಎನ್ನಲಾಗಿದೆ.
MOST READ: ನೀರು ಮತ್ತು ಆಲ್ಕೋಹಾಲ್‍ನಿಂದ ಚಲಿಸಲಿದೆ ಈ ಎಂಜಿನ್..!

ಸರ್ವೀಸ್ ಮತ್ತು ವಾರಂಟಿ
ಬೈಕ್ ಮಾರಾಟದ ನಂತರದ ಸೇವೆಗಳ ಕುರಿತಾಗಿ ಗ್ರಾಹಕರ ಅಸಮಾಧಾನವನ್ನು ಅರಿತಿರುವ ಬೆನೆಲ್ಲಿ ಸಂಸ್ಥೆಯು ಈ ಬಾರಿ ಇಂಪೀರಿಯರ್ 400 ಬಿಡುಗಡೆಯೊಂದಿಗೆ ಹಲವಾರು ಜನಪ್ರಿಯ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದು, ಬೆಸ್ಟ್ ಇನ್ ಕ್ಲಾಸ್ ಸರ್ವೀಸ್ ಮಾದರಿಯಾದ 3 ವರ್ಷ ಅಥವಾ ಅನ್‌ಲಿಮಿಟೆಡ್ ಕಿ.ಮೀ ವಾರಂಟಿ ಆಫರ್ ನೀಡಿದೆ.
MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಈ ಮೂಲಕ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿರುವ ಇಂಪೀರಿಯಲ್ 400 ಬೈಕ್ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಬೈಕ್ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾದರೆ ಬೆನೆಲ್ಲಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಮಾದರಿಯ ಕ್ಲಾಸಿಕ್ ಬೈಕ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.


Click it and Unblock the Notifications








