ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಯಮಹಾ ಮೋಟಾರ್‌ಸೈಕಲ್ ಸಂಸ್ಥೆಯು ಕಳೆದ ವಾರವಾರವಷ್ಟೇ ಎಂಟಿ-15 ಬೈಕ್ ಮಾದರಿಯನ್ನು ಬಿಡುಗಡೆಗಡೆಗೊಳಿಸಿದ್ದು, ಇದೀಗ ಎಟಿಂ ಸರಣಿಯ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಹೌದು, ಯಮಹಾ ಸಂಸ್ಥೆಯು ತನ್ನ ಯಶಸ್ವಿ ಬೈಕ್ ಸರಣಿಗಳಾದ ಎಂಟಿ ಆವೃತ್ತಿಗಳನ್ನು ಭಾರತದಲ್ಲಿ ಒಂದೊಂದಾಗಿ ಪರಿಚಯಿಸುತ್ತಿದ್ದು, ಎಂಟಿ-15 ನಂತರ ಮಧ್ಯಮ ಗಾತ್ರದ ಸೂಪರ್ ಬೈಕ್ ಆವೃತ್ತಿಯಾದ ಎಂಟಿ-03 ಬೈಕ್ ಅನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಇದು ಸ್ಟ್ರೀಟ್ ಫೈಟರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಬಿಎಂಡಬ್ಲ್ಯು ಜಿ310ಆರ್ ಮತ್ತು ಬೆನೆಲ್ಲಿ ಟಿಎನ್‌ಟಿ 300 ಬೈಕ್‌ಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಎಂಟಿ-03 ಬೈಕ್ ಮಾದರಿಯು ತಾಂತ್ರಿಕವಾಗಿ ಭಾರತೀಯ ಗ್ರಾಹಕರ ಗಮನಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ವೈಎಫ್‌ಜೆಡ್ ಆರ್3 ಬೈಕಿನ ಪ್ರೇರಣೆಯೊಂದಿಗೆ ಎಂಟಿ-03 ಬೈಕ್ ಅನ್ನು ಹೊರತರಲಾಗಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಹಾಗೆಯೇ ಎಂಟಿ-03 ಬೈಕ್ ಮಾದರಿಯು ಹಲವಾರು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಡೈನಾಮಿಕ್ ರೈಡಿಂಗ್ ಪ್ರೇರಣೆಯ 321ಸಿಸಿ ಪ್ಯಾರಾಲಲ್-ಟ್ವಿನ್ ಮೋಟಾರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಟ್ರಾನ್‌ಮಿಷನ್ ಪಡೆದುಕೊಂಡಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಈ ಮೂಲಕ 43-ಬಿಎಚ್‌ಪಿ ಮತ್ತು 29.5-ಎಂಎನ್ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಎಂಟಿ-03 ಬೈಕ್ ಮಾದರಿಯು ಎಂಟಿ-25 ಬೈಕಿನಿಂದಲೂ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಂಡಿದ್ದು, ಹಿಂಭಾಗದಲ್ಲಿ 140/70 ಗಾತ್ರದ ಚಕ್ರವನ್ನು ಪಡೆದುಕೊಂಡಿದ್ದಲ್ಲಿ 120/70 ಗಾತ್ರದ ಚಕ್ರವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಹಾಗೆಯೇ ಸವಾರರ ಸುರಕ್ಷತೆಗಾಗಿ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಕೆಲವು ರೇಸ್ ಫಿಚರ್ಸ್ ಸೇರಿಸಲಾಗಿದ್ದು, ಮುಂಬರುವ ಜೂನ್ ಹೊತ್ತಿಗೆ ಹೊಸ ಬೈಕ್ ಬಿಡುಗಡೆಗೊಳಿಸುವ ಬಗ್ಗೆ ಯಮಹಾ ಸುಳಿವು ನೀಡಿದೆ.

MOST READ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಇದರ ಹೊರತಾಗಿ ಹೊಸ ಬೈಕಿನ ತಾಂತ್ರಿಕ ಸೌಲಭ್ಯಗಳ ಬಗೆಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಯಮಹಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯು ಜಿ310ಆರ್, ಬೆನೆಲ್ಲಿ ಟಿಎನ್‌ಟಿ 300, ಕವಾಸಕಿ ಜೆಡ್250 ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ಗಳಿಗೂ ತೀವ್ರ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಹೀಗಾಗಿ ಹೊಸ ಬೈಕ್ ಬೆಲೆಯು ಕೂಡಾ ತುಸು ದುಬಾರಿ ಎನ್ನಿಸಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.90 ಲಕ್ಷದಿಂದ ರೂ.3.10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕಿನ ಬಗೆಗೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

MOST READ: ಎಂಟಿ-15 ಬೈಕ್ ಬಿಡುಗಡೆಗೊಳಿಸಿದ ಯಮಹಾ ಮೇಲೆ ಫ್ಯಾನ್ಸ್ ಗರಂ..!

ಜಿ310ಆರ್ ಮತ್ತು ಟಿಎನ್‌ಟಿ 300 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಯಮಹಾ ಎಂಟಿ-03

ಇನ್ನು ಕಳೆದ ವಾರ ಬಿಡುಗಡೆಯಾಗಿರುವ ಎಂಟಿ-15 ಕೂಡಾ ಸದ್ಯ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಬೆಲೆಯಲ್ಲಿ ತುಸು ದುಬಾರಿ ಎನ್ನಿಸಿದರೂ ಸಹ ತಾಂತ್ರಿಕವಾಗಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ 1.36 ಲಕ್ಷಕ್ಕೆ ಮಾರಾಟವಾಗುತ್ತಿದೆ. ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿರುವ ಎಂಟಿ-15 ಬೈಕ್ ಮಾದರಿಯು 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ.

Most Read Articles

Kannada
Read more on ಯಮಹಾ yamaha
English summary
BMW G310R, Benelli TNT 300 Rival Yamaha MT-03 India Launch Will Be Soon: Expected Price. Read in Kannada.
Story first published: Thursday, March 21, 2019, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X