ಎಂಟಿ-15 ಬೈಕ್ ಬಿಡುಗಡೆಗೊಳಿಸಿದ ಯಮಹಾ ಮೇಲೆ ಫ್ಯಾನ್ಸ್ ಗರಂ..!
ಕಳೆದ ವಾರವಷ್ಟೇ ಯಮಹಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಎಂಟಿ-15 ಪರ್ಫಾಮೆನ್ಸ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಬೆಲೆಯನ್ನು ರೂ. 1.36 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಆದ್ರೆ ಹೊಸ ಬೈಕ್ ಬಿಡುಗಡೆಗೂ ಮುನ್ನ ಸಂಭ್ರಮದಲ್ಲಿದ್ದ ಯಮಹಾ ಫ್ಯಾನ್ಸ್, ಬೈಕ್ ಬಿಡುಗಡೆಯ ನಂತರ ಯಮಹಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಯಮಹಾ ಸಂಸ್ಥೆಯು ತನ್ನ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಎಂಟಿ-15 ಬೈಕ್ ಮಾದರಿಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಿದ್ದು, ಬೈಕ್ ಬಿಡುಗಡೆಗೂ ಮುನ್ನ ಯಮಹಾ ಫ್ಯಾನ್ಸ್ ಕೂಡಾ ಸಂಭ್ರಮಿಸಿದ್ದರು. ಆದ್ರೆ ಬಿಡುಗಡೆಯಾಗುತ್ತಿದ್ದಂತೆ ಹೊಸ ಬೈಕ್ ಬೆಲೆ ಮತ್ತು ಬೈಕ್‌ನಲ್ಲಿ ನೀಡಲಾಗಿರುವ ತಾಂತ್ರಿಕ ಸೌಲಭ್ಯಗಳ ಕುರಿತು ಬಹುತೇಕ ಯಮಹಾ ಫ್ಯಾನ್ಸ್ ಗರಂ ಆಗಿದ್ದಾರೆ.

ಎಂಟಿ-15 ಭಾರತವನ್ನು ಹೊರತುಪಡಿಸಿ ಹಲವಾರು ರಾಷ್ಟ್ರಗಳಲ್ಲಿ 2 ವರ್ಷದ ಹಿಂದೆಯೇ ಬಿಡುಗಡೆಯಾಗಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯ ಸೇರಿದಂತೆ ವಿವಿಧ ಬಣ್ಣಗಳ ಪಡೆದುಕೊಂಡಿರುವುದಲ್ಲದೇ ಮಾರಾಟದಲ್ಲೂ ಮುನ್ನುಗ್ಗುತ್ತಿದೆ. ಹೀಗಿರುವಾಗ ಭಾರತದಲ್ಲಿ ಬಿಡುಗಡೆಯಾಗಿರುವ ಎಂಟಿ-15 ಬೈಕಿನಲ್ಲಿ ಬೆಲೆ ಕಡಿಮೆ ಮಾಡುವ ಉದ್ದೇಶ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಕಡಿತ ಮಾಡಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಎಂಟಿ-15 ಬೈಕ್ ಬೆಲೆಯನ್ನು ರೂ. 1.36 ಲಕ್ಷಕ್ಕೆ ನಿಗದಿಗೊಳಿಸಿರುವ ಯಮಹಾ ಸಂಸ್ಥೆಯು ನಿಗದಿಪಡಿಸಿರುವ ಹಣಕ್ಕೆ ಸರಿಯಾದ ತಾಂತ್ರಿಕ ಸೌಲಭ್ಯಗಳನ್ನು ನೀಡಿಲ್ಲ ಎಂದು ದೂರಿರುವ ಫ್ಯಾನ್ಸ್, ಹೊಸ ಬೈಕ್ ಅನ್ನು MT-15 ಬದಲಾಗಿ Empty15 ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-15 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ಡ್ಯುಯಲ್ ಕಲರ್ ಕಾಂಬಿನೇಷನ್, ಯುಎಸ್‌ಡಿ ಫೋರ್ಕ್ಸ್ ಮತ್ತು ಅಲ್ಯುಮಿನಿಯಂ ಸ್ವಿಂಗ್ ಗಾರ್ಡ್ ಪಡೆದುಕೊಂಡಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಎಂಟಿ-15 ಬೈಕಿನಲ್ಲಿ ಈ ತರಹದ ಯಾವುದೇ ಸೌಲಭ್ಯಗಳಿಲ್ಲ. ಇದರಿಂದ ಹೊಸ ಬೈಕ್ ಖರೀದಿಗೆ ಸಾವಿರಾರು ರೂಪಾಯಿ ಮುಂಗಡ ನೀಡಿ ಬುಕ್ಕಿಂಗ್ ಮಾಡಿದ್ದ ಬಹುತೇಕ ಯಮಹಾ ಗ್ರಾಹಕರು ಬೈಕ್ ಬಿಡುಗಡೆಯಾದ ನಂತರ ಬುಕ್ಕಿಂಗ್ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ.

ಎಕ್ಸ್‌ಶೋರೂಂ ಪ್ರಕಾರ ರೂ.1.36 ಲಕ್ಷ ಹೊಂದಿರುವ ಹೊಸ ಬೈಕಿಗೆ ಆನ್ ರೋಡ್ ಪ್ರಕಾರ ರೂ.1.57 ಲಕ್ಷ ಬೆಲೆ ಪಾವತಿಸಿದರೂ ಸಹ ಯಾವುದೇ ಗುಣಮಟ್ಟದ ಸೌಲಭ್ಯಗಳಿಲ್ಲದಿರುವುದು ಯಮಹಾ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-15 ಮಾದರಿಯಲ್ಲೇ ಭಾರತದಲ್ಲೂ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಪಟ್ಟು ಹಿಡಿದ್ದಾರೆ.

ಇನ್ನು ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.
MOST READ: ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಪ್ರಧಾನ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.
MOST READ: ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇದರ ಹೊರತಾಗಿ ಆರ್15 ಬೈಕಿನಲ್ಲಿ ಅಳವಡಿಸಲಾಗಿರುವ ಬಹುತೇಕ ಸೌಲಭ್ಯಗಳನ್ನು ಹೊಸ ಎಂಟಿ-15 ಬೈಕಿನಲ್ಲಿ ನೋಡಬಹುದಾಗಿದ್ದು, ಬೆಲೆ ಇಳಿಕೆ ಮಾಡುವ ಸಂಬಂಧ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಎಂಟಿ-15 ಬೈಕಿಗಿಂತಲೂ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಬೈಕಿನಲ್ಲಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಹೊಸ ಎಂಟಿ-15 ಬೈಕ್ ಮಾದರಿಯ ಎಂಜಿನ್ ಅನ್ನು ಆರ್15 ಬೈಕಿನಲ್ಲೂ ನೋಡಬಹುದಾಗಿದ್ದು, ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಈ ಮೂಲಕ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ. ಜೊತೆಗೆ ಬೈಕ್ ಸವಾರರ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, 245-ಎಂಎ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಲಾಗಿದೆ.


Click it and Unblock the Notifications