ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಬಾಲಿವುಡ್ ತಾರೆಯರಿಗೆ ವಾಹನಗಳ ಕ್ರೇಜ್ ಇರುವುದು ಗೊತ್ತೆ ಇದೆ. ಯಾವುದೇ ದುಬಾರಿ ಬೆಲೆಯ ಹೊಸ ಬೈಕ್ ಅಥವಾ ಕಾರು ಮಾರುಕಟ್ಟೆಗೆ ಬಂದಾಗ ಅವುಗಳನ್ನು ಖರೀದಿಸದೇ ಬಿಡುವುದಿಲ್ಲ. ಬಾಲಿವುಡ್ ನಟ ರಾಜ್‍‍ಕುಮಾರ್ ರಾವ್‍‍ರವರು ತಮ್ಮ ನಟನೆಯ ಮೂಲಕ ಮನೆಮಾತಾಗಿದ್ದಾರೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಜೊತೆಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಾಜ್‍‍‍ಕುಮಾರ್‍ ರಾವ್‍‍ರವರು ಹಲವು ಚಿತ್ರಗಳಲ್ಲಿ ಬೈಕ್ ಚಾಲನೆ ಮಾಡಿದ್ದಾರೆ. ಇನ್ನು ಮುಂದೆ ರಾಜ್‍‍‍ಕುಮಾರ್‍ ರಾವ್‍‍ರವರನ್ನು ಮುಂಬೈನ ರಸ್ತೆಗಳಲ್ಲಿ ಹೊಸ ಲಗ್ಷುರಿ ಬೈಕ್‍‍ನೊಂದಿಗೆ ಕಾಣಬಹುದು.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಹೌದು, ರಾಜ್‍‍‍ಕುಮಾರ್‍ ರಾವ್‍‍ರವರು ಇತ್ತೀಚಿಗಷ್ಟೇ ಹೊಸ ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಬ್ ಬೈಕ್ ಅನ್ನು ಖರೀದಿಸಿದ್ದಾರೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಾಗಿದೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಈ ಹೊಸ ಫ್ಯಾಟ್ ಬಾಬ್ ಬೈಕ್ ಅನ್ನು ಭಾರತದಲ್ಲಿ 2017ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ ಈಗ ಸಾಫ್ಟ್ ಟೇಲ್ ಫ್ಯಾಮಿಲಿಯ ಭಾಗವಾಗಿದೆ. ಈ ಹಿಂದಿದ್ದ ಬೈಕುಗಳು ಡೈನಾ ಫ್ಯಾಮಿಲಿಗೆ ಸೇರಿದ್ದವು. ಹಿಂದಿನ ತಲೆಮಾರಿನ ಬೈಕಿಗೆ ಹೋಲಿಸಿದರೆ ಹೊಸ ತಲೆಮಾರಿನ ಫ್ಯಾಟ್ ಬಾಬ್ ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಈ ಬದಲಾವಣೆಗಳಲ್ಲಿ ಹೆಚ್ಚು ಅಗ್ರೇಸಿವ್ ಲುಕ್, ಮಸ್ಕ್ಯುಲರ್ ನೋಟ, ಹೊಸ ಎಂಜಿನ್ ಸೇರಿವೆ. ಈ ಬೈಕ್ ಹಳೆಯ ಬೈಕಿಗಿಂತ 15 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಈ ಬೈಕಿನಲ್ಲಿ ಅಳವಡಿಸಲಾಗಿರುವ ಮಿಲ್ವಾಕೀ ಐಟ್ 107 ವಿ ಟ್ವಿನ್ ಎಂಜಿನ್ ಆಯಿಲ್ ಕೂಲ್ ಎಕ್ಸಾಸ್ಟ್ ವಾಲ್ವ್ ಗಳನ್ನು ಹೊಂದಿದ್ದು, 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಪ್ರಮುಖ ಬದಲಾವಣೆಗಳಾಗಿ ಒಬ್ಲಾಂಗ್ ಶೇಪಿನ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳಿವೆ. ಈ ಸೆಗ್‍‍ಮೆಂಟಿನಲ್ಲಿರುವ ಬೈಕುಗಳು ರೆಟ್ರೋ ಶೈಲಿಯ ರೌಂಡ್ ಹೆಡ್‍‍ಲ್ಯಾಂಪ್ ವಿನ್ಯಾಸವನ್ನು ಹೊಂದಿವೆ. ಹೊಸ ಹೆಡ್‍‍ಲ್ಯಾಂಪ್‍‍ಗಳ ಜೊತೆಗೆ ಈ ಬೈಕಿನ ಮುಂಭಾಗದಲ್ಲಿ ಫೋರ್ಕ್ ಸಸ್ಪೆಂಷನ್‍‍ಗಳಿವೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ವಿಶಿಷ್ಟವಾಗಿರುವ 2-1-2 ಎಕ್ಸಾಸ್ಟ್ ಸಿಸ್ಟಂ ಮ್ಯಾಗ್ನೆಶಿಯಂ ಫಿನಿಶಿಂಗ್ ಹೊಂದಿದೆ. ಇದರ ಜೊತೆಗೆ ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಬ್ ಹಳೆಯ ತಲೆಮಾರಿನ ಬೈಕ್ ಹೊಂದಿದ್ದ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಇವುಗಳಲ್ಲಿ ಟಿಯರ್‍‍ಡ್ರಾಪ್ ಫ್ಯೂಯಲ್ ಟ್ಯಾಂಕ್, ಕಾಂಟೋರ್ಡ್ ಸೀಟ್ ಹಾಗೂ ಅಗಲವಾದ ಹ್ಯಾಂಡಲ್‍‍ಬಾರ್‍‍ಗಳು ಸೇರಿವೆ. ಹಿಂಭಾಗದ ಸಸ್ಪೆಂಷನ್‍‍ಗಳಿಗಾಗಿ ಸೀಟುಗಳ ಕೆಳಭಾಗದಲ್ಲಿ ಸಿಂಗಲ್ ಶಾಕ್ ನೀಡಲಾಗಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ಬ್ರೇಕಿಂಗ್ ಕಾರ್ಯಗಳಿಗಾಗಿ ಎರಡೂ ಕಡೆ ಡಿಸ್ಕ್ ಬ್ರೇಕ್‍‍ಗಳಿವೆ. ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ಫ್ಯಾಟ್ ಬಾಬ್ ಬೈಕಿನ ಮುಂಭಾಗದಲ್ಲಿ 150 ಎಂಎಂ ಹಾಗೂ ಹಿಂಭಾಗದಲ್ಲಿ 180 ಎಂಎಂ ಟಯರ್‍‍ಗಳಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

ರಾಜ್‌ಕುಮಾರ್ ರಾವ್ ಅವರಂತೆ ಬಾಲಿವುಡ್ ಹೆಚ್ಚಿನ ನಟ-ನಟಿಯರು ಬೈಕ್ ಪ್ರಿಯರಾಗಿದ್ದಾರೆ. ಇತ್ತೀಚೆಗೆ ಶಾಹಿದ್ ಕಪೂರ್ ತಮ್ಮ ಹೊಸ ಬಿಎಂಡಬ್ಲ್ಯು ಬೈಕ್‌ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

Article Published On: Tuesday, October 15, 2019, 14:43 [IST]
English summary
Actor Rajkummar Rao Brings Home The Harley-Davidson Fat Bob - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+