ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕಳೆದ ವರ್ಷ ಇಂಟರ್‍‍ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಟ್ವಿನ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಎರಡೂ ಬೈಕುಗಳೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ ಬಹು ಜನಪ್ರಿಯವಾಗಿದ್ದವು. ಮಿಡ್ ಸರಣಿಯ ಬೈಕುಗಳ ಸೆಗ್‍‍ಮೆಂಟಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿದ್ದವು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಸ್ಪರ್ಧಾತ್ಮಕ ದರ ಹಾಗೂ ರೆಟ್ರೊ ಕ್ಲಾಸಿಕ್ ಸ್ಟೈಲಿಂಗ್ ಹೊಂದಿದ್ದ ಕಾರಣಕ್ಕೆ ಬಹುತೇಕ ಗ್ರಾಹಕರು ಈ ಬೈಕುಗಳಿಗೆ ಮಾರು ಹೋದರು. ಈಗ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಬಿ‍ಎಸ್6 ಎಂಜಿನ್‍‍ನೊಂದಿಗೆ ಅಭಿವೃದ್ಧಿಪಡಿಸುತ್ತಿದೆ. ಅಭಿವೃದ್ದಿಪಡಿಸುತ್ತಿರುವ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಇತ್ತೀಚಿಗೆ ರೆಡ್ ಲೈಸೆನ್ಸ್ ಪ್ಲೇಟ್ ಹೊಂದಿರುವ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ತಮಿಳುನಾಡಿನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಬೈಕಿನ ಚಿತ್ರವನ್ನು ಆಟೋ ಮೊಬೈಲ್ ಪ್ರಿಯರಾದ ರಾಮ್ ಶಂಕರ್‍‍ರವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ರಾಯಲ್ ಎನ್‍‍ಫೀಲ್ಡ್ ಚಾಲನೆ ಮಾಡುತ್ತಿದ್ದ ಬೈಕ್ ಸವಾರನ ಜೊತೆಗಿನ ಮಾತುಕತೆಯ ನಂತರ ಈ ಬೈಕ್ ರಾಯಲ್ ಎನ್‍‍ಫೀಲ್ಡ್ ಕಂಪನಿಯ 650 ಸಿಸಿಯ ಬಿ‍ಎಸ್6 ಆವೃತ್ತಿ ಎಂಬುದು ಖಚಿತವಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಬಿ‍ಎಸ್6 ಎಂಜಿನ್ ಹೊಂದಿರುವ ಹೊಸ ರಾಯಲ್ ಎನ್‍‍ಫೀಲ್ಡ್ 650ಸಿಸಿಯ ಬೈಕ್ ಅನ್ನು ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಬಿಎಸ್ 6 ಎಂಜಿನ್‍ ಅಭಿವೃದ್ದಿಪಡಿಸಿದ್ದರೂ, ಈ ಬೈಕುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರಣ ಈ ಬೈಕಿನಲ್ಲಿ ಬೇರೆ ಯಾವುದೇ ಅಪ್‌ಡೇಟ್‍‍ಗಳನ್ನು ಮಾಡಲಾಗಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಈ ಸ್ಪೈ ಚಿತ್ರಗಳಲ್ಲಿ ಕಂಡು ಬಂದಂತೆ ಸ್ಪಾಟ್ ಟೆಸ್ಟ್ ಮಾಡಲಾಗಿರುವ ಬೈಕಿನಲ್ಲಿ, ಎಕ್ಸಾಸ್ಟ್ ತುದಿಯನ್ನು ಸ್ವಲ್ಪಮಟ್ಟಿಗೆ ಹೊರತೆಗೆದಿರುವುದು ಹಾಗೂ ಹಿಂಬದಿ ಸವಾರನ ಸೀಟ್ ಕವರ್‍‍ಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಬಹುಷಃ ಈ ಸೀಟ್ ಕವರ್ ಅನ್ನು ಅಕ್ಸೆಸರಿ ಆಗಿ ನೀಡಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

648 ಸಿಸಿಯ ಟ್ವಿನ್ ಸಿಲಿಂಡರ್ ಏರ್ ಆಯಿಲ್ ಕೂಲ್ಡ್ ಎಂಜಿನ್ ವಿಂಟೇಜ್ ಹೊಂದಿರುವ ಸಾಧ್ಯತೆಗಳಿವೆ. ಇಂಟರ್ನಲ್‌ಗಳು ಆಧುನಿಕವಾಗಿರುವ ಕಾರಣ ಇವುಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್‌ಗ್ರೇಡ್ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಕೇವಲ ಎಂಜಿನ್ ರೀಮ್ಯಾಪ್ ಮಾಡಿದರೆ ಸಾಕಾಗುತ್ತದೆ. ಇದರ ಜೊತೆಗೆ ಎಂಜಿನ್ ಸಿಲಿಂಡರ್ ಭಾಗವನ್ನು ಸಣ್ಣ ಪ್ರಮಾಣದಲ್ಲಿ ಮಾಡಿಫೈ ಮಾಡಬೇಕಾಗುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಬಿ‍ಎಸ್6 ಎಂಜಿನ್ ಸಹ ಇದೇ ಪ್ರಮಾಣದ ಪವರ್ ಹಾಗೂ ಟಾರ್ಕ್ ಉತ್ಪಾದಿಸುವ ಸಾಧ್ಯತೆಗಳಿವೆ. 6 ಸ್ಪೀಡ್‍‍ನ ಗೇರ್‍‍ಬಾಕ್ಸ್ ನಲ್ಲಿಯೂ ಸಹ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿಲ್ಲ. ಹೊಸ ಇಂಟರ್‍‍ಸೆಪ್ಟರ್ 650 ಬೈಕ್ ಬಹುತೇಕ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವಂತೆಯೇ ಇರಲಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಕಂಪನಿಯಲ್ಲಿರುವ ಎಲ್ಲಾ ಸರಣಿಯ ಬೈಕುಗಳನ್ನು ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಲಿದೆ. ಹೊಸ ಬಿ‍ಎಸ್6 ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. 350 ಸರಣಿಯ ಹೊಸ ತಲೆಮಾರಿನ ಬೈಕುಗಳನ್ನು ಸಹ ಬಿಡುಗಡೆಗೊಳಿಸಲಾಗುವುದು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಹೊಸ ತಲೆಮಾರಿನ 350 ಸರಣಿಯ ಬೈಕುಗಳು ಹೊಸ ಬಗೆಯ ಫ್ರೇಂ, ಹೊಸ ಎಂಜಿನ್, ಟ್ರಾನ್ಸ್ ಮಿಷನ್, ಹೆಚ್ಚು ಫೀಚರ್ಸ್ ಹಾಗೂ ಸ್ಟೈಲಿಂಗ್‍‍ನಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಹೊಂದಿರಲಿವೆ. ಹೊಸ ತಲೆಮಾರಿನ ಬೈಕುಗಳನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್6 ರಾಯಲ್ ಎನ್‍‍ಫೀಲ್ಡ್ 650

ಅಭಿವೃದ್ಧಿ ಹಂತದಲ್ಲಿರುವ ಹೊಸ ರಾಯಲ್ ಎನ್‍‍ಫೀಲ್ಡ್ ಬೈಕುಗಳು ಬಿ‍ಎಸ್6 ಜಾರಿಗೊಳ್ಳಲಿರುವ 2020ರ ಏಪ್ರಿಲ್ 1ಕ್ಕೆ ಮುನ್ನ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ತಲೆಮಾರಿನ ಬೈಕುಗಳನ್ನು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ 2020ರಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.

Source: Rushlane

Most Read Articles

Kannada
English summary
2020 Royal Enfield 650 BS6 spied testing - Read in kannada
Story first published: Monday, August 12, 2019, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X