ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತನ್ನ ಬಿಎಸ್-6 ಥಂಡರ್‍‍ಬರ್ಡ್ ಬೈಕ್ ಅನ್ನು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಮಾಡಿದೆ. ಸ್ಪಾಟ್ ಟೆಸ್ಟ್ ನಲ್ಲಿ ಹೊಸ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್‍‍ನ ಹಲವಾರು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಬಿಎಸ್-6 ಥಂಡರ್‍‍ಬರ್ಡ್ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಿರುವುದನ್ನು ಟೀಂ ಬಿಹೆಚ್‍‍ಪಿ ಬಹಿರಂಗಪಡಿಸಿದೆ. 2020ರ ರಾಯಲ್ ಎನ್‍‍ಫೀಲ್ಡ್ ಹೊಸದಾಗಿ ನವೀಕರಿಸಲಾಗಿದ್ದು, ಇದೀಗ ಹೊಸ ಲುಕ್ ಅನ್ನು ಹೊಂದಿದೆ. ಹೊಸ ಬೈಕಿನ ಮುಂಭಾಗದಲ್ಲಿ ಚಿಕ್ಕದಾದ ರೌಂಡ್ ಹೆಡ್‍‍ಲ್ಯಾಂಪ್ ಅನ್ನು ಹೊಂದಿದ್ದು, ಇದು ಕ್ಲಾಸಿ ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಹೊಸ ಥಂಡರ್‍‍ಬರ್ಡ್ ಬೈಕ್ ಹೊಸ ಇಂಧನ ಟ್ಯಾಂಕ್, ಹೊಸ ಸೈಡ್ ಪ್ಯಾನೆಲ್‍ಗಳು ಮತ್ತು ಸ್ಪ್ಲೀಟ್ ಸೀಟಗಳ ಸೆಟ್‍ಅಪ್ ಅನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ 350 ಸಿಸಿ ಬೈಕುಗಳು 346ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 19.8 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

500 ಸಿಸಿ ಬೈಕುಗಳು 499 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು 27.2 ಬಿಹೆಚ್‌ಪಿ ಪವರ್ ಹಾಗೂ 41.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಹಿಂಭಾಗದಲ್ಲಿ ಸ್ಪ್ಲಿಟ್ ಗ್ರ್ಯಾಬ್ ರೈಲ್ ಮತ್ತು ರೌಂಡ್ ಟೇಲ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಹೊಸ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಹೊಸ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿದೆ. ಪ್ರಸ್ತುತ ಥಂಡರ್‍‍ಬರ್ಡ್ ಬೈಕಿನಲ್ಲಿರುವ 350 ಸಿಸಿ ಎಂಜಿನ್ ಅನ್ನು ಬದಲಾಯಿಸಿ 500 ಸಿಸಿ ಎಂಜಿನ್ ಅಳವಡಿಸಲಾಗುತ್ತದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಹೊಸ ಎಂಜಿನ್ ಅನ್ನು ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ಸಿಸಿ ಮಾದರಿಯ ಎಂಜಿನ್ ಅನ್ನು ಹೊಸ ಥಂಡರ್‍‍ಬರ್ಡ್‍‍ನಲ್ಲಿ ಅಳವಡಿಸುವ ಸಾಧ್ಯತೆಗಳಿವೆ. ಇದರಿಂದ ಕಂಪನಿಯ ಯು‍‍ಸಿಇ ಎಂಜಿನ್‍‍ಗಿಂತ ಪವರ್‍‍ಫುಲ್‍ ಆಗಿರಲಿದೆ. ಈ ಎಂಜಿನ್ ಕಡಿಮೆ ಮಾಲಿನ್ಯ ಮತ್ತು ಆಪ್ಟಿಮೈಡ್ ಪವರ್ ವಿತರಣೆಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿರುತ್ತದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಹೊಸ ಡಬಲ್ ಕ್ರ್ಯಾಡಲ್ ಚಾಸಿಸ್ ಅನ್ನು ಹೊಂದಿದೆ. ಇದು ಟಿಲಿಸ್ಕೋಪಿಕ್ ಫೋರ್ಕ್ಸ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೈಕಿನಲ್ಲಿ ಮುಂಭಾಗದ ಡಿಸ್ಕ್ ರೋಟರ್ ಅನ್ನು ಎಡಭಾಗದ ಹ್ಯಾಂಡಲ್‍‍ಬಾರ್‍‍ನಲ್ಲಿ ಅಳವಡಿಸಲಾಗಿದೆ. ಹೊಸ ಬೈಕಿನಲ್ಲಿ ಟಯರ್ ಅನ್ನು ಬಲಭಾಗದ ಯು‍ನಿ‍‍ಟ್‍ನಲ್ಲಿ ಅಳವಡಿಸಲಾಗಿದೆ. ಹಿಂಭಾಗದಲ್ಲಿ ಬ್ರೇಕಿಂಗ್ ಸಿಸ್ಟಂಗಳನ್ನು ಸಣ್ಣ ಡಿಸ್ಕ್ ರೋಟರ್‍‍‍ಗಳನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಇದರೊಂದಿಗೆ ಡ್ಯುಯಲ್ ಚಾನೆಲ್ ಎ‍‍ಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ತಲೆಮಾರಿನ ಥಂಡರ್‍‍ಬರ್ಡ್ ಬೈಕಿನಲ್ಲಿ ನವೀಕರಿಸಲಾದ ಪುಟ್‍‍ಪೆಗ್‍‍‍ಗಳು ಮತ್ತು ನವೀಕರಿಸಿದ ಹ್ಯಾಂಡಲ್‍‍ಬಾರ್‍‍ಗಳು ಹೆಚ್ಚು ಆರಾಮದಾಯಕ ರೈಡ್‍‍ಗೆ ಸಹಕಾರಿಯಾಗಲಿವೆ. 2020ರ ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.64 ಲಕ್ಷಗಳಾಗಿದೆ. ಹೊಸ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಬೆಲೆಯು ತುಸು ಹೆಚ್ಚಾಗಿರಲಿದೆ. ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಹೀಂದ್ರಾ ಮೊಜೊ 300 ಎಬಿಎಸ್, ಬಜಾಜ್ ಡೊಮಿನಾರ್ 400 ಮತ್ತು ಇಂಪೀರಿಯಲ್ 400 ಬೈಕುಗಳಿಗೆ ಪೈಪೋಟಿ ನೀಡಲಿದೆ.

Article Published On: Friday, December 6, 2019, 19:22 [IST]
English summary
All-New 2020 Royal Enfield Thunderbird Spied Undisguised; Launch Soon - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+