ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ದೆಹಲಿ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಕ್ರಯೋನ್ ಮೋಟಾರ್ಸ್ ತನ್ನ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕ್ರಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಹಲವಾರು ವೈಶಿಷ್ಟ್ಯಗಳು ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಜನಪ್ರಿಯ ವಾಹನ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಸೆಗ್‍‍ಮೆಂಟಿನಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಕ್ರಯೋನ್ ಕಂಪನಿಯು ಸಿಟಿ ಪ್ರಯಾಣಿಕರಿಗೆ ಹೆಚ್ಚು ಸೂಕ್ತವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗಳಿಸಿದೆ. ಕ್ರಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಆಕರ್ಷಕ ಡ್ಯುಯಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಇ-ಸ್ಕೂಟರ್ ಹ್ಯಾಂಡಲ್‍‍ಬಾರ್‍‍ಗಳ ಬಳಿ ಎಲ್‍ಇಡಿ ಇಂಡಿಕೇಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಶಾರ್ಪ್ ಲೈನ್ಸ್ ಗಳೊಂದಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಸ್ಕೂಟರಿನ ಸೀಟ್‍‍ಗಳು ದೊಡ್ಡದಾಗಿದ್ದು, ರೈಡರ್ ಮತ್ತು ಸಹ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಕಂಪನಿಯು ಬ್ಯಾಕ್‍ರೆಸ್ಟ್ ಅನ್ನು ಅಳವಡಿಸಿದ್ದು, ಇದು ಸಹ ಪ್ರಯಾಣಿಕನಿಗೆ ಹೆಚ್ಚು ಸಹಕಾರಿಯಾಗಿದೆ.

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಕ್ರಯೋನ್ ಎಲೆಕ್ಟ್ರಿಕ್ ಸ್ಕೂಟರಿ‍ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಕಿಲೆಸ್ ಇಗ್ನಿಷನ್, ಸೆಂಟ್ರಲ್ ಲಾಕಿಂಗ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ರಿವರ್ಸ್ ಅಸಿಸ್ಟ್ ಗಳಿವೆ. ಇನ್ನೂ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳಾದ ಜಿಯೋ ಟ್ಯಾಗಿಂಗ್, 2.1 ಯುಎಸ್‍ಬಿ ಪೋರ್ಟ್ ಜೊತೆಯಲ್ಲಿ ಮೊಬೈಲ್ ಜಾರ್ಜಿಂಗ್ ಸೌಲಭ್ಯ, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಅಲಾಯ್ ವ್ಹೀಲ್ ಮತ್ತು ದೊಡ್ಡದಾದ ಬೂಟ್ ಸ್ಪೆಸ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಕ್ರಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ 250 ವ್ಯಾಟ್ ಬಿ‍ಎಸ್‍ಡಿಸಿ ಮೋಟಾರ್ ಅನ್ನು ಹೊಂದಿದೆ. ಈ ಮೋಟಾರ್ 48 ವಿ ವಿಆರ್‍ಎಲ್‍ಎ(ವಾಲ್ಟ್ ರೆಗ್ಯುಲೇಟೆಡ್ ಲೀಡ್ ಆಸಿಡ್) ಬ್ಯಾಟರಿಯನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ 60 ವಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಚ್ ಮಾಡಿದರೆ 70 ಕಿ.ಮೀ ಚಲಿಸುತ್ತದೆ. ಸ್ಕೂಟರ್ ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಎನ್ವಿ ಎಲೆಕ್ಟ್ರಿಕ್ ಸ್ಕೂಟರ್‍‍ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇ-ಎಬಿಎಸ್(ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಎಲೆಕ್ಟ್ರಿಕ್ ಸ್ಕೂಟರ್ ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಸೂಪರ್ ವೈಟ್, ಸೂಥಿಂಗ್ ಬ್ಲೂ ಮತ್ತು ಫೀಸ್ಟ್ ಆರೆಂಜ್ ಬಣ್ಣಗಳಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್

ಕ್ರೆಯೋನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್‍‍ನ ಕಡಿಮೆ-ವೇಗದ ಸರಣೆಯಲ್ಲಿ ಎರಡನೇಯ ಮಾದರಿಯಾಗಿದೆ. ಕಂಪನಿಯು ದೇಶಿಯ ಮಾರುಕಟ್ಟೆಗೆ ಹೆಚ್ಚಿನ ಪ್ರೀಮಿಯಂ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅಭಿವೃದ್ದಿ ಪಡಿಸುವ ಕೆಲಸದಲ್ಲಿ ತೊಡಗಿದೆ ಎನ್ನಲಾಗಿದೆ. ಕ್ರೆಯಾನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಅವಾನ್ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರಿ‍ಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, November 19, 2019, 12:11 [IST]
English summary
Crayon Envy Electric Scooter Launched In India: New Low-Speed EV From Delhi-Based Start-Up - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+