ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಜೆಮೊಪಾಯ್ ಎಲೆಕ್ಟ್ರಿಕ್, ಗೊರೀನ್ ಇ ಮೊಬಿಲಿಟಿ ಹಾಗೂ ಒಪಾಯ್ ಎಲೆಕ್ಟ್ರಿಕ್ ನಡುವಿನ ಜಂಟಿ ಸಹಭಾಗಿತ್ವವಾಗಿದೆ. ಈ ಕಂಪನಿಯನ್ನು 2016ರಲ್ಲಿ ಅಮಿತ್ ರಾಜ್ ಸಿಂಗ್ ಹಾಗೂ ಭಾನು ಕುಮಾರ್‍ ಎಂಬುವವರು ಸ್ಥಾಪಿಸಿದರು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಈ ಜಂಟಿ ಸಹಭಾಗಿತ್ವದಲ್ಲಿ ಜೆಮೊಪಾಯ್ ಕಂಪನಿಯು ಭಾರತದ ಪರಿಸ್ಥಿತಿಗಳಿಗೆ ಸರಿ ಹೊಂದುವ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲಿದೆ. ಒಪಾಯ್ ಎಲೆಕ್ಟ್ರಿಕ್ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳಲ್ಲಿ ಒಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಈ ಕಂಪನಿಯು ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ತಯಾರಿಸುವುದರಲ್ಲಿ 15 ವರ್ಷಗಳ ಅನುಭವವನ್ನು ಹೊಂದಿದೆ. ಇದುವರೆಗೂ ಒಪಾಯ್ ಎಲೆಕ್ಟ್ರಿಕ್ ಕಂಪನಿಯು ಏಷ್ಯಾ, ಯುರೋಪ್ ಹಾಗೂ ಅಮೇರಿಕಾದಲ್ಲಿ 1.5 ಕೋಟಿಗೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಮಾರಾಟ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಒಪಾಯ್ ಕಂಪನಿಯು ಸದ್ಯಕ್ಕೆ ಯುರೋಪ್‍ ಹಾಗೂ ಲ್ಯಾಟಿನ್ ಅಮೇರಿಕಾದಲ್ಲಿ ಯುರೋ 4 ಪ್ರಮಾಣಿಕೃತ ವಾಹನಗಳನ್ನು ಮಾರಾಟ ಮಾಡುತ್ತಿದೆ. ಒಪಾಯ್ ಕಂಪನಿಯು ಪ್ರಪಂಚಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗಾಗಿ 25 ಪೇಟೆಂಟ್‍‍ಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಕಂಪನಿಯು ವಿಶ್ವ ಮಾರುಕಟ್ಟೆಯ ತನ್ನ ಸರಣಿಯಲ್ಲಿ 70 ಸರ್ಟಿಫೈಡ್ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಹಾಗೂ 3 ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ. ಈಗ ಭಾರತದ ಯುವಜನತೆಗೆ ಹಾಗೂ ನಗರದ ಬಹು ಸಂಖ್ಯೆಯ ಜನರಿಗೆ ಮೊಬಿಲಿಟಿ ಸೇವೆಯನ್ನು ನೀಡುವ ಉದ್ದೇಶದಿಂದ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪುಣೆಯಲ್ಲಿ ಬಿಡುಗಡೆಗೊಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಇದರ ಜೊತೆಗೆ ಪುಣೆಯಲ್ಲಿ ತನ್ನ ಮೊದಲ ಶೋರೂಂ ಅನ್ನು ಸಹ ಆರಂಭಿಸಿದೆ. ಮೆ. ಎಲೆಕ್ಟ್ರಿಕ್ ಬೈಕ್ ಎಂಬ ಹೆಸರಿನ ಈ ಶೋರೂಂ ಪುಣೆಯ ಮಾರ್ಕೆಟ್ ಯಾರ್ಡ್ ರಸ್ತೆಯಲ್ಲಿದೆ. ಈ ಶೋರೂಂನಲ್ಲಿ ಜೆಮೊಪಾಯ್ ಎಲೆಕ್ಟ್ರಿಕ್ ಸ್ಕೂಟರಿನ ಪೂರ್ತಿ ಸರಣಿಯನ್ನು ಮಾರಾಟ ಮಾಡಲಾಗುವುದು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಸ್ಕೂಟರ್ ಮಾರಾಟದ ಜೊತೆಗೆ ಮಾರಾಟದ ನಂತರದ ಸೇವೆಗಳಾದ ರೆಗ್ಯುಲರ್ ಸರ್ವಿಸಿಂಗ್, ಮೆಂಟೆನೆನ್ಸ್, ಸಣ್ಣ ಪುಟ್ಟ ರಿಪೇರಿ ಹಾಗೂ ಬಿಡಿಭಾಗಗಳನ್ನು ಮಾರಾಟ ಮಾಡಲಾಗುವುದು. ಜೆಮೊಪಾಯ್ ಎಲೆಕ್ಟ್ರಿಕ್ ದೆಹಲಿ ಮೂಲದ ಕಂಪನಿಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಜೆಮೊಪಾಯ್ ಕಂಪನಿಯು ಸದ್ಯಕ್ಕೆ ರೈಡರ್ ಹಾಗೂ ಆಸ್ಟಿಡ್ ಲೈಟ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಿದೆ. ರೈಡರ್ ಸ್ಕೂಟರಿನಲ್ಲಿ ಅಳವಡಿಸಲಾಗಿರುವ 250 ವ್ಯಾಟ್‍‍ನ ಮೋಟಾರ್, 48ವ್ಯಾ/28 ಎ‍‍ಹೆಚ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ಪವರ್ ಪಡೆಯುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 70 ಕಿ.ಮೀವರೆಗೂ ಚಲಿಸುತ್ತದೆ. ಗ್ರಾಹಕರು ಈ ಸ್ಕೂಟರ್ ಅನ್ನು ಐದು ಬಣ್ಣ ಹಾಗೂ ಹಲವು ವಿಧದ ಆಕ್ಸೆಸರಿಸ್‍‍ಗಳೊಂದಿಗೆ ಖರೀದಿಸಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಆಸ್ಟಿಡ್ ಲೈಟ್ ಸ್ಕೂಟರಿನಲ್ಲಿ 1.7 ಕಿ.ವ್ಯಾಟ್‍ನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಸ್ಪೋರ್ಟ್ಸ್, ಸಿಟಿ ಹಾಗೂ ಎಕಾನಾಮಿ ಎಂಬ ಮೂರು ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 75 ಕಿ.ಮೀನಿಂದ 90 ಕಿ.ಮೀವರೆಗೂ ಚಲಿಸುತ್ತದೆ. ಡ್ಯುಯಲ್ ಬ್ಯಾಟರಿ ಹೊಂದಿದರೆ ಈ ಸ್ಕೂಟರ್ 150 ಕಿ.ಮೀನಿಂದ 180 ಕಿ.ಮೀವರೆಗೂ ಚಲಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಈ ಸ್ಕೂಟರ್ ಅನ್ನು ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಸ್ಕೂಟರ್‍‍ಗಳೂ ಡಿ‍ಆರ್‍ಎಲ್ ಹೊಂದಿರುವ ಎಲ್‍ಇ‍‍ಡಿ ಹೆಡ್‍‍ಲೈಟ್, ಡಿಜಿಟಲ್ ಸ್ಪೀಡೊಮೀಟರ್, ಫ್ರಂಟ್ ಡಿಸ್ಕ್, ರೇರ್ ಡ್ರಂ ಬ್ರೇಕ್ ಹಾಗೂ ಎರಡೂ ತುದಿಯಲ್ಲಿ ಹೈಡ್ರಾಲಿಕ್ ಸಸ್ಪೆಂಷನ್‍‍ಗಳಿವೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಈ ಸ್ಕೂಟರ್‍‍ಗಳು ಎ‍ಆರ್‍ಎ‍ಐ ಹಾಗೂ ಯುರೋ ಪ್ರಮಾಣಪತ್ರವನ್ನು ಹೊಂದಿದ್ದು, ಬ್ಯಾಟರಿ ಪ್ಯಾಕ್ ಮೇಲೆ 2 ವರ್ಷದ ವಾರಂಟಿ ನೀಡಲಾಗುವುದು. ಜೆಮೊಪಾಯ್ ಕಂಪನಿಯು ಈಗಾಗಲೇ ಭಾರತ ಹಾಗೂ ನೇಪಾಳದಲ್ಲಿ 50 ಡೀಲರ್‍‍ಶಿಪ್‍‍ಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಕಂಪನಿಯು ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ಸೆಗ್‍‍ಮೆಂಟ್‍‍ನಲ್ಲಿ ಗುಣಮಟ್ಟದ ವಾಹನಗಳನ್ನು ಮಾರಾಟ ಮಾಡುವುದರ ಜೊತೆಗೆ ಗ್ರಾಹಕರಿಗೆ, ಮಾರಾಟದ ನಂತರವೂ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್

ಮುಂಬರುವ ದಿನಗಳಲ್ಲಿ ಜೆಮೊಪಾಯ್ ಕಂಪನಿಯು ಮಹಾರಾಷ್ಟ್ರದಲ್ಲಿ 50ಕ್ಕೂ ಹೆಚ್ಚು ಡೀಲರ್‍‍ಶಿಪ್‍‍ಗಳನ್ನು ತೆರೆಯಲು ಬಯಸಿದೆ.

More from DriveSpark

Article Published On: Thursday, December 12, 2019, 11:02 [IST]
English summary
Gemopai electric scooters launched in Pune - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+