ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ 50ಕ್ಕೂ ಹೆಚ್ಚು ಮಾದರಿಯ ಬಿಎಸ್ 4 ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಬೈಕುಗಳಲ್ಲಿ ಸ್ಪ್ಲೆಂಡರ್ ಹಾಗೂ ಹೆಚ್‍ಎಫ್ ಡೀಲಕ್ಸ್ ಸರಣಿಯ ಬೈಕುಗಳು ಸೇರಿವೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಇದೊಂದು ಮಹತ್ವದ ಹೆಜ್ಜೆಯಾಗಿದೆ. ಏಕೆಂದರೆ ಪ್ರತಿ ತಿಂಗಳು ಸ್ಪ್ಲೆಂಡರ್ ಹಾಗೂ ಹೆಚ್‌ಎಫ್ ಡಿಲಕ್ಸ್ ಮಾದರಿಗಳ ಸುಮಾರು 4.5 ಲಕ್ಷ ಯುನಿಟ್‌ಗಳು ಮಾರಾಟವಾಗುತ್ತವೆ. ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಡೇಟ್‍‍ಗೊಳಿಸಲು ಬಯಸಿದೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಬಿ‍ಎಸ್ 6ನ ಹೊಸ ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಗಡುವಿನೊಳಗೆ ಬಿ‍ಎಸ್ 6 ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಬೇಕಿರುವುದರಿಂದ ಹೀರೋ ಮೋಟೊಕಾರ್ಪ್ ಬಿ‍ಎಸ್ 4 ಎಂಜಿನ್ ಹೊಂದಿರುವ ತನ್ನ ಸರಣಿಯಲ್ಲಿರುವ ಸ್ಪ್ಲೆಂಡರ್, ಹೆಚ್ಎಫ್ ಡೀಲಕ್ಸ್, ಗ್ಲಾಮರ್ ಹಾಗೂ ಪ್ಲೆಷರ್ ಮಾದರಿಯ ಬೈಕುಗಳನ್ನು ಸ್ಥಗಿತಗೊಳಿಸಿದೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಇದೇ ವೇಳೆ ಇನ್ನು ಹಲವಾರು ಬೈಕುಗಳನ್ನು ಸ್ಥಗಿತಗೊಳಿಸಲಾಗುವುದು. ಈ ವಿಷಯವನ್ನು ಕಂಪನಿಯ ಡೀಲರ್‍‍ಗಳಿಗೆ ತಿಳಿಸಲಾಗಿದೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಕಂಪನಿಯು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಈ ಹಿನ್ನೆಲೆಯಲ್ಲಿ ಬಿ‍ಎಸ್ 4ನಿಂದ ಬಿ‍ಎಸ್ 6 ನಿಯಮಗಳಿಗೆ ಕಂಪನಿಯು ಡೀಲರ್‍‍ಗಳಿಗೆ ಹಾಗೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ಸಾಗುವ ನಿರೀಕ್ಷೆಗಳಿವೆ. ಬಿಎಸ್ 6 ಮೇಲ್ವಿಚಾರಣೆ ವಹಿಸುವ ಹೀರೋ ಮೋಟೊಕಾರ್ಪ್ ಇಂಟಿರಿಂ ಕೌನ್ಸಿಲ್‍‍ನಲ್ಲಿ ಕಂಪನಿಯ ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್ ಮುಖ್ಯಸ್ಥ ಮಾಲೋ ಲೆ ಮಾಸನ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾರವರಿದ್ದಾರೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಈಗಾಗಲೇ ತನ್ನ ಮೊದಲ ಬಿಎಸ್ 6 ಬೈಕ್ ಆದ ಸ್ಪ್ಲೆಂಡರ್ ಸ್ಮಾರ್ಟ್ ಐ 3 ಎಸ್ ಅನ್ನು ಬಿಡುಗಡೆಗೊಳಿಸಿದೆ. ಬಿ‍ಎಸ್ 6 ನಿಯಮಗಳ ಗಡುವು ವೇಗವಾಗಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಬಿಎಸ್ 6 ಎಂಜಿನ್‍‍ಗೆ ವೇಗವಾಗಿ ಅಪ್‍‍ಡೇಟ್‍‍ಗೊಳಿಸುತ್ತಿದೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

2020ರ ಏಪ್ರಿಲ್ 1ರಿಂದ, ಎಲ್ಲಾ ವಾಹನ ತಯಾರಕ ಕಂಪನಿಗಳು ಬಿ‍ಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ತಯಾರಿಸಬೇಕಾಗಿದೆ. ಈ ಗಡುವನ್ನು ಜಗತ್ತಿನ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೀಡಲಾಗಿದೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಬಿ‍ಎಸ್ 4 ನಿಂದ ಬಿಎಸ್ 6ಗೆ ಬದಲಾದ ನಂತರ, ಬಿಎಸ್ 4 ವಾಹನಗಳ ರಿಜಿಸ್ಟ್ರೇಷನ್ ಅನ್ನು ನಿಲ್ಲಿಸಲಾಗುತ್ತದೆ. ಆದರೆ ಈಗಾಗಲೇ ರಿಜಿಸ್ಟ್ರೇಷನ್ ಆಗಿರುವ ಬಿಎಸ್‌ 4 ವಾಹನಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಅವುಗಳು ಹಾಗೆಯೇ ಮುಂದುವರೆಯಲಿವೆ.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ಈ ಬದಲಾವಣೆಯಲ್ಲಿನ ಮತ್ತೊಂದು ಪರಿಣಾಮವೆಂದರೆ ಬಿಎಸ್‌ 6 ವಾಹನಗಳ ಬೆಲೆ ಏರಿಕೆಯಾಗಲಿದೆ. ಇದರ ಜೊತೆಗೆ ಮಾರಾಟವಾಗದೇ ಉಳಿದಿರುವ ಬಿ‍ಎಸ್ 4 ವಾಹನಗಳನ್ನು ಮಾರಾಟ ಮಾಡುವ ಕಾರಣಕ್ಕೆ ಬಿ‍ಎಸ್ 4 ವಾಹನಗಳ ಬೆಲೆಯನ್ನು ಕಡಿಮೆ ಮಾಡಲಾಗುವುದು.

ಬಿ‍ಎಸ್ 4 ಬೈಕ್‍‍ಗಳನ್ನು ಸ್ಥಗಿತಗೊಳಿಸಲಿದೆ ಹೀರೋ ಮೋಟೊಕಾರ್ಪ್

ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ಗೆ ಬದಲಾಯಿಸುವುದರ ಜೊತೆಗೆ ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. ಹೀರೋ ಮೋಟೊಕಾರ್ಪ್ ಸದ್ಯಕ್ಕೆ ಯಾವುದೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿಲ್ಲವಾದರೂ, ಎಲೆಕ್ಟ್ರಿಕ್ ಸ್ಕೂಟರ್‍ ತಯಾರಕ ಕಂಪನಿಯಾದ ಅಥೆರ್ ಎನರ್ಜಿಯಲ್ಲಿ ಸ್ವಲ್ಪ ಪ್ರಮಾಣದ ಶೇರುಗಳನ್ನು ಹೊಂದಿದೆ.

Article Published On: Friday, November 29, 2019, 11:18 [IST]
English summary
Hero BS4 bikes discontinued. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+