ಕರಿಜ್ಮಾದ ಯಾವುದೇ ಬೈಕ್ ಮಾರಾಟವಾಗುತ್ತಿಲ್ಲ..!

ಹೀರೋ ಮೋಟೊಕಾರ್ಪ್, ತನ್ನ ಮೊದಲ ತಲೆಮಾರಿನ ಕರಿಜ್ಮಾ ಬೈಕ್ ಅನ್ನು 2003ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಮೊದಲ ತಲೆಮಾರಿನ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ನಂತರದ ವರ್ಷಗಳಲ್ಲಿ ಹೀರೋ ಮೋಟೊಕಾರ್ಪ್ ಈ ಬೈಕಿನಲ್ಲಿ ಹಲವಾರು ಅಪ್‍‍ಡೇಟ್‍‍ಗಳನ್ನು ಮಾಡಿತು. ಆದರೆ ಈ ಅಪ್‍‍ಡೇಟ್‍‍ಗಳಿಂದಾಗಿ ಮೊದಲಿನ ವೇಗವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.

ಕರಿಜ್ಮಾದ ಯಾವುದೇ ಬೈಕ್ ಮಾರಾಟವಾಗುತ್ತಿಲ್ಲ..!

ಕಳೆದ ಕೆಲವು ತಿಂಗಳುಗಳಿಂದ, ಹೀರೋ ಕಂಪನಿಯ ದೇಶಿಯ ದ್ವಿಚಕ್ರ ವಾಹನದ ಸೆಗ್‍‍ಮೆಂಟಿನಲ್ಲಿ ಕರಿಜ್ಮಾದ ಯಾವುದೇ ಬೈಕುಗಳ ಮಾರಾಟವಾಗಿಲ್ಲ. ಮಾರಾಟದ ಅಂಕಿ ಅಂಶಗಳ ಪ್ರಕಾರ ಫೆಬ್ರವರಿ 2019ರಿಂದ ಈ ಬೈಕಿನ ಒಂದೇ ಒಂದು ಬೈಕು ಸಹ ಮಾರಾಟವಾಗಿಲ್ಲ. ಆದರೆ ಹೀರೋ ಕಂಪನಿಯು ಈ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳುವ ತನ್ನ ನಿರ್ಧಾರದಲ್ಲಿ ಅಚಲವಾಗಿ ಉಳಿದಿದೆ. ಈ ಬೈಕ್‍‍ನ ಉತ್ಪಾದನೆಯು ಸ್ಥಗಿತಗೊಳ್ಳುವುದಿಲ್ಲವೆಂದು ಹಾಗೂ ಭಾರತದಲ್ಲಿ ಈ ಬೈಕ್ ತನ್ನ ಉತ್ಪನ್ನ ಶ್ರೇಣಿಯ ಒಂದು ಭಾಗವಾಗಿ ಉಳಿಯಲಿದೆ ಎಂದು ಹೀರೋ ಮೋಟೊಕಾರ್ಪ್ ದೃಢಪಡಿಸಿದೆ.

ಕರಿಜ್ಮಾದ ಯಾವುದೇ ಬೈಕ್ ಮಾರಾಟವಾಗುತ್ತಿಲ್ಲ..!

ಕರಿಜ್ಮಾ ಬೈಕ್ ಅನ್ನು ರಫ್ತು ಮಾಡುವ ಕಾರಣ ಈ ಬೈಕಿನ ಉತ್ಪಾದನೆಯನ್ನು ಮುಂದುವರೆಸಲಾಗುವುದು ಎಂದು ಹೀರೋ ಕಂಪನಿ ಹೇಳಿದೆ. ಹೀರೋ ಮೋಟೊಕಾರ್ಪ್ ಮನಿ ಕಂಟ್ರೋಲ್‌ನೊಂದಿಗೆ ಮಾತನಾಡಿ ಕರಿಜ್ಮಾ ಬೈಕಿನ ಉತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಈ ಬೈಕ್ ನಮ್ಮ ಪೋರ್ಟ್‍‍ಫೋಲಿಯೋದ ಭಾಗವಾಗಿ ಮುಂದುವರೆಯಲಿದ್ದು, ಈ ಬೈಕ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದೆ.

ಕರಿಜ್ಮಾದ ಯಾವುದೇ ಬೈಕ್ ಮಾರಾಟವಾಗುತ್ತಿಲ್ಲ..!

ಹೀರೋ ಕರಿಜ್ಮಾ ಬೈಕ್, ಬಿಡುಗಡೆಯಾದಾಗ ಪ್ರಬಲ ಎಂಜಿನ್ ಹೊಂದಿದ್ದ ದೇಶದ ಮೊದಲ ಪೂರ್ಣ ಪ್ರಮಾಣದ ಫೇರ್ಡ್ ಬೈಕುಗಳಲ್ಲಿ ಒಂದಾಗಿತ್ತು. ಆ ಸಮಯದಲ್ಲಿ ಹೀರೋ ಕಂಪನಿಯ ಇತರ ಬೈಕುಗಳಿಗಿಂತ ಎರಡು ಪಟ್ಟು ಜನಪ್ರಿಯತೆಯನ್ನು ಹೊಂದಿತ್ತು. ಇದು ಪ್ರೀಮಿಯಂ ಬೈಕ್ ಸೆಗ್‍‍ಮೆಂಟಿನಲ್ಲಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಹೀರೋ ಕಂಪನಿ ಮಾಡಿದ ಮೊದಲ ಪ್ರಯತ್ನವಾಗಿತ್ತು. ಹೀರೋ ಮೊಟೊಕಾರ್ಪ್ ಇತ್ತೀಚೆಗೆ ಪ್ರೀಮಿಯಂ ಸೆಗ್‍‍ಮೆಂಟಿನಲ್ಲಿ ಎಕ್ಸ್‌ಪಲ್ಸ್ 200, ಎಕ್ಸ್‌ಪಲ್ಸ್ 200 ಟಿ ಹಾಗೂ ಎಕ್ಸ್ ಟ್ರೀಮ್ 200 ಎಸ್ ಎಂಬ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಈ ಎಲ್ಲಾ ಮೂರು ಹೊಸ ಬೈಕುಗಳು ಒಂದೇ ರೀತಿಯ 199.6 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು 18.1 ಬಿಹೆಚ್‌ಪಿ ಹಾಗೂ 17.1 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈಗಿನ ತಲೆಮಾರಿನ ಹೀರೋ ಕರಿಜ್ಮಾ ಝಡ್‌ಎಂಆರ್ ಬೈಕಿನಲ್ಲಿ 223 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ ಅಳವಡಿಸಲಾಗಿದ್ದು, 20 ಬಿಹೆಚ್‌ಪಿ ಹಾಗೂ 19 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಕರಿಜ್ಮಾದ ಯಾವುದೇ ಬೈಕ್ ಮಾರಾಟವಾಗುತ್ತಿಲ್ಲ..!

ಕರಿಜ್ಮಾ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿ ಬಿಡುಗಡೆ ಮಾಡಿದ ಮೊದಲ ಪ್ರೀಮಿಯಂ ಬೈಕುಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಆದರೆ ಹೊಸ ಅಪ್‍‍ಡೇಟ್‍‍ಗಳನ್ನು ಪಡೆದ ನಂತರ ಬೈಕ್ ಮೊದಲಿನ ವೇಗವನ್ನು ಹೊಂದಲು ವಿಫಲವಾಯಿತು. ಹೀರೋ ಕರಿಜ್ಮಾ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 220ಎಫ್ ಹಾಗೂ ಕೆಟಿಎಂ ಡ್ಯೂಕ್ 200 ಬೈಕುಗಳಿಗೆ, ಆ ಬೈಕುಗಳ ಆರಂಭಿಕ ದಿನಗಳಲ್ಲಿ ಪೈಪೋಟಿ ನೀಡುತ್ತಿತ್ತು.

Article Published On: Thursday, July 4, 2019, 18:40 [IST]
English summary
Hero Karizma Sales Down To 0 Units In India — Will Continue To Be Available For Export Markets - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+