ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕಾ

ಸಧ್ಯ 125ಸಿಸಿ ಸ್ಕೂಟರ್ ಸೆಗ್ಮೆಂಟ್‍ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಹೋಂಡಾ ಆಕ್ಟೀವಾ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲು ಹೀರೊ ಮೋಟೊಕಾರ್ಪ್ ಸಂಸ್ಥೆಯು ಹಲವಾರು ಸ್ಕೂಟರ್‍‍ಗಳನ್ನು ಬಿಡುಗಡೆ ಮಾಡಿದೆ. ಇದೀಗ ಸಂಸ್ಥೆಯು ಇದೇ ಮೇ ತಿಂಗಳಿನಲ್ಲಿ ತಮ್ಮ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್ ಅನ್ನು ಸಹ ಬಿಡುಗಡೆಗೊಳಿಸುವುದರ ಬಗ್ಗೆ ಮಾಹಿತಿಯನ್ನು ನೀಡಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಹೀರೋ ಮೋಟೊಕಾರ್ಪ್ ಸಂಸ್ಥೆಯು ಅಕ್ಟೋಬರ್ 2018ರಲ್ಲಿ ತಮ್ಮ ಡೆಸ್ಟಿನಿ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, 16,047 ಯೂನಿಟ್ ಮಾರಾಟವಾಗುವ ಮೂಲಗ ಕಡಿಮೆ ಸಮಯದಲ್ಲಿ ಟಾಪ್ 10 ಸ್ಕೂಟರ್ ಮಾರಾಟದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೆ 2019ರ ಜನವರಿಯಲ್ಲಿ 20,000 ಮತ್ತು ಫೆಬ್ರವರಿ ತಿಂಗಳಿನಲ್ಲಿ ಸುಮಾರು 24,000 ಯೂನಿಟ್ ಮಾರಾಟಗೊಂಡು ಟಿವಿಎಸ್ ಎನ್‍ಟೊರ್ಕ್ 125 ಸ್ಕೂಟರ್ ಅನ್ನು ಹಿಂದಿಕ್ಕಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಹೀರೋ ಸಂಸ್ಥೆಯ ವಿಶೇಷವಾದ ಐ3ಎಸ್ ಐಡಲ್ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿಯನ್ನು ಪಡೆದ ಹೊಸ ಡ್ಯುಯೆಟ್ 125 ಮತ್ತು ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್‍‍‍ಗಳನ್ನು 2018ರ ಫೆಬ್ರುವರಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಕಾಣಿಸಿಕೊಂಡಿತ್ತು. ಅನಾವರಣಗೊಂಡಾಗಿನಿಂದಲೂ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್ ಬಿಡುಗಡೆಯ ಬಗ್ಗೆ ಸುಳಿವು ಸಿಗಲಿಲ್ಲವಾದರೂ, ಇದೀಗ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಎಂಜಿನ್ ಸಾಮರ್ಥ್ಯ

ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್ ಈ ಬಾರಿ ಬಿಎಸ್-6 ಆಧಾರಿತ 124.6ಸಿಸಿ ಸಿಂಗಲ್ ಸಿಲೆಂಡರ್ ಏರ್ ಕೂಲ್ಡ್ ಎಂಜಿನ್ ಸಾಹಾಯದಿಂದ ಹೆಚ್ಚು ಸಾಮರ್ಥ್ಯವನ್ನು ಒದಗಿಸಲಿದ್ದು, 8.70 ಬಿಹೆಚ್‍ಪಿ ಮತ್ತು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಇದರಲ್ಲಿ ಐ3ಎಸ್ ಟೆಕ್ನಾಲಜಿ ನೀಡಲಾದ ಕಾರಣ ಹೆಚ್ಚು ಮೈಲೇಜ್ ನೀಡಬಲ್ಲದು ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಪ್ರಸ್ತುತ ಮಾರಾಟವಾಗುತ್ತಿರುವ ಮ್ಯಾಸ್ಟ್ರೊ ಎಡ್ಜ್ ಸ್ಕೂಟರ್‍‍‍ಗಳು 110ಸಿಸಿ ಏರ್ ಕೂಲ್ಡ್ ಎಂಜಿನ್ 8 ಬಿಹೆಚ್‍ಪಿ ಮತ್ತು 8.7ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಬಾಹ್ಯವಾಗಿ ಹೊಸ ಸ್ಕೂಟರ್‍‍ಗಳು ಪ್ರೀಮಿಯಂ ಲುಕ್ ಅನ್ನು ಸಹ ಪಡೆದುಕೊಳ್ಳಲಿದ್ದು, ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಹೊಸ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್‍‍ಗಳು ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್) ಹೊಂದಿದ್ದು, ಇದರೊಂದಿಗೆ ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್, ಪಾಸ್ ಸ್ವಿಚ್, ಎಕ್ಸ್ಟರ್ನಲ್ ಫ್ಯುಯಲ್ ಪಿಲ್ಲಿಂಗ್ ಇನ್ನೂ ಹಲವಾರು ಫೀಚರ್ಸನ್ನು ಹೊಂದಿವೆ ಎನ್ನಲಾಗಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಹೀರೋ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್‍‍ಗಳು ಈ ಬಾರಿ ಡ್ರಂ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಮಾದರಿಗಳಲ್ಲಿ ಲಭ್ಯವಿದ್ದು, ಹತ್ತುಹಲವಾರು ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ. ಈ ಸ್ಕೂಟರ್ ಬಿಡುಗಡೆಗೊಂಡಲ್ಲಿ ಎಷ್ಟರ ಮಟ್ಟಿಗೆ ಜನಪ್ರೀಯತೆಯನ್ನು ಕಾಣಲಿದೆ ಎಂದು ಕಾಯ್ದು ನೋಡಬೇಕಿದೆ.

ಇದೇ ತಿಂಗಳಿನಲ್ಲಿ ಹೊಸ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಬಿಡುಗಡೆಯಾಗುವುದು ಪಕ್ಕ

ಓಟ್ಟಾರೆಯಾಗಿ ಹೀರೋ ಮ್ಯಾಸ್ಟ್ರೊ ಎಡ್ಜ್ 125 ಸ್ಕೂಟರ್‍‍‍ಗಳು ಸುಮಾರು 60000 ರಿಂದ 65000 ಸಾವಿರದ ಬೆಲೆಯನ್ನು ಪಡೆದುಕೊಂಡಿರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿರುವ ಟಿವಿಎಸ್ ಎನ್‍ಟೋರ್ಕ್ 125, ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸಿಸ್ 125, ಎಪ್ರಿಲಿಯಾ ಎಸ್ಆರ್125 ಮತ್ತು ಇನ್ನಿತರೆ 125ಸಿಸಿ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Source: indian autos blog

Article Published On: Sunday, May 5, 2019, 14:00 [IST]
English summary
Hero Motocorp To Launch Their New Maestro Edge 125 In This Month. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+