2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್‍‍ನ ಮೋಟಾರ್‍‍ಸ್ಪೋರ್ಟ್ಸ್ ವಿಭಾಗವಾದ ಹೀರೋ ಮೋಟೊಸ್ಪೋರ್ಟ್ ಟೀಂ ರ್‍ಯಾಲಿ, ಮುಂದಿನ ವರ್ಷ ನಡೆಯಲಿರುವ 2020ರ ಡಕಾರ್ ರ್‍ಯಾಲಿಗಾಗಿ ತನ್ನ ನಾಲ್ಕು ಸದಸ್ಯರ ತಂಡವನ್ನು ಪ್ರಕಟಿಸಿದೆ. ಡಕಾರ್ ರ್‍ಯಾಲಿಯಲ್ಲಿ ಈ ತಂಡವು ಸತತ ನಾಲ್ಕನೇ ಬಾರಿಗೆ ಭಾಗವಹಿಸುತ್ತಿದೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಈ ತಂಡವನ್ನು 2016ರಲ್ಲಿ ಆರಂಭಿಸಲಾಯಿತು. ಸಿ ಎಸ್ ಸಂತೋಷ್, ವಾಕಿಂ ರಾಡ್ರಿಗಸ್, ಒರಿಯಲ್ ಮೆನಾ ಹಾಗೂ ಪಾಲೋ ಗೊನ್ಕಾಲ್ವಿಸ್ ಈ ತಂಡದಲ್ಲಿರುವ ನಾಲ್ವರು ಸವಾರರಾಗಿದ್ದಾರೆ. ಸವಾರರ ಬಗ್ಗೆ ಹೇಳುವುದಾದರೆ, ಸಿ ಎಸ್ ಸಂತೋಷ್ ಭಾರತದ ಪ್ರಮುಖ ಬೈಕ್ ಸವಾರರಾಗಿದ್ದಾರೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ವಾಕಿಂ ರಾಡ್ರಿಗಸ್ 2019ರ ಪ್ಯಾನ್ ಆಫ್ರಿಕನ್ ರ್‍ಯಾಲಿ ವಿಜೇತರಾದರೆ, ಒರಿಯಲ್ ಮೆನಾ 2017ರ ಡಕಾರ್ ರೂಕಿ ಹಾಗೂ ಪಾಲೊ ಗೊನ್ಕಾಲ್ವಿಸ್ ಮಾಜಿ ರ್‍ಯಾಲಿ ಚಾಂಪಿಯನ್ ಆಗಿದ್ದು, ಈ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್‍‍ನ ಆಪರೇಷನ್‍‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಸಿ‍‍ಟಿ‍ಒರವರಾದ ವಿಕ್ರಂ ಕಸ್ಬೇಕರ್‍‍ರವರು ಮಾತನಾಡಿ, ಅಲ್ಪಾವಧಿಯಲ್ಲಿಯೇ ಹೀರೋ ಮೋಟಾರ್ ಸ್ಪೋರ್ಟ್ಸ್ ರ್‍ಯಾಲಿ ತಂಡವು ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಡಕಾರ್ ರ್‍ಯಾಲಿಯಲ್ಲಿ ನಮ್ಮ ತಂಡವು ಭಾಗವಹಿಸುತ್ತಿರುವುದು ನಮ್ಮ ಮುಂದಿನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಲಿದೆ. ಇವುಗಳಲ್ಲಿ ಎಕ್ಸ್‌ಪಲ್ಸ್ 200 ಹಾಗೂ ಅದರ ರ್‍ಯಾಲಿ ಕಿಟ್‌ನಂತಹ ಉತ್ಪನ್ನಗಳನ್ನು ಈಗಾಗಲೇ ಸಂಯೋಜಿಸಲಾಗಿದೆ ಎಂದು ಹೇಳಿದರು.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಡಕಾರ್ ರ್‍ಯಾಲಿ 2020

42ನೇ ಆವೃತ್ತಿಯ ಡಕಾರ್ ರ್‍ಯಾಲಿಯನ್ನು ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದೆ. ಈ ರ್‍ಯಾಲಿಯು 2020ರ ಜನವರಿ 5ರಂದು ಜೆಡ್ಡಾದಲ್ಲಿ ಆರಂಭವಾಗಲಿದೆ. ಈ ರ್‍ಯಾಲಿಯಲ್ಲಿ 12 ಹಂತಗಳಿವೆ. ಈ ರೇಸಿನ ದೂರವು ಸುಮಾರು 7,900 ಕಿ.ಮೀಗಳಾಗಿರಲಿದೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಈ ರ್‍ಯಾಲಿಯಲ್ಲಿ ಭಾಗವಹಿಸುವ ತಂಡಗಳು ಸುಮಾರು 5,000 ಕಿ.ಮೀಗೂ ಹೆಚ್ಚಿನ ವಿಶೇಷ ಹಂತಗಳಲ್ಲಿ ಸೆಣೆಸಲಿವೆ. ಈ ರ್‍ಯಾಲಿಯು ಸೌದಿ ಅರೇಬಿಯಾದ ರಾಜಧಾನಿ ಬಳಿಯಿರುವ ಕಿಡ್ಡಿಯಾದಲ್ಲಿ ಮುಕ್ತಾಯಗೊಳ್ಳಲಿದೆ. ಈ ರ್‍ಯಾಲಿಯಲ್ಲಿ ಭಾಗವಹಿಸುವ ತಂಡಗಳು ಸೌದಿ ಅರೇಬಿಯಾದಲ್ಲಿರುವ ಮರಳು ದಿಬ್ಬದಲ್ಲಿ ಸ್ಪರ್ಧಿಸಲಿವೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೋಸ್ಪೋರ್ಟ್ಸ್ ರ್‍ಯಾಲಿ ತಂಡ

ಹೀರೋ ಮೋಟೋಸ್ಪೋರ್ಟ್ಸ್ ರ್‍ಯಾಲಿ ತಂಡವನ್ನು 2016ರಲ್ಲಿ ಆರಂಭಿಸಲಾಯಿತು. ಈ ತಂಡವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೊಟೊಕಾರ್ಪ್‌ನ ಅಧಿಕೃತ ಮೋಟಾರ್ ಸ್ಪೋರ್ಟ್ಸ್ ವಿಭಾಗವಾಗಿದೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಈ ತಂಡವು ವಿಶ್ವದಾದ್ಯಂತ ನಡೆಯುವ ರ್‍ಯಾಲಿ‍‍ಗಳಲ್ಲಿ ಭಾಗವಹಿಸಿ, ಅಪಾರ ಯಶಸ್ಸನ್ನು ಗಳಿಸಿದೆ. ಇದರಲ್ಲಿ ಯುರೋಪ್‍‍ನ ಬಾಜಾ ಸ್ಪೇನ್, ಭಾರತದ ಡಸರ್ಟ್ ಸ್ಟಾರ್ಮ್, ರಷ್ಯಾದ ಸಿಲ್ಕ್‌ವೇ ರ್‍ಯಾಲಿ, ಬಾಜಾ ಇಂಡಿಯಾ, ಮೊರಾಕೊದ ಪ್ಯಾನ್ ಆಫ್ರಿಕಾ ಹಾಗೂ ಚಿಲಿಯ ಅಟಕಾಮಾ ರ್‍ಯಾಲಿಗಳು ಸೇರಿವೆ.

2020ರ ಡಕಾರ್ ರ್‍ಯಾಲಿಗೆ ತಂಡ ಪ್ರಕಟಿಸಿದ ಹೀರೋ ಮೋಟೊಕಾರ್ಪ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಡಕಾರ್ ರ್‍ಯಾಲಿ ವಿಶ್ವದ ಕಠಿಣ ಮೋಟಾರ್‍‍ಸ್ಪೋರ್ಟ್‍‍ಗಳಲ್ಲಿ ಒಂದಾಗಿದೆ. ಈ ಸ್ಪರ್ಧೆಯಲ್ಲಿ ಕಠಿಣವಾದ ರಸ್ತೆಗಳು, ನ್ಯಾವಿಗೇಶನ್, ಬೈಕ್ ಸವಾರರ ತಾಳ್ಮೆ ಹಾಗೂ ಅವರ ಬೈಕುಗಳಿಗೆ ನಿಜವಾದ ಸ್ಪರ್ಧೆ ಏರ್ಪಡುತ್ತದೆ. ಈ ರ್‍ಯಾಲಿಗಾಗಿ ಸಿದ್ದತೆಗಳು ನಡೆಯುತ್ತಿದ್ದು, ಜನವರಿಯಲ್ಲಿ 2020ರ ಡಕಾರ್ ರ್‍ಯಾಲಿ ನಡೆಯಲಿದೆ.

Most Read Articles

Kannada
English summary
Hero MotoCorp Announces Their Four Rider-Lineup For The 2020 Dakar Rally - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X