ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಹೀರೋ ಮೋಟೊಕಾರ್ಪ್ ಸಂಸ್ಥೆಯು ಸದ್ಯ ಬೈಕ್ ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಂಸ್ಥೆಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ರಸ್ತೆಗಿಳಿಸಿರುವುದು ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಶೇ.55 ರಷ್ಟು ಸ್ಕೂಟರ್ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿರುವ ಹೋಂಡಾ ಸಂಸ್ಥೆಗೆ ಪೈಪೋಟಿಯಾಗಿ ಹೊಸ ಯೋಜನೆ ರೂಪಿಸಿರುವ ಹೀರೋ ಸಂಸ್ಥೆಯು ಸ್ಕೂಟರ್ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ನಿನ್ನೆಯಷ್ಟೇ ಬಿಡುಗಡೆಯಾಗಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಮ್ಯಾಸ್ಟ್ರೋ ಎಡ್ಜ್ 125 ಮತ್ತು ಪ್ರೆಷರ್ ಪ್ಲಸ್ 110 ಮಾದರಿಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ದಾಖಲಿಸುವ ನೀರಿಕ್ಷೆಯಲ್ಲಿವೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಈ ಕುರಿತಂತೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಹೀರೋ ಮೋಟೊಕಾರ್ಪ್ ಮಾರಾಟ ವಿಭಾಗದ ನಿರ್ದೇಶಕ ಸಂಜಯ್ ಭಾನ್ ಅವರು, ಭಾರತದಲ್ಲಿ ಸ್ಕೂಟರ್ ಮಾರಾಟವು ಕಳೆದ 5 ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೀರೋ ಸಂಸ್ಥೆಯು ಮಹತ್ವದ ಬದಲಾವಣೆಗಳೊಂದಿಗೆ ಮಾರಾಟ ತಂತ್ರವನ್ನು ಅನುಸರಿಸುತ್ತಿರುವುದು ಮುಂದಿನ ಕೆಲವೇ ದಿನಗಳಲ್ಲಿ ಉತ್ತಮ ಬೆಳವಣಿಗೆ ದಾಖಲಿಸಲು ಕಾರಣವಾಗಲಿದೆ ಎಂದಿದ್ದಾರೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಹೀರೋ ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 7.19 ಲಕ್ಷ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಈ ಮೂಲಕ ಶೇ.11 ರಷ್ಟು ಸ್ಕೂಟರ್ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿತ್ತು. ಹಾಗೆಯೇ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಶೇ.55 ಪಾಲನ್ನು ತನ್ನದಾಗಿಸಿಕೊಂಡಿರುವ ಹೋಂಡಾ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಇದೇ ಉದ್ದೇಶದಿಂದ ಸ್ಕೂಟರ್ ಮಾರಾಟದಲ್ಲಿ ಕನಿಷ್ಠ ಶೇ.20 ರಷ್ಟು ಪಾಲನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿರುವ ಹೀರೋ ಸಂಸ್ಥೆಯು ಮ್ಯಾಸ್ಟ್ರೋ ಎಡ್ಜ್ 125 ಮತ್ತು ಪ್ರೆಷರ್ ಪ್ಲಸ್ 110 ಜೊತೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಡೆಸ್ಟಿನಿ 125 ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸುತ್ತಿದೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಈ ಮೂಲಕ ಹೋಂಡಾ ಆಕ್ಟಿವಾ ಸ್ಕೂಟರ್‌ಗಳಿಗೆ ಪರ್ಯಾಯವಾಗಿ ಸ್ಥಾನ ಪಡೆದುಕೊಳ್ಳುತ್ತಿರುವ ಹೀರೋ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸ್ಕೂಟರ್‌ಗಳನ್ನು ರಸ್ತೆಗಿಳಿಸುವ ಯೋಜನೆಯಲ್ಲಿದ್ದು, ಬೈಕ್ ವಿಭಾಗದಲ್ಲೂ ಹೊಸ ಉತ್ಪನ್ನಗಳೊಂದಿಗೆ ಭರ್ಜರಿ ಸದ್ದು ಮಾಡುತ್ತಿದೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ದೇಶದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಬೆಲೆಯಲ್ಲಿ ಅಡ್ವೆಂಚರ್ ಬೈಕ್ ಮಾದರಿಗಳಾದ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬಿಡುಗಡೆಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬೈಕ್ ಮಾರಾಟದಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲಿದೆ.

MOST READ: ಡ್ಯೂಕ್ 125 ನಂತರ ಆರ್‌ಸಿ 125 ಬಿಡುಗಡೆಗೆ ಸಜ್ಜಾದ ಕೆಟಿಎಂ..!

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಗ್ರಾಹಕರ ಬೇಡಿಕೆಯೆಂತೆ ಪ್ರತಿ ವಿಭಾಗದಲ್ಲೂ ಒಂದೊಂದು ಬೈಕ್ ಮಾದರಿಗಳನ್ನು ಹೊಂದಿರುವ ಹೀರೋ ಸಂಸ್ಥೆಯು ಸದ್ಯ ಮಾರಾಟ ತಂತ್ರದ ಮೂಲಕ ಹೋಂಡಾ ಸ್ಕೂಟರ್ ಮಾರಾಟಕ್ಕೆ ಟಕ್ಕರ್ ನೀಡಲು ಸಿದ್ದತೆ ನಡೆಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕೆಲವು ಬದಲಾವಣೆಗಳನ್ನು ನೀರಿಕ್ಷಿಸಲಾಗಿದೆ.

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಮ್ಯಾಸ್ಟ್ರೋ ಎಡ್ಜ್ 125 ಆವೃತ್ತಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.58,500 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗೆ ರೂ. 62,700 ಬೆಲೆ ಹೊಂದಿದೆ. ಹಾಗೆಯೇ ಪ್ಲೆಷರ್ ಪ್ಲಸ್ 110 ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.47,300 ಮತ್ತು ಟಾಪ್ ಎಂಡ್ ಮಾದರಿಗೆ ರೂ. 49,300 ಬೆಲೆ ಹೊಂದಿವೆ.

MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಹೀರೋದಿಂದ ಹೊಸ ಸ್ಕೂಟರ್- ಹೋಂಡಾ ಸ್ಕೂಟರ್‌ಗಳಿಗೆ ಟಕ್ಕರ್..!

ಹಾಗೆಯೇ ಅಡ್ವೆಂಚರ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.94 ಸಾವಿರದಿಂದ ಟಾಪ್ ಎಂಡ್ ಮಾದರಿಗೆ ರೂ. 1.05 ಲಕ್ಷ ಬೆಲೆ ಹೊಂದಿದ್ದು, 199.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಾಮರ್ಥ್ಯದೊಂದಿಗೆ 18.4-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

Most Read Articles

Kannada
English summary
Hero MotoCorp To Shift Focus On Scooter Market In India — Look To Challenge Honda Two-Wheelers.
Story first published: Tuesday, May 14, 2019, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X