ಭಾರತದಲ್ಲಿ 25 ವರ್ಷ ಪೂರೈಸಿದ ಹೀರೋ ಸ್ಪ್ಲೆಂಡರ್ - ಸ್ಪೆಷಲ್ ಎಡಿಷನ್ ಬಿಡುಗಡೆ
ಮೊದಲನೆಯ ತಲೆಮಾರಿನ ಹೀರೋ ಸ್ಪ್ಲೆಂಡರ್ ಬೈಕ್‍ಗಳು 1994ರಲ್ಲಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ಕಮ್ಯೂಟರ್ ಬೈಕ್‍ಗಳ ಮಾರಾಟದಲ್ಲಿ 25 ವರ್ಷ ಪೂರೈಸಿದೆ. ಭಾರತದಲ್ಲಿ ಹೀರೋ ಸ್ಪ್ಲೆಂಡರ್ ಬೈಕಿನ ಬೆಳ್ಳಿ ಮಹೋತ್ಸವದ ಕಾರಣದಿಂದಾಗಿ ಸ್ಪ್ಲೆಂಡರ್ ಬೈಕಿನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ.

ಹೀರೋ ಸಂಸ್ಥೆಯು ಬಿಡುಗಡೆ ಮಾಡಲಾದ ಸ್ಪೆಷಲ್ ಎಡಿಶನ್ ಸ್ಪ್ಲೆಂಡರ್ ಬೈಕ್ ಸ್ಪ್ಲೆಂಡರ್ ಪ್ಲಸ್ ವೇರಿಯೆಂಟ್ ಅನ್ನು ಆಧರಿಸಲಾಗಿದ್ದು, ಡ್ರಂ ಬ್ರೇಕ್ ಮತ್ತು ಕಿಕ್ ಸ್ಟಾರ್ಟ್ ಆಧಾರಿತ ಬೈಕ್ ಬೆಲೆಯು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 51,290 ಸಾವಿರವಿದ್ದು, ಇನ್ನು ಸೆಲ್ಫ್ ಸ್ಟಾರ್ಟ್ ಟಾಪ್ ವೇರಿಯೆಂಟ್ ಮತ್ತು ಐ3ಎಸ್ ಟೆಕ್ ಆಧಾರಿತ ಬೈಕ್‍ಗಳು ರೂ. 54,600 ಬೆಲೆಯನ್ನು ಪಡೆದುಕೊಂಡಿದೆ.

ಕೇವಲ ಬಾಹ್ಯವಾಗಿ ಮಾರ್ಪಾಡುಗಳಾನ್ನು ಹೊತ್ತು ಬಿಡುಗಡೆಗೊಂಡ ಹೀರೋ ಸ್ಪ್ಲೆಂಡರ್ ಬೈಕ್‍ಗಳು ಇದೀಗ ಬ್ಲಾಕ್‍ನೊಂದಿಗೆ ಆರೆಂಜ್/ಗೋಲ್ಡ್ ಡೆಕಲ್ಸ್ ಅನುನ್ ಬೈಕಿನ ಮುಂಭಾಗದಲ್ಲಿ ಹಾಗಿ ಸೈಡ್‍ನಲ್ಲಿ ಪಡೆಯಬಹುದಾದ ಆಯ್ಕೆಯನ್ನು ನೀಡಿದೆ. ಇನ್ನು 25 ವರ್ಷದ ಸ್ಪೆಷಲ್ ಎಡಿಷನ್‍ನಲ್ಲಿ ಬೇರಾವ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ.

ಹಾಗೆಯೆ ಹೀರೋ ಮೋಟೋಕಾರ್ಪ್ ಸಂಸ್ಥೆಯು ತಮ್ಮ ಸ್ಪ್ಲೆಂಡರ್ ಮೋಟಾರ್‍ಸೈಕಲ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಠಿಸಿದೆ. ಹೀರೋ ಸ್ಪ್ಲೆಂಡರ್ ಕೇವಲ ಒಂದು ತಿಂಗಳ ಅವದಿಯಲ್ಲಿ ಸುಮಾರು 7.50 ಲಕ್ಷ ಯೂನಿಟ್ ಬೈಕ್‍ಗಳು ಮಾರಾಟ ಮಾಡಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಮೋಟಾರ್‍ಸೈಕಲ್ ಎಂಬ ಹೆಸರಿಗೆ ಪಾತ್ರವಾಗಿದೆ.

ಹೀರೋ ಮೋಟೋಕಾರ್ಪ್ ಸಂಸ್ಥೆಯು ಪ್ರಪಂಚದಲ್ಲಿ ಕಮ್ಮುಟರ್ ಬೈಕ್‍ಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೇವಲ ಭಾರತದಲ್ಲಿಯೆ ಸುಮಾರು ಶೇಕಡ 46ಕ್ಕು ಹೆಚ್ಚು ಬೈಕ್‍ಗಳನ್ನು ಮಾರಾಟ ಮಾಡಿದೆ ಎಂದರೆ ನಂಬಲೇಬೇಕು.

ಸುಮಾರು 7 ಲಕ್ಷಕ್ಕು ಅಧಿಕವಾಗಿ ಮಾರಾಟಗೊಂಡ ಹೀರೋ ಸ್ಪ್ಲೆಂಡರ್ ಬೈಕ್‍ಗಳು ಸತತ ಐದನೆಯ ಬಾರಿ ಈ ದಾಖಲೆಯನ್ನು ಮಾಡಿದೆ. 2018ರ ಏಪ್ರಿಲ್‍ನಿಂದ ಸೆಪ್ಟೆಂಬರ್ ತಿಂಗಳ ವರೆಗು ಹೀರೋ ಮೋಟೋಕಾರ್ಪ್ ಸಂಸ್ಥೆಯು 42 ಲಕ್ಷದ ವಾಹನಗಳನ್ನು ಮಾರಾಟ ಮಾಡಿದ್ದು, ಈ ಹಬ್ಬದ ಋತುವಿನಲ್ಲಿ ಇನ್ನು ಹೆಚ್ಚಿನ ಮಾರಟವನ್ನು ಮಾಡುವ ತವಕದಲ್ಲಿದ್ದಾರೆ.

ಹೀರೋ ಮೋಟೋಕಾರ್ಪ್ ಸಂಸ್ಥೆಯ ಸ್ಪ್ಲೆಂಡರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 20ವರ್ಷಗಳಿಂದ ಇದೆ. ಹಲವಾರು ಬಾರಿ ಉತ್ತಮವಾಗಿ ಮಾರಾಟಗೊಂಡ ದ್ವಿಚಕ್ರ ವಾಹನಗಳ ಪ್ರಶಸ್ತಿಯನ್ನು ಪಡೆದಿದೆ ಈ ಸ್ಕೂಟರ್, ಆದರೆ ಇದೀಗ ಈ ವರ್ಷ ಈ ಪ್ರಶಸ್ತಿಯನ್ನು ಹೋಂಡಾ ಆಕ್ಟೀವಾ ತಮ್ಮದಾಗಿಸಿಕೊಂಡಿದೆ. ಹೀರೋ ಸ್ಪ್ಲೆಂಡರ್ ಪ್ರಸ್ತುತ ಪ್ಲಸ್, ಪ್ಲಸ್ ಐ3ಎಸ್ ಮತ್ತು ಐಸ್ಮಾರ್ಟ್ 110 ಎಂಬ ಮೂರು ವೇರಿಯಂಟ್‍ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಎಂಜಿನ್ ವಿಚಾರಕ್ಕೆ ಬಂದರೆ ಹೀರೋ ಸ್ಪ್ಲೆಂಡರ್ ಬೈಕ್ 97.2ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 8.2ಬಿಹೆಚ್‍ಪಿ ಮತ್ತು 8.05ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡುದ್ಕೊಂಡಿದೆ.

ಇನ್ನು ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ 109.15ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 9.3ಬಿಹೆಚ್‍ಪಿ ಮತ್ತು 9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎರಡೂ ಎಂಜಿನ್‍ಗಳನ್ನು 4 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
Source: Gaadiwaadi


Click it and Unblock the Notifications








