ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಜಪಾನ್ ಬ್ರಾಂಡ್ ಹೋಂಡಾ ಮೋಟಾರ್ ಸೈಕಲ್ ಸಂಸ್ಥೆಯು ಮಧ್ಯಮ ಕ್ರಮಾಂಕದ ಕೆಲವು ಸೂಪರ್ ಬೈಕ್‌ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದರಲ್ಲಿ ವಿನೂತನ ವಿನ್ಯಾಸದ ಸಿಬಿ300ಆರ್ ಬೈಕ್ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿರುವುದಲ್ಲದೇ ಬಜಾಜ್ ಡೋಮಿನಾರ್ 400 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗುವ ಸುಳಿವು ನೀಡಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಇದರ ಹೊರತಾಗಿ ಭಾರತದಲ್ಲಿ ಹೊಸ ಬೈಕ್ ಬಿಡುಗಡೆಗೆ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದ್ರೆ ಇದೀಗ ಹೊಸ ಬೈಕ್ ವಿನ್ಯಾಸಗಳ ಕುರಿತಾಗಿ ಭಾರತದಲ್ಲಿ ಹಕ್ಕುಸ್ವಾಮ್ಯ(ಪೆಟೆಂಟ್) ದಾಖಲಿಸಿರುವುದಲ್ಲದೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಹೌದು, ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಬೈಕ್ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಹೋಂಡಾ ಸಂಸ್ಥೆಯೇ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ಕೊಟ್ಟಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಕರ್ನಾಟಕದ ಸಿಲಿಕಾನ್ ಮೋಟಾರ್ಸ್ ಡೀಲರ್ಸ್‌ಗೆ ಮಾತ್ರವೇ ಸಿಬಿ300ಆರ್ ಬುಕ್ಕಿಂಗ್ ಅವಕಾಶ ದೊರೆತಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಬೆಂಗಳೂರಿನಲ್ಲಿರುವ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ ಬಳಿ ಮಾತ್ರವೇ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಬೈಕ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲು ಯೋಜಿಸಲಾಗಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಇದರಿಂದ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ರೆಟ್ರೋ ಲುಕ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ಸ್, ಸ್ಪೋರ್ಟಿ ಫ್ಯೂಲ್ ಟ್ಯಾಂಕ್, ಎಂಜಿನ್ ಬೆಲ್ಲಿ, ಗಮನಸೆಳೆಯುವ ಎಕ್ಸಾಸ್ಟ್ ವಿನ್ಯಾಸಗಳು ಬೈಕ್ ಬಲಿಷ್ಠತೆಗೆ ಸಹಕಾರಿಯಾಗಿದ್ದು, ಇದು ಬಜಾಜ್ ಡೋಮಿನಾರ್ 400 ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಎಂಜಿನ್ ಸಾಮರ್ಥ್ಯ

286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 30.5-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಹೀಗಾಗಿ ಹೋಂಡಾದ ಮತ್ತೊಂದು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಸಿಬಿಆರ್250ಆರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿರುವ ಸಿಬಿ300ಆರ್ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ. 2.50 ಲಕ್ಷದಿಂದ ರೂ. 2.70 ಲಕ್ಷದ ತನಕ ಬೆಲೆ ಪಡೆಯುವ ಸಾಧ್ಯತೆಗಳಿವೆ.

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಸದ್ಯಕ್ಕೆ ಭಾರತದಲ್ಲಿ 22 ಹೋಂಡಾ ಶೋರೂಂಗಳಲ್ಲಿ ಮಾತ್ರವೇ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್ಸ್‌ಗಳಿಗೆ ಬುಕ್ಕಿಂಗ್ ಅವಕಾಶ ನೀಡುವ ಸಾಧ್ಯತೆಗಳಿವೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಹೊಚ್ಚ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹೋಂಡಾ..!

ಇದಲ್ಲದೇ ಗ್ರಾಹಕರ ಬೇಡಿಕೆಯ ಆಧಾರ ಮೇಲೆ ಹೊಸ ಬೈಕಿನ ಉತ್ಪಾದನಾ ಕಾರ್ಯವನ್ನು ಭಾರತದಲ್ಲೇ ಆರಂಭಿಸುವ ಬಗ್ಗೆಯು ಸುಳಿವು ನೀಡಿರುವ ಹೋಂಡಾ ಸಂಸ್ಥೆಯು ಬೇಡಿಕೆ ಹೆಚ್ಚಿದ್ದಲ್ಲಿ ಭಾರತದಲ್ಲೇ ಉತ್ಪಾದನೆ ಮಾಡಿ ಬೈಕಿನ ಬೆಲೆ ತಗ್ಗಿಸುವ ಗುರಿಹೊಂದಿದೆ.

Article Published On: Tuesday, January 15, 2019, 19:40 [IST]
English summary
Honda CB300R India Launch Confirmed — Bookings Open At Select Dealerships. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+