ಹೊಚ್ಚ ಹೊಸ ಸಿಬಿ 300ಆರ್ ಬೈಕ್ ಬಿಡುಗಡೆ ಮಾಡಿದ ಹೋಂಡಾ.. ಬೆಲೆ ಎಷ್ಟು ಗೊತ್ತಾ.?
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಹೊಸ ಸಿಬಿ 300ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.41 ಲಕ್ಷದ ಬೆಲೆಯನ್ನ ನಿಗದಿ ಮಾಡಲಾಗಿದೆ. ಈ ಬೈಕ್ ಹೋಂಡಾ ಸಂಸ್ಥೆಯ ಮೊದಲ 300ಸಿಸಿ ಮೋಟಾರ್‍ಸೈಕಲ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಇಷ್ಟೆ ಅಲ್ಲದೇ ದುಬಾರಿ ಬೆಲೆಯ ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಬೈಕ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದ್ದು, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದೆ.
ಹೋಂಡಾ ಸಿಬಿ 300ಆರ್ ಬೈಕ್ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಈ ಬೈಕ್ ಸೆಗ್ಮೆಂಟ್‍ನಲ್ಲಿ ಅತೀ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಹೋಂಡಾ ಸಿಬಿ 300ಆರ್ ಬೈಕ್ ಸುಮಾರು 143 ಕಿಲೋಗ್ರಾಂನ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೇಟಪ್ ಅನ್ನು ಒದಗಿಸಲಾಗಿದೆ.
ಎಂಜಿನ್ ಸಾಮರ್ಥ್ಯ
286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.
ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೆ ಮಾರಾಟಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 3390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡಲಿದೆ.


Click it and Unblock the Notifications








