ಎಬಿಎಸ್‌ನೊಂದಿಗೆ ಮರುಬಿಡುಗಡೆಯಾದ ಹೋಂಡಾ ಸಿಬಿ ಯುನಿಕಾರ್ನ್ 150
ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಜನಪ್ರಿಯ ಸಿಬಿ ಯುನಿಕಾರ್ನ್ 150 ಬೈಕ್ ಆವೃತ್ತಿಯನ್ನು ಹೊಸ ನಿಯಮಗಳಿಗೆ ಅನುಗುಣವಾಗಿ ಮರುಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದ್ದು, ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯದೊಂದಿಗೆ ಹೊಸ ಬೈಕ್ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಬೈಕ್ ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿಂದೆ ಕೆಲವು ಕಾರಣಾಂತರಗಳಿಂದ ಸಿಬಿ ಯುನಿಕಾರ್ನ್ 150 ಸ್ಥಗಿತಗೊಳಿದ್ದ ಹೋಂಡಾ ಸಂಸ್ಥೆಯು ಇದೀಗ ಅದೇ ಬೈಕ್ ಮಾದರಿಯನ್ನು ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ. ಮುಂಬರುವ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ನಿಯಮದಂತೆ ಬೈಕಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಗಮನಹರಿಸಲಾಗಿದ್ದು, ಯುನಿಕಾರ್ನ್ 160 ಮಾದರಿಯಲ್ಲೇ ಹೊಸ ಬೈಕ್ ಅನ್ನು ಅಭಿವೃದ್ಧಿ ಮಾಡಲಾಗಿದೆ.

ಹೀಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಸಿಬಿ ಯುನಿಕಾರ್ನ್ 150 ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 78,815ಕ್ಕೆ ನಿಗದಿಗೊಳಿಸಲಾಗಿದ್ದು, ಎಬಿಎಸ್ ಬಳಕೆಯಿಂದಾಗಿ ಹಳೆಯ ಮಾದರಿಯ ಬೆಲೆಗಿಂತ ಹೊಸ ಬೈಕಿನ ಬೆಲೆ ರೂ.6,500 ಹೆಚ್ಚಳ ಎನ್ನಿಸಲಿದೆ.

ಇದರ ಹೊರತಾಗಿ ಹೊಸ ಬೈಕಿನಲ್ಲಿ ಈ ಹಿಂದಿನಂತೆಯೇ ಲೈಟಿಂಗ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಯೂಲ್ ಟ್ಯಾಂಕ್ ಡಿಸೈನ್‌ಗಳನ್ನು ಮುಂದುವರಿಸಲಾಗಿದ್ದು, ಎಬಿಎಸ್ ಬಳಕೆಯ ಹಿನ್ನೆಲೆಯಲ್ಲಿ 150ಸಿಸಿ ಬೈಕ್ ಮಾರಾಟ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಎಂಜಿನ್ ಸಾಮರ್ಥ್ಯ
150ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಸಿಬಿ ಯುನಿಕಾರ್ನ್ 150 ಬೈಕ್ ಮಾದರಿಯು 12.73-ಬಿಎಚ್‌ಪಿ ಮತ್ತು 12.8-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಹಾಗೆಯೇ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಮೊನೊಶಾರ್ಕ್ ಸಸ್ಷೆಷನ್ ಹೊಂದಿರುವ ಹೊಸ ಬೈಕಿನಲ್ಲಿ 260 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ರಿಯರ್ ಡ್ರಮ್ ಬ್ರೇಕ್‌ನೊಂದಿಗೆ 18-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಲಭ್ಯವಿರುವ ಬಣ್ಣಗಳ ಆಯ್ಕೆ
ಸಿಬಿ ಯುನಿಕಾರ್ನ್ 150 ಬೈಕ್ ಮಾದರಿಯು ಈ ಹಿಂದಿನಂತೆ ಪ್ರಮುಖ ಮೂರು ಬಣ್ಣಗಳ ಆಯ್ಕೆ ಹೊಂದಿದ್ದು, ಸಿಲ್ವರ್, ರೆಡ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.

ಈ ಮೂಲಕ 150ಸಿಸಿ ವಿಭಾಗದಲ್ಲಿ ಬಲಿಷ್ಠ ಬೈಕ್ ಮಾದರಿಯಾಗಿ ಹೊರಹೊಮ್ಮಿರುವ ಹೊಚ್ಚ ಹೊಸ ಸಿಬಿ ಯುನಿಕಾರ್ನ್ 150 ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ 150 ಬೈಕಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.
MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಇನ್ನು ಕೇಂದ್ರ ಸರ್ಕಾರವು ಇದೇ ವರ್ಷ ಏಪ್ರಿಲ್ 1ರಿಂದ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಸಿಬಿಯು(ಕಾಂಬಿ ಬ್ರೇಕ್ ಸಿಸ್ಟಂ) ಮತ್ತು 150ಸಿಸಿ ಮೇಲ್ಪಟ್ಟ ಬೈಕ್ ಮಾದರಿಗೂ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದಾಗಿ ಪ್ರತಿವರ್ಷ ದೇಶಾದ್ಯಂತ ಸಂಭವಿಸುತ್ತಿರುವ ಸಾವಿರಾರು ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

ಬೈಕ್ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ. ಇದರಿಂದ ವಾಹನ ಸವಾರಿಗೂ ಗರಿಷ್ಠ ಮಟ್ಟದ ಸುರಕ್ಷತೆ ಸಿಗಲಿದ್ದು, ಹೊಸ ನಿಮಯ ಜಾರಿಯಾದ್ರೆ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಕೂಡಾ ತಗ್ಗಲಿದೆ.
MOST READ: ಎಬಿಎಸ್ ಇಲ್ಲ ಅಂದಿದ್ರೆ ಆ ಯುವಕನ ಪ್ರಾಣನೇ ಹೋಗಿರುತ್ತಿತ್ತು..!

ಎಬಿಎಸ್ ಇಲ್ಲದ ಬೈಕಿನಲ್ಲಿ ರೈಡ್ ಮಾಡುವಾಗ ಹಠಾತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ. ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಬಿಎಸ್ ಸಹಕಾರಿಯಾಗುತ್ತೆ.


Click it and Unblock the Notifications