ಹೊಸ ಹೋಂಡಾ ಸಿಬಿ300ಆರ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ

ಹೋಂಡಾ ಟೂ ವ್ಹೀಲರ್ಸ್ ತಮ್ಮ ಬಹುನಿರೀಕ್ಷಿತ ಸಿಬಿ300ಆರ್ ಬೈಕ್ ಅನ್ನು ಕೆಲ ದಿನಗಳ ಹಿಂದಷ್ಟೆ ಬಿಡುಗಡೆಗೊಳಿಸಿದ್ದು, ಇದೀಗ ಈ ಬೈಕಿನ ಖರೀದಿಗಾಗಿ ಗ್ರಾಹಕರು ಮುಗುಬೀಳುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ಹೊಂಡಾ ಸಿಬಿ300ಆರ್ ಬೈಕ್ ಜಪಾನ್ ಮೂಲದ ವಾಹನ ತಯಾರಕರಿಂಡ ಬಿಡುಗಡೆಗೊಂಡ ಮೊದಲ 'ನಿಯೊ ಸ್ಪೋರ್ಟ್ಸ್ ಕೇಫ್' ವಿನ್ಯಾಸದಲ್ಲಿ ಬಿಡುಗಡೆಗೊಂಡಿದೆ.

ಹೊಸ ಹೋಂಡಾ ಸಿಬಿ300ಆರ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ

ಈ ಹೊಸ ಬೈಕಿನ ಖರೀದಿಗಾಗಿ ಇದೇ ಜನವರಿ ತಿಂಗಳಿನಿಂದ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಲಾಗಿತ್ತು. ಇದೀಗ ವರದಿಗಳ ಪ್ರಕಾರ ಸಿಬಿ300ಆರ್ ಬೈಕಿನ ಖರೀದಿಗಾಗಿ 400ಕ್ಕು ಹೆಚ್ಚು ಬುಕ್ಕಿಂಗ್ ಅನ್ನು ಸ್ವೀಕರಿಸಲಾಗಿದೆಯಂತೆ. ಅಂದರೆ ಮುಂದಿನ ಮೂರು ತಿಂಗಳ ವರೆಗಿನ ಸ್ಟಾಕ್‍ಗಳು ಬುಕ್ ಆಗಿದ್ದು, ಬುಕ್ ಮಾಡಿಕೊಂಡ ಗ್ರಾಹಕರ ಕೈಗೆ ಬೈಕ್ ಸೇರಲು ಮೂರು ತಿಂಗಳು ಕಾಯಲೇಬೇಕಂತೆ.

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಹೊಸ ಸಿಬಿ 300ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.41 ಲಕ್ಷದ ಬೆಲೆಯನ್ನ ನಿಗದಿ ಮಾಡಲಾಗಿದೆ. ಈ ಬೈಕ್ ಹೋಂಡಾ ಸಂಸ್ಥೆಯ ಮೊದಲ 300ಸಿಸಿ ಮೋಟಾರ್‍‍ಸೈಕಲ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಹೊಸ ಹೋಂಡಾ ಸಿಬಿ300ಆರ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ

ಹೋಂಡಾ ಸಿಬಿ 300ಆರ್ ಬೈಕ್ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಈ ಬೈಕ್ ಸೆಗ್ಮೆಂಟ್‍‍ನಲ್ಲಿ ಅತೀ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಹೋಂಡಾ ಸಿಬಿ 300ಆರ್ ಬೈಕ್ ಸುಮಾರು 143 ಕಿಲೋಗ್ರಾಂನ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೇಟಪ್ ಅನ್ನು ಒದಗಿಸಲಾಗಿದೆ.

ಹೊಸ ಹೋಂಡಾ ಸಿಬಿ300ಆರ್ ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ

ಎಂಜಿನ್ ಸಾಮರ್ಥ್ಯ
286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೆ ಮಾರಾಟಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 3390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡಲಿದೆ.

More from DriveSpark

Article Published On: Wednesday, February 13, 2019, 14:00 [IST]
English summary
Honda CB300R’s Bookings Hit 400 Units; Waiting Period Exceeds 3 Months. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+