ಹೊಸ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾದ ಹೋಂಡಾ ಸಿಡಿ 110 ಡ್ರೀಮ್ ಬೈಕ್
ಹೋಂಡಾ ಮೋಟಾರ್‍ಸೈಕಲ್ಸ್ & ಸ್ಕೂಟರ್ ಇಂಡಿಯಾ ಸಂಸ್ಥೆಯು ತಮ್ಮ ಜನಪ್ರಿಯ ಸಿಡಿ 110 ಡ್ರೀಮ್ ಬೈಕಿಗೆ ಹೊಸ ವೈಶಿಷ್ಟ್ಯತೆಯನ್ನು ನೀಡಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಹೋಂಡಾ ಸಿಡಿ 110 ಡ್ರೀಮ್ ಬೈಕಿನಲ್ಲಿ ರೈಡರ್‍ಗಳ ಸುರಕ್ಷತೆಯ ಅನುಸಾರ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ಸಿಡಿ 110 ಡ್ರೀಮ್ ಬೈಕ್‍ಗಳು ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 50,028 ಸಾವಿರಕ್ಕೆ ಖರೀಸಿದಬಹುದಾಗಿದೆ. ಸಿಬಿಎಸ್ ರಹಿತ ಹೋಂಡಾ ಸಿಡಿ 110 ಡ್ರೀಮ್ ಬೈಕ್ ರೂ. 49,150 ಸಾವಿರಕ್ಕೆ ದೊರೆಯುತ್ತಿದೆ. ಸಿಬಿಎಸ್ ಆಧಾರಿತ ಬೈಕ್ ನೊಂದಿಗೆಯೆ ಸಿಬಿಎಸ್ ರಹಿತ ಬೈಕ್‍ಗಳು ಕೂಡಾ ಮಾರಾಟವಾಗುತ್ತದೆ.

ಕೇಂದ್ರ ಸರ್ಕಾರವು ಹೊರ ಹಾಕಿರುವ ಹೊಸ ನಿಯಮಗಳ ಪ್ರಕಾರ ಏಪ್ರಿಲ್ 1, 2019ರ ನಂತರದ 125ಸಿಸಿ ಗಿಂತ ಕೆಳಗಿನ ಸಾಮರ್ಥ್ಯ ಹೊಂದಿರುವ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಸಿಬಿಎಸ್ ಮತ್ತು 125ಸಿಸಿ ಗಿಂತಲೂ ಅಧಿಕವಾದ ಸಾಮರ್ಥ್ಯವನ್ನು ಹೊಂದಿರುವ ದ್ವಿಚಕ್ರ ವಾಹನಗಳು ಎಬಿಎಸ್ ಬ್ರೇಕಿಂಗ್ ಸಿಸ್ಟಂ ಖಡ್ಡಾಯವಾಗಿ ಹೊಂದಿರಲೇಬೇಕಿದೆ.

ಹೊಸದಾಗಿ ಸಿಬಿಎಸ್ ಅನ್ನು ಹೊರತು ಪಡಿಸಿ ಹೋಂಡಾ ಸಿಡಿ 110 ಡ್ರೀಮ್ ಬೈಕಿನಲ್ಲಿ ಬೇರಾವ ಬದಲಾವಣೆಗಳನ್ನು ಮಾಡಲಗದಿದ್ದು, ವಿನ್ಯಾಸದಲ್ಲಾಗಲಿ ಅಥವಾ ತಾಂತ್ರಿಕವಾಗಲಿ ಯಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ ಎನ್ನಬಹುದು.
ಎಂಜಿನ್ ಸಾಮರ್ಥ್ಯ
ಹೋಂಡಾ ಸಿಡಿ 110 ಡ್ರೀಮ್ ಬೈಕ್‍ಗಳು 109ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.31ಬಿಹೆಚ್‍ಪಿ ಮತ್ತು 9.09 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಸಿಡಿ 110 ಡ್ರೀಮ್ ಬೈಕಿನ ಎರಡೂ ಬದಿಯಲ್ಲಿ 130 ಎಂಎಂ ಡ್ರಂ ಬ್ರೇಕ್ ಅನ್ನು ಒದಗಿಸಲಾಗಿದೆ. ಇನ್ನು ಸಸ್ಪೆನ್ಷನ್ ವಿಚಾರಕ್ಕೆ ಬಂದರೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಸೆಟಪ್ ಅನ್ನು ಅಳವಡಿಸಲಾಗಿದೆ. 18 ಇಂಚಿನ ಅಲಾಯ್ ವ್ಹೀಲ್ಸ್ ಜೊತೆಗೆ 80/100 ಟೈರ್‍ಗಳನ್ನು ನೀಡಲಾಗಿದೆ.
ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿರುವ ಹೊಸ ಹೋಂಡಾ ಸಿಡಿ 100 ಡ್ರೀಮ್ ಬೈಕ್‍ಗಳು ಮಾರುಕಟ್ಟೆಯಲ್ಲಿ ಈಗಾಗಲೆ ಮಾರಾಟವಾಗುತ್ತಿರುವ ಟಿವಿಎಸ್ ರೇಡಿಯಾನ್ ಮತ್ತು ಹೀರೋ ಸ್ಪ್ಲೆಂಡರ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications