ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್‍‍ಸೈಕಲ್ಸ್ ಫೆಬ್ರುವರಿ 8 ರಂದು ತಮ್ಮ ಸಿಬಿ300ಆರ್ ಪರ್ಫಾರ್ಮೆನ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.41 ಲಕ್ಷದ ಬೆಲೆಯನ್ನ ನಿಗದಿ ಮಾಡಲಾಗಿದೆ. ಈ ಬೈಕ್ ಹೋಂಡಾ ಸಂಸ್ಥೆಯ ಮೊದಲ 300ಸಿಸಿ ಮೋಟಾರ್‍‍ಸೈಕಲ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ರಶ್‍‍ಲೇನ್ ವರದಿಗಳ ಪ್ರಕಾರ ಬಿಡುಗಡೆಗೊಂಡು ಸುಮಾರು 2 ತಿಂಗಳುಗಳ ನಂತರ ಹೋಂಡಾ ಡೀಲರ್‍‍ಗಳು ಈ ಬೈಕಿನ ವಿತರಣೆಯನ್ನು ಶುರು ಮಾಡಲಾಗಿದ್ದು, ಇಷ್ಟೆ ಅಲ್ಲದೇ ದುಬಾರಿ ಬೆಲೆಯ ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಬೈಕ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದ್ದು, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಹೋಂಡಾ ಸಿಬಿ 300ಆರ್ ಬೈಕ್ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಈ ಬೈಕ್ ಸೆಗ್ಮೆಂಟ್‍‍ನಲ್ಲಿ ಅತೀ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಹೋಂಡಾ ಸಿಬಿ 300ಆರ್ ಬೈಕ್ ಸುಮಾರು 143 ಕಿಲೋಗ್ರಾಂನ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೇಟಪ್ ಅನ್ನು ಒದಗಿಸಲಾಗಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಎಂಜಿನ್ ಸಾಮರ್ಥ್ಯ

286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಹೊಸ ಸಿಬಿ300ಆರ್ ಬೈಕಿನ ವಿತರಣೆಯನ್ನು ಶುರು ಮಾಡಿದ ಹೋಂಡಾ

ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೆ ಮಾರಾಟಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 3390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡಲಿದೆ.

Kannada
English summary
2019 Honda CB300R deliveries start in India. Read In Kannada
Story first published: Tuesday, April 9, 2019, 8:30 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more