ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಹೋಂಡಾ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯು ತನ್ನ ಪ್ರೀಮಿಯಂ ಬೈಕ್ ಉತ್ಪನ್ನವಾದ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಬೈಕ್ ಈ ಹಿಂದಿಗಿಂತಲೂ ಮಹತ್ವದ ಬದಲಾವಣೆ ಪಡೆದುಕೊಳ್ಳುವ ಸುಳಿವು ನೀಡಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಎಕ್ಸ್-ಬ್ಲೇಡ್ ಬೈಕ್ ಆವೃತ್ತಿಯನ್ನು ಪ್ರದರ್ಶನ ಮಾಡಿ ಬಿಡುಗಡೆ ಮಾಡಿದ್ದ ಹೋಂಡಾ ಸಂಸ್ಥೆಯು ಪ್ರೀಮಿಯಂ ಬೈಕ್ ಆವೃತ್ತಿಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿತ್ತು. ಆದ್ರೆ ಬೈಕ್ ಬಿಡುಗಡೆ ಆರಂಭದಲ್ಲಿ ಇದ್ದ ಬೇಡಿಕೆ ಪ್ರಮಾಣವು ನಂತರದ ದಿನಗಳಲ್ಲಿ ಕುಸಿತ ಕಂಡಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದರೂ ಸಹ ನಿಗದಿತ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಹೀಗಾಗಿ ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಗ್ರಾಹಕರ ಆದ್ಯತೆಯೆಂತೆ ಹೊಸ ಬೈಕ್ ಬಿಡುಗಡೆಗಾಗಿ ಸಿದ್ದಗೊಂಡಿರುವ ಹೋಂಡಾ ಸಂಸ್ಥೆಯು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಜೊತೆ ಸ್ಪೋರ್ಟಿ ಲುಕ್ ಹೆಚ್ಚಿಸಲು ಗ್ರಾಫಿಕ್ಸ್ ತಂತ್ರವನ್ನು ಸಹ ಬದಲಾಯಿಸಲು ಮುಂದಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಇದರಿಂದ ಫೇಸ್‌ಲಿಫ್ಟ್ ಎಕ್ಸ್-ಬ್ಲೇಡ್ ಬೈಕ್ ಮಾದರಿಯು ಈ ಬಾರಿ ಎಂಜಿನ್ ವಿಭಾಗದಲ್ಲಿ ಯಾವುದೇ ಬದಲಾವಣೆ ಪಡೆದುಕೊಳ್ಳದಿದ್ದರೂ ಸಹ ಬೈಕಿನ ಗ್ರಾಫಿಕ್ಸ್ ಮತ್ತು ಡ್ಯುಯನ್ ಬಣ್ಣಗಳ ಆಯ್ಕೆಯು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಸಿಬಿ ಹಾರ್ನೆಟ್ 160ಆರ್ ಬೈಕ್ ಮಾದರಿಯಲ್ಲೇ ಎಕ್ಸ್-ಬ್ಲೇಡ್ ಸಹ ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಪ್ರೇರಿತ 162.71 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 13.93-ಬಿಎಚ್‌ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಹಾಗೆಯೇ ಹೊಸ ನಿಯಮದಂತೆ ಕೆಲ ದಿನಗಳ ಹಿಂದಷ್ಟೇ ಎಕ್ಸ್-ಬ್ಲೇಡ್ ಆವೃತ್ತಿಯಲ್ಲಿ ಎಬಿಎಸ್ ಅಳವಡಿಸಲಾಗಿದ್ದು, ಅಂಡರ್ ಕೌಲ್, ಫ್ರಂಟ್ ಫೋರ್ಕ್ಸ್ ಕವರ್ ಮತ್ತು ವ್ಹೀಲ್ ರಿಮ್ ಸ್ಟ್ರಿಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಸ್ಪೋರ್ಟಿ ಸ್ಟೈಲಿಷ್ ವಿನ್ಯಾಸ, ಫ್ಯೂಚರಿಸ್ಟಿಕ್ ಎಲ್‌ಇಡಿ ಹೆಡ್‌ಲೈಟ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಸ್ಪೋರ್ಟಿ ಡ್ಯುಯಲ್ ಔಟ್ಲೆಟ್ ಸೌಲಭ್ಯಗಳನ್ನು ಈ ಬೈಕ್ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

MOST READ: ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಇದಲ್ಲದೇ ಎಕ್ಸ್-ಬ್ಲೇಡ್‌ನಲ್ಲಿ ನೀಡಲಾಗಿರುವ ಹೊಸ ಗ್ರಾಫಿಕ್ಸ್ ವಿನ್ಯಾಸಗಳು ಗೇರ್ ಶಿಫ್ಟರ್, ಯೂನಿಕ್ ವಿಭಜಿತ ಗ್ರಾಬ್ ರೈಲ್ ಮತ್ತು ಸ್ಟೈಲಿಷ್ ಅಲಾಯ್ ಚಕ್ರಗಳು ಸಹ ಸ್ಪೋರ್ಟಿ ಲುಕ್ ಬೈಕ್ ಖರೀದಿಸುವ ಗ್ರಾಹಕರನ್ನು ಸೆಳೆಯಲಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಎಕ್ಸ್-ಬ್ಲೇಡ್ ಫೇಸ್‌ಲಿಫ್ಟ್

ಹೀಗಿದ್ದರೂ ಸಹ ಎಕ್ಸ್-ಬ್ಲೇಡ್ ಬೈಕ್‌ಗಳು ಗರಿಷ್ಠ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿರುವ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ವಿನ್ಯಾಸಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

Most Read Articles

Kannada
Read more on ಹೋಂಡಾ honda
English summary
Honda X-Blade Facelift Launching In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X