ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್​ವರ್ನಾ ಇತ್ತೀಚೆಗೆ ಅನಾವರಣಗೊಳಿಸಿದ 250ಸಿಸಿಯ ಸ್ವಾರ್ಟ್‍‍ಪಿಲೆನ್ ಮತ್ತು ವಿಟ್‍‍ಪಿಲೆನ್ ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎರಡೂ ಬೈಕ್‍‍ಗಳನ್ನು 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ಪ್ರದರ್ಶಿಸಲಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

2020ರ ಆರಂಭದಲ್ಲಿ ಈ ಬೈಕ್‍‍ಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. 250ಸಿಸಿ ಟ್ವಿನ್ ಬೈಕ್‍‍ಗಳು ಬ್ರ್ಯಾಂಡ್‍‍ನಿಂದ ಪ್ರದರ್ಶಸಿದಾಗ ಹೆಚ್ಚಿನ ಸಾಮರ್ಥ್ಯದ 401ಸಿಸಿಯ ಬೈಕ್‍ಗಳನ್ನು ಬಿಡುಗಡೆಗೊಳಿಸಲಿದೆ ಎಂದು ನಿರೀಕ್ಷಿಸಿದ್ದರು. ಆಟೋಕಾರ್ ವರದಿಯ ಪ್ರಕಾರ ಹಸ್ಕ್​ವರ್ನಾ 401 ಬೈಕ್‍‍ಗಳನ್ನು ನಂತರದ ಹಂತದಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ವರದಿಯ ಪ್ರಕಾರ, ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳನ್ನು 2021ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಕೆಟಿಎಂ 390 ಮಾದರಿಯ ಎಂಜಿನ್ ಅನ್ನು ಈ ಬೈಕ್‍‍ಗಳು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ಹಸ್ಕ್​ವರ್ನಾ 401 ಬೈಕ್ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೂಂದಿರಲಿದೆ. ಈ ಎಂಜಿನ್ 44 ಬಿ‍‍ಹೆಚ್‍‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಲಿರುವಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ಇದರ ಜೊತೆಗೆ ಸ್ವಾರ್ಟ್‍‍ಪಿಲೆನ್ 200 ಬೈಕ್ ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್, ಬಾಡಿ ಪ್ಯಾನೆಲ್, ಎಲ್‍ಇ‍‍ಡಿ ಲೈಟಿಂಗ್ ಹಾಗೂ ಸೈಡ್ ಮೌಂಟ್ ಎಕ್ಸಾಸ್ಟ್ ಗಳನ್ನು ಹೊಂದಿರಲಿದೆ. ಹೊಸ ಸ್ವಾರ್ಟ್‍‍ಪಿಲೆನ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ಹಸ್ಕ್​ವರ್ನಾ ಇತ್ತೀಚಿಗೆ ಪ್ರದರ್ಶಿಸಿದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳು ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 31 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಸ್ವಾರ್ಟ್‍‍ಪಿಲೆನ್ 250 ಸ್ಕ್ರಾಂಬ್ಲರ್ ಮಾದರಿಯ ಬೈಕ್ ಆಗಿದ್ದು, ದೊಡ್ಡ ಗಾತ್ರದ ಟ್ಯಾಂಕ್, 8 ಸ್ಪೋಕ್‍‍ನ ಅಲಾಯ್ ವ್ಹೀಲ್, ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ವಿಟ್‍‍ಪಿಲೆನ್ 250 ಬೈಕ್ ಕೆಫೆ ರೇಸರ್ ಮಾದರಿಯ ಬೈಕ್ ಆಗಿದ್ದು, ಸ್ವಾರ್ಟ್‍‍ಪಿಲೆನ್ ಬೈಕ್ ಹೊಂದಿರುವಂತಹ ಬಾಡಿಯನ್ನು ಹೊಂದಿದೆ. ಹಸ್ಕ್​ವರ್ನಾ ಕಂಪನಿಯು ಹಲವಾರು ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ವದಂತಿಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹಸ್ಕ್​ವರ್ನಾ ಬೈಕ್‍‍ಗಳು

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್​ವರ್ನಾ 401 ಬೈಕ್‍‍ಗಳನ್ನು 2021ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹಸ್ಕ್​ವರ್ನಾ ಪ್ರೀಮಿಯಂ ಬ್ರ್ಯಾಂಡ್ ಆಗಿರುವುದರಿಂದ ಈ ಬೈಕ್‍‍ಗಳು ದುಬಾರಿಯಾಗಿರಲಿದೆ. ಈ ಬೈಕ್‍‍ಗಳು ಭಾರತದ ಯುವಜನೆತಯನ್ನು ಹೆಚ್ಚು ಸೆಳೆಯಬಹುದು.

More from DriveSpark

Article Published On: Monday, December 30, 2019, 16:30 [IST]
English summary
Husqvarna 401 Bikes To Launch In India In 2021: Here Are The Details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+