Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2022ರ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125, ಸ್ವಾರ್ಟ್‍ಪಿಲೆನ್ 401 ಮತ್ತು ವಿಟ್ಪಿಲೆನ್ 401 ಬೈಕ್‌ಗಳು ಅನಾವರಣ
ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್ವರ್ನಾ ತನ್ನ ಸರಣಿಯಲ್ಲಿರುವ ಪ್ರಮುಖ ಮೂರು ನೇಕೆಡ್ ಬೈಕ್‌ಗಳನ್ನು ಹೊಸ ನವೀಕರಣಗಳೊಂದಿಗೆ ಅನಾವರಣಗೊಳಿಸಿದೆ. ಇವುಗಳು ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125, ಸ್ವಾರ್ಟ್‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‌ಗಳಾಗಿವೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125, ಸ್ವಾರ್ಟ್‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಎಂಬ ಈ ಮೂರು ಬೈಕ್‌ಗಳನ್ನು ಭಾರತದಲ್ಲಿ ಬಜಾಜ್ ಆಟೋ ಕಂಪನಿಯ ಮಹಾರಾಷ್ಟ್ರದ ಚಕನ್‌ನಲ್ಲಿರುವ ಸೌಲಭ್ಯದಲ್ಲಿ ಉತ್ಪಾದಿಸುತ್ತದೆ.ಸ್ವೀಡಿಶ್ ಬ್ರ್ಯಾಂಡ್ ಆದ ಹಸ್ಕ್ವರ್ನಾ ಕೆಟಿಎಂನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು ಅದು ಬಜಾಜ್‌ನ ಮೈತ್ರಿ ಪಾಲುದಾರ. ಎಲ್ಲಾ ಮೂರು ಮಾದರಿಗಳು 2022ರ ಸ್ಟೈಲಿಂಗ್‌ನಲ್ಲಿ ಸೂಕ್ಷ್ಮವಾದ ನವೀಕರಣಗಳಿಗೆ ಒಳಗಾಗಿವೆ. ಪ್ರತಿಯೊಂದು ಮೋಟಾರ್‌ಸೈಕಲ್‌ಗಳು ಅದರ ಇತ್ತೀಚಿನ ಪುನರಾವರ್ತನೆಯಲ್ಲಿ ಹೊಸ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125
ಮೊದಲಿಗೆ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕ್ ಆರ್‌ಸಿ 125 ಮತ್ತು ಡ್ಯೂಕ್ 125 ನಂತಹ ಮಾದರಿಗಳಿಂದ ಹಲವಾರು ಅಂಶಗಳನ್ನು ಎರವಲು ಪಡೆದುಕೊಂಡಿದೆ. ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ತನ್ನ ಎಂಜಿನ್ ಮತ್ತು ಚಾಸಿಸ್ ಅನ್ನು ಕೆಟಿಎಂ 125 ಡ್ಯೂಕ್‌ನೊಂದಿಗೆ ಹಂಚಿಕೊಳ್ಳುತ್ತದೆ, ಆದ್ದರಿಂದ ಇದು ಅದೇ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ.

ಈ ಎಂಜಿನ್ ಈ ಎಂಜಿನ್ 9,250 ಆರ್‌ಪಿಎಂನಲ್ಲಿ 14.3 ಬಿಹೆಚ್‌ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 12 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮ್ಯರ್ಥ್ಯವನ್ನು ಹೊಂದಿದೆ. ಕೆಟಿಎಂಗಿಂತ ಭಿನ್ನವಾಗಿ, ಸ್ವಾರ್ಟ್‌ಪಿಲೆನ್ 125 ಸೈಡ್-ಮೌಂಟಡ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಇನ್ನು ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕಿನ ಉತ್ತಮ-ಗುಣಮಟ್ಟದ ಬ್ರೆಂಬೊದ ಬ್ರೇಕ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ನಾಲ್ಕು ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿದೆ. ಇನ್ನು ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಪ್ರಿ-ಲೋಡ್ ಮಾಡಬಹುದಾದ ಡಬ್ಲ್ಯೂಪಿ ಅಪೆಕ್ಸ್ ಮತ್ತು ಹಿಂಭಾಗದಲ್ಲಿ 142 ಎಂಎಂ ಟ್ರ್ಯಾವೆಲ್ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

ಸ್ವಾರ್ಟ್ಪಿಲೆನ್ 125 ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ಮಾರಾಟವಾಗುವ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ರಂತೆ ಕಾಣುತ್ತದೆ ವಿಭಿನ್ನವಾದ ಸಂಗತಿಯೆಂದರೆ, ಸ್ವಾರ್ಟ್‌ಪಿಲೆನ್ 250ರ ಆಲಾಯ್ ವ್ಹಿಲ್ ಗಿಂತ ಭಿನ್ನವಾಗಿ, ಸ್ವರ್ಟ್‌ಪಿಲೆನ್ 125 ವೈರ್-ಸ್ಪೋಕ್ ವೀಲ್ ಗಳನ್ನು ಹೊಂದಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401
ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್ಪಿಲೆನ್ 401 ಬೈಕ್‌ಗಳು ಕೆಟಿಎಂ ಮಾದರಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಬೈಕ್‌ಗಳು ಕನಿಷ್ಟ ಬಾಡಿ ಪ್ಯಾನೆಲ್ ಗಳೊಂದಿಗೆ ಸಂಪೂರ್ಣವಾಗಿ ನೇಕೆಡ್ ಬಾಡಿ ಸ್ಟೈಲ್ ಅನ್ನು ಹೊಂದಿದೆ. ಸ್ವಾರ್ಟ್‍ಪಿಲೆನ್ ಮತ್ತು ವಿಟ್‌ಪಿಲೆನ್ ತಮ್ಮ ಒಂದೇ ರೀತಿಯ ವಿನ್ಯಾಸದಿಂದಾಗಿ ಪರಸ್ಪರ ಪ್ರತ್ಯೇಕಿಸಲು ಕಷ್ಟ. ಆದರೆ ಎರಡನ್ನೂ ಪ್ರತ್ಯೇಕಿಸುವ ಸೂಕ್ಷ್ಮ ವ್ಯತ್ಯಾಸಗಳಿವೆ.

ಉದಾಹರಣೆಗೆ, ಸ್ವಾರ್ಟ್‌ಪಿಲೆನ್‌ನಲ್ಲಿನ ಹ್ಯಾಂಡಲ್‌ಬಾರ್ ನೇರ ಮತ್ತು ಎತ್ತರವಾಗಿದೆ ಆದರೆ ವಿಟ್‌ಪಿಲೆನ್ ಕಡಿಮೆ-ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ. ಇದು ಸ್ವಲ್ಪ ಹೆಚ್ಚು ನೇರವಾದ ಮತ್ತು ಆರಾಮದಾಯಕ ರೈಡಿಂಗ್ ಫೋಷಿಸನ್ ನೀಡುವ ಸ್ವಾರ್ಟ್‌ಪಿಲೆನ್‌ಗೆ ಹೋಲಿಸಿದರೆ ಎರಡನೆಯದು ಹೆಚ್ಚು ಬದ್ಧತೆ ಮತ್ತು ಅಗ್ರೇಸಿವ್ ರೈಡಿಂಗ್ ಫೋಷಿಸನ್ ಹೊಂದಿದೆ.

ಇದಲ್ಲದೆ, ಸ್ವಾರ್ಟ್‌ಪಿಲೆನ್ ನಾಬ್ಬಿ ಡ್ಯುಯಲ್-ಪರ್ಪಸ್ ಪಿರೆಲ್ಲಿ ಸ್ಕಾರ್ಪಿಯನ್ ರ್ಯಾಲಿ STR ಟೈರ್‌ಗಳನ್ನು ಹೊಂದಿದೆ, ಇನ್ನು ವಿಟ್‌ಪಿಲೆನ್ ಸ್ವಲ್ಪ ಮೃದುವಾದ ರೋಡಿಂಗ್ ಟೈರ್‌ಗಳನ್ನು ಒಳಗೊಂಡಿದೆ, ಆದರೆ ಎರಡು ಕೂಡ ಉತ್ತಮ ರೋಡ್ ಗ್ರಿಪ್ ಅನ್ನು ಹೊಂದಿದೆ,

ಸ್ವಾರ್ಟ್ಪಿಲೆನ್ ಅನ್ನು ಸ್ಕ್ರಾಂಬ್ಲರ್ ಎಂದು ಕರೆಯಲಾಗುತ್ತದೆ ಆದರೆ ವಿಟ್‌ಪಿಲೆನ್ ಅನ್ನು ರೋಡ್ ನೇಕೆಡ್ ಕೆಫೆ ರೇಸರ್ ಎಂದು ಪರಿಗಣಿಸಲಾಗುತ್ತದೆ. ಈ ಬೈಕ್‌ಗಳಲ್ಲಿ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೂಂದಿರಲಿದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇವುಗಳ ಮುಂಭಾಗದಲ್ಲಿ ತಲೆಕೆಳಗಾದ ಇನ್ವರ್ಡಡ್ ಮತ್ತು WP ಅಪೆಕ್ಸ್‌ನಿಂದ ಪಡೆದ ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಈ ಬೈಕ್‌ಗಳ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಬೈಬ್ರೆಯಿಂದ ಕ್ಯಾಲಿಪರ್‌ಗಳೊಂದಿಗ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚುನ ಸುರಕ್ಷತೆಗಾಗಿ ಬಾಷ್‌ನಿಂದ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ, ಈ ಎರಡು ಬೈಕ್‌ಗಳು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ರೈಡ್-ಬೈ-ವೈರ್ ಥ್ರೊಟಲ್ ಅನ್ನು ಹೊಂದಿವೆ.

ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಒಂದು ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಬಜಾಜ್ ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕ್‌ಗಳಿಗೆ ಪೈಪೋಟಿಯನ್ನು ನೀಡುತ್ತದೆ.