Yamaha: ಸಾಮಾನ್ಯ ಜನರಿಗಾಗಿ ದೇಶದ ಮೊದಲ ಯಮಹಾ ಇ-ಸ್ಕೂಟರ್ ಬಿಡುಗಡೆ.. 169 Km ರೇಂಜ್, ಕರ್ನಾಟಕದಲ್ಲಿ ತಯಾರಿಕೆ!

ಯಮಹಾ ಮೋಟಾರ್ ಇಂಡಿಯಾ (Yamaha Motor India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಸದ್ಯ, 'ಇವಿ' ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಹೊಚ್ಚ ಹೊಸ 'ಇಸಿ-06' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿರುವ ರಿವರ್‌ ಮೊಬಿಲಿಟಿ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿದೆ. ಬನ್ನಿ.. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನೂತನ ಯಮಹಾ ಇಸಿ-06 (Yamaha EC-06) ಇ-ಸ್ಕೂಟರ್ ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಬಂದಿದೆ. ರೂ.1.67 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಲ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಇದರ ಬ್ಯಾಟರಿ ಪ್ಯಾಕ್ 3 ವರ್ಷ ಅಥವಾ 30,000 ಕಿಲೋಮೀಟರ್‌ವರೆಗೆ ವಾರಂಟಿಯನ್ನು ಹೊಂದಿದೆ.

Yamaha EC-06 Electric Scooter Launched in India Rs 1 67 Lakh Price Details

ಈ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಪ್ರತಿಯೊಬ್ಬರ ಕಣ್ಮನ ಸೆಳೆಯಬಲ್ಲದು. 'ರಿವರ್ ಇಂಡೀ' ಇ-ಸ್ಕೂಟರ್‌ನ್ನು ಆಧರಿಸಿದ್ದು, ನಗರ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ರೆಕ್ಟ್ಯಾಂಗುಲರ್ ಹೆಡ್‌ಲ್ಯಾಂಪ್, ಫ್ಲಾಟ್ ಫುಟ್‌ಬೋರ್ಡ್ ಹಾಗೂ ಸಿಂಗಲ್-ಪೀಸ್ ಸೀಟ್‌ನ್ನು ಪಡೆದಿದೆ. 'ಬ್ಲ್ಯೂಯಿಶ್ ವೈಟ್' ಎಂಬ ಏಕೈಕ ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 169 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 79 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ.

Yamaha EC-06 Electric Scooter Launched in India Rs 1 67 Lakh Price Details

ಹೊಸ 'ಯಮಹಾ ಇಸಿ-06' ಇ-ಸ್ಕೂಟರ್‌ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 6.7 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 26 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಇಕೋ (Eco), ಸ್ಟ್ಯಾಂಡರ್ಡ್ (Standard) ಹಾಗೂ ಪವರ್ (Power) ಎಂಬ 3 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಈ ಸ್ಕೂಟರ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ರಿವರ್ಸ್ ಅಸಿಸ್ಟ್ ಹಾಗೂ ಯಮಹಾ ಮೋಟಾರ್ ಕನೆಕ್ಟ್ ಆರ್ ಅಪ್ಲಿಕೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 24.5 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಉಪಯೋಗಿಸಿರುವ ಬ್ಯಾಟರಿಯು, ಸುಮಾರು 8 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿ ಬಿಡುತ್ತದೆ.

Yamaha EC-06 Electric Scooter Launched in India Rs 1 67 Lakh Price Details

ನೂತನ 'ಯಮಹಾ ಇಸಿ-06' ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಹೈಡ್ರಾಲಿಕ್ ಡ್ಯಾಂಪರ್‌ಗಳೊಂದಿಗೆ ಕಾಯಿಲ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಬಿಎಸ್ (ಕಾಂಬಿ ಬ್ರೇಕ್ ಸಿಸ್ಟಮ್) ಹಾಗೂ 200 ಎಂಎಂ ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಎಥರ್ 450ಎಕ್ಸ್ (Ather 450X), ಓಲಾ ಎಸ್1 ಪ್ರೊ (Ola S1 Pro), ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST), ಬಜಾಜ್ ಚೇತಕ್ (Bajaj Chetak), ಹೀರೋ ವಿಡಾ ವಿ1 ಪ್ರೊ (Hero Vida V1 Pro) ಹಾಗೂ ಎಥರ್ ರಿಜ್ಟಾ (Ather Rizta) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಒಟ್ಟಾರೆಯಾಗಿ 'ಯಮಹಾ ಇಸಿ-06' ಇ-ಸ್ಕೂಟರ್‌ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಕರ್ಷಕವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು ಶುರುವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

More from DriveSpark

Article Published On: Monday, February 2, 2026, 13:41 [IST]
English summary
Yamaha ec 06 electric scooter launched in india rs 1 67 lakh price details
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+