ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Husqvarna ಎಲೆಕ್ಟ್ರಿಕ್ ಬೈಕ್, ಸ್ಕೂಟರ್
ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್ವರ್ನಾ(Husqvarna) ಎಲೆಕ್ಟ್ರಿಕ್ ವಿಭಾಗಕ್ಕೂ ಕಾಲಿಟ್ಟಿದೆ. ಹಸ್ಕ್ವರ್ನಾ ತನ್ನ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿವೆ.

ಹಸ್ಕ್ವರ್ನಾ ಕಂಪನಿಯು ಈ ವರ್ಷ ಮೇ ತಿಂಗಳಲ್ಲಿ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲು ಅನಾವರಣಗೊಳಿಸಿದರು, ಇದರ ಕೆಲವು ವಾರಗಳ ಹಿಂದೆ ಏಪ್ರಿಲ್‌ನಲ್ಲಿ ಇ-ಪಿಲೆನ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದ್ದರು. ಹಸ್ಕ್ವರ್ನಾ ತನ್ನ ಮೊದಲ ಬ್ಯಾಟರಿ ಚಾಲಿತ ಬೈಕ್ ಮತ್ತು ಸ್ಕೂಟರ್ ಅನ್ನು ಮೊದಲ ಬಾರಿಗೆ ಅಧಿಕೃತವಾಗಿ ಪ್ರದರ್ಶಿಸಿದೆ. ಮ್ಯೂನಿಚ್ ಜರ್ಮನಿಯಲ್ಲಿ ನಡೆದ 2021ರ IAA ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ ಈ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇ-ಪಿಲೆನ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್ ಅನ್ನು ಹಸ್ಕ್ವರ್ನಾ ಕಂಪನಿಯು ಪ್ರದರ್ಶಿಸಿದೆ.

ಇದರಲ್ಲಿ ಹಸ್ಕ್ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲಿಸಿದರೆ ವಿಭಿನ್ನ ವಿನ್ಯಾಸವನ್ನು ಹೊಂದಿದ್ದರೂ, ವೆಕ್ಟೋರ್ ಸ್ಕೂಟರ್ ಕಾನೆಪ್ಟ್ ರೇಜರ್-ಶಾರ್ಪ್ ಬಾಡಿ ಪ್ಯಾನಲ್‌ಗಳೊಂದಿಗೆ ಗೋಚರಿಸುವಂತೆ ತೀಕ್ಷ್ಣವಾದ ವಿನ್ಯಾಸವನ್ನು ಪಡೆಯುತ್ತದೆ. ಇದನ್ನು ಕೆಟಿಎಂ ಒಡೆತನದ 'ಕಿಸ್ಕಾ' ವಿನ್ಯಾಸ ಸ್ಟುಡಿಯೋ ವಿನ್ಯಾಸಗೊಳಿಸಿದೆ.

ಇದು ಬಜಾಜ್‌ನ ಚೇತಕ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಇದೇ ರೀತಿಯ ವಿಶೇಷಣಗಳು ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೇತಕ್ 3.8kW ಮೋಟಾರ್‌ನೊಂದಿಗೆ ತೆಗೆಯಲಾಗದ 3kWh IP67 ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಇದು 70 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದ್ದು, ಪೂರ್ಣ ಚಾರ್ಜ್ ನಲ್ಲಿ (ಇಕೋದಲ್ಲಿ) 95 ಕಿಮೀ ರೇಂಜ್ ಅನ್ನು ನೀಡುತ್ತದೆ. ಇದನ್ನು ಸಾಂಪ್ರದಾಯಿಕ 5A ಪವರ್ ಸಾಕೆಟ್ ಬಳಸಿ ಮನೆಯಲ್ಲಿ ಚಾರ್ಜ್ ಮಾಡಬಹುದು. ಹಸ್ಕ್ವರ್ನಾ ವೆಕ್ಟೋರ್ ಇದೇ ರೀತಿಯ ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಈ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಶಿಷ್ಟವಾದ ಸ್ಟೈಲಿಂಗ್ ಅನ್ನು ಹೊಂದಿದ್ದು, ಸ್ಪೋರ್ಟಿ ಫ್ರಂಟ್ ಏಪ್ರನ್ (ಇಂಟಿಗ್ರೇಟೆಡ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್‌ಗಳೊಂದಿಗೆ), ಸರಳವಾದ ಸೈಡ್ ಪ್ಯಾನಲ್‌ಗಳು ಮತ್ತು ಫ್ಲೋಟಿಂಗ್-ಟೈಪ್ ಸಿಂಗಲ್-ಪೀಸ್ ಸೀಟ್ ಅನ್ನು ಒಳಗೊಂಡಿದೆ.

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದ ವ್ಹೀಲ್ ನಲ್ಲಿ ಸೈಡೆಡ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಸೆಟಪ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸೈಡ್ ಸ್ವಿಂಗಾರ್ಮ್ ಅನ್ನು ಪಡೆಯುತ್ತದೆ.ಸದ್ಯಕ್ಕೆ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಯಾವುದೇ ಮಾಹಿತಿ ಹಸ್ಕ್ವರ್ನಾ ಕಂಪನಿಯು ಹಂಚಿಕೊಂಡಿಲ್ಲ. ಹೊಸ ಸ್ಕೂಟರ್ ಪ್ರೀಮಿಯಂ ವಿನ್ಯಾಸದೊಂದಿಗೆ 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು,

ಇನ್ನು ಹಸ್ಕ್ವರ್ನಾ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಈ ಹೊಸ ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕಿನ ಕಾನ್ಸೆಪ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಮಾರಾಟವಾಗುವ 250ಸಿಸಿಯ ವಿಟ್‌ಪಿಲೆನ್ ಮತ್ತು ಸ್ವಾರ್ಟ್‌ಪಿಲೆನ್ ಮಾದರಿಗಳನ್ನು ಹೋಲುತ್ತದೆ.

ಇ-ಪಿಲೆನ್ ಆಲ್-ಎಲೆಕ್ಟ್ರಿಕ್ ಆಗಿದ್ದು, ಮತ್ತು ಇದು ಮೂಲ ಸಂಸ್ಥೆ ಪಿಯರೆರ್ ಮೊಬಿಲಿಟಿ ಮತ್ತು ಭಾರತದ ಬಜಾಜ್ ಆಟೋ ಕಂಪನಿಗಳ ಮಾದರಿಯಾಗಿದೆ. ಇ-ಪಿಲೆನ್ ಹಸ್ಕ್ವರ್ನಾದ ಮೊದಲ ಎಲೆಕ್ಟ್ರಿಕ್ ಕಾನ್ಸೆಪ್ಟ್ ಆಗಿರಬಹುದು. ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಇದನ್ನು ಮೊದಲು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು.

ಸಾಮಾನ್ಯ 48-ವೋಲ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಭವಿಷ್ಯದಲ್ಲಿ ವಿವಿಧ ರೀತಿಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡುಬಹುದು. ಇನ್ನು ಈ ಹೊಸ ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕನ್ನು ಭಾರತೀಯ ಮಾರುಕಟ್ಟೆಗಾಗಿ ಬಜಾಜ್ ಆಟೋ ಘಟಕದಲ್ಲಿ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್ವರ್ನಾ ಕಂಪನಿಯ ಪ್ರಕಾರ, ಇ-ಪಿಲೆನ್ ಎಲೆಕ್ಟ್ರಿಕ್ ಬೈಕಿನಲ್ಲಿ 8 ಕಿ.ವ್ಯಾಟ್ ಮೋಟಾರ್ ಅನ್ನು ಅಳವಡಿಸಬಹುದು.

ಈ ಮೋಟಾರ್ 10.73 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಬೈಕನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀ.ವರೆಗೆ ಚಲಿಸುತ್ತದೆ. ಕೆಟಿಎಂ, ಹೋಂಡಾ, ಯಮಹಾ ಮತ್ತು ಪಿಯಾಜಿಯೊ ನಡುವಿನ ಒಕ್ಕೂಟದ ಮೂಲಕ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಬಹುದು. ಹಸ್ಕ್ವರ್ನಾ ಎಲೆಕ್ಟ್ರಿಕ್ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಸಸ್ಪೆಂಕ್ಷನ್ ಅನ್ನು ಪಡೆಯುತ್ತದೆ.

ಇನ್ನು ಫ್ರೇಮ್ ಮತ್ತು ಸ್ವಿಂಗಾರ್ಮ್ ಅನ್ನು ಮುಂದಿನ ತಲೆಮಾರಿನ ಕೆಟಿಎಂ 125, 250 ಮತ್ತು 390 ಡ್ಯೂಕ್ ಮಾದರಿಗಳೊಂದಿಗೆ ಹಂಚಿಕೊಳ್ಳಬಹುದು, ಈ ಹಸ್ಕ್ವರ್ನಾ ಬೈಕ್ಗಳು ವಿಭಿನ್ನ ಸ್ಟೈಲಿಂಗ್ ಮತ್ತು ಅಗ್ರೇಸಿವ್ ಲುಕ್ ಹೆಚ್ಚಾಗಿ ಯುವಜನತೆಯನ್ನು ಸೆಳೆಯುವಂತಿದೆ, ಬ್ರ್ಯಾಂಡ್ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಬೈಕ್ ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಸ್ಕ್ವರ್ನಾ ತನ್ನ ಇತರ ಜನಪ್ರಿಯ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ಹಸ್ಕ್ವರ್ನಾ ವಿಟ್‌ಪಿಲೆನ್ 401 ಬೈಕ್‍ಗಳು ಒಳಗೊಂಡಿವೆ.

ಇನ್ನು ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್ವರ್ನಾ ಮಾತ್ರವಲ್ಲ ಕೆಟಿಎಂ ಮತ್ತು ಬಜಾಜ್ ಸಹ ಭಾರತದಲ್ಲಿ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಬಹುದು. ಶೀಘ್ರದಲ್ಲೇ ಹೊಸ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇ-ಪಿಲೆನ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.


Click it and Unblock the Notifications








