Just In
- 1 hr ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 3 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 4 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 5 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಾರ್ಟ್ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್ವರ್ನಾ
ಹಸ್ಕ್ವರ್ನಾ ಈ ತಿಂಗಳ ಆರಂಭದಲ್ಲಿ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್ಪಿಲೆನ್ 250 ಬೈಕ್ಗಳನ್ನು ಅನಾವರಣಗೊಳಿಸಿತ್ತು. ಇವುಗಳ ಜೊತೆಗೆ ತನ್ನ ಮೂರನೇ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.
ಸ್ವಾರ್ಟ್ಪಿಲೆನ್ 200 ಬೈಕ್ ಅನ್ನು ಭಾರತದಲ್ಲಿ 2020ರ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ. ಹಸ್ಕ್ವರ್ನಾ ಕಂಪನಿಯ ಜಾಗತಿಕ ವೆಬ್ಸೈಟಿನಲ್ಲಿರುವಂತೆ ಸ್ವಾರ್ಟ್ಪಿಲೆನ್ 200 ಬೈಕ್ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿರುವಂತಹ ಎಂಜಿನ್ ಹೊಂದಿರಲಿದೆ.
200 ಸಿಸಿಯ ಈ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ ಆಗಿರಲಿದೆ. ಈ ಎಂಜಿನ್ 26 ಬಿಹೆಚ್ಪಿ ಪವರ್ ಹಾಗೂ 19.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನಲ್ಲಿ 6 ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ.
ಸ್ವಾರ್ಟ್ಪಿಲೆನ್ 200 ಬೈಕಿನಲ್ಲಿ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿರುವಂತಹ ಮುಂಭಾಗದ ಹಾಗೂ ಹಿಂಭಾಗದ ಸಸ್ಪೆಂಷನ್ ಹಾಗೂ ಬ್ರೇಕ್ಗಳಿರಲಿವೆ. ಸ್ವಾರ್ಟ್ಪಿಲೆನ್ 200 ಬೈಕ್ ಕೆಟಿಎಂ ಡ್ಯೂಕ್ 250 ಬೈಕಿನಲ್ಲಿರುವಂತಹ ಚಾಸೀಸ್ ಹೊಂದಿರಲಿದೆ.
ಇದರ ಜೊತೆಗೆ ಸ್ವಾರ್ಟ್ಪಿಲೆನ್ 200 ಬೈಕ್ ಸ್ವಾರ್ಟ್ಪಿಲೆನ್ 250 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್, ಬಾಡಿ ಪ್ಯಾನೆಲ್, ಎಲ್ಇಡಿ ಲೈಟಿಂಗ್ ಹಾಗೂ ಸೈಡ್ ಮೌಂಟ್ ಎಕ್ಸಾಸ್ಟ್ ಗಳನ್ನು ಹೊಂದಿರಲಿದೆ. ಹೊಸ ಸ್ವಾರ್ಟ್ಪಿಲೆನ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿರಲಿದೆ.
ಹಸ್ಕ್ವರ್ನಾ ಇತ್ತೀಚಿಗೆ ಪ್ರದರ್ಶಿಸಿದ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್ಪಿಲೆನ್ 250 ಬೈಕ್ಗಳು ಕೆಟಿಎಂ ಡ್ಯೂಕ್ 250 ಬೈಕಿನಲ್ಲಿರುವಂತಹ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 29.6 ಬಿಹೆಚ್ಪಿ ಪವರ್ ಹಾಗೂ 24 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್ನಲ್ಲಿ 6 ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ಸ್ವಾರ್ಟ್ಪಿಲೆನ್ 250 ಸ್ಕ್ರಾಂಬ್ಲರ್ ಮಾದರಿಯ ಬೈಕ್ ಆಗಿದ್ದು, ದೊಡ್ಡ ಗಾತ್ರದ ಟ್ಯಾಂಕ್, 8 ಸ್ಪೋಕ್ನ ಅಲಾಯ್ ವ್ಹೀಲ್, ಡ್ಯುಯಲ್ ಪರ್ಪಸ್ ಟಯರ್ಗಳನ್ನು ಹೊಂದಿರಲಿದೆ.
ವಿಟ್ಪಿಲೆನ್ 250 ಬೈಕ್ ಕೆಫೆ ರೇಸರ್ ಮಾದರಿಯ ಬೈಕ್ ಆಗಿದ್ದು, ಸ್ವಾರ್ಟ್ಪಿಲೆನ್ ಬೈಕ್ ಹೊಂದಿರುವಂತಹ ಬಾಡಿಯನ್ನು ಹೊಂದಿದೆ. ಹಸ್ಕ್ವರ್ನಾ ಕಂಪನಿಯು ಹಲವಾರು ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ವದಂತಿಗಳಿವೆ.
ಇವುಗಳಲ್ಲಿ ಕೆಟಿಎಂ 390 ಬೈಕಿನಲ್ಲಿರುವ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವಂತಹ ಸ್ವಾರ್ಟ್ಪಿಲೆನ್ 401 ಹಾಗೂ ವಿಟ್ಪಿಲೆನ್ 401 ಬೈಕ್ಗಳು ಸೇರಿವೆ. ಇದರ ಜೊತೆಗೆ ಕೆಟಿಎಂ ಅಡ್ವೆಂಚರ್ 390 ಬೈಕ್ ಅನ್ನು ಹೋಲುವ ನಾರ್ಡನ್ 401 ಬೈಕ್ ಬಿಡುಗಡೆಗೊಳಿಸಬಹುದೆಂಬ ವದಂತಿಗಳಿವೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ಯಾವುದೇ ಕಂಪನಿಯಾಗಲಿ ಮಾಸ್ ಸೆಗ್ಮೆಂಟ್ ಅನ್ನು ಗುರಿಯಾಗಿಸಿಕೊಂಡು ವಾಹನಗಳನ್ನು ಬಿಡುಗಡೆಗೊಳಿಸುತ್ತವೆ. ಇದನ್ನೇ ಹಸ್ಕ್ವರ್ನಾ ಕಂಪನಿಯೂ ಸಹ ಮಾಡುತ್ತಿದೆ. ಬಿಡುಗಡೆಯಾದ ನಂತರ ಹಸ್ಕ್ ವರ್ನಾ ಕಂಪನಿಯ ಎಲ್ಲಾ ವಾಹನಗಳು ಜನಪ್ರಿಯವಾಗುವ ಸಾಧ್ಯತೆಗಳಿವೆ.