ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಕವಾಸಕಿ ನಿಂಜಾ 400
ಕವಾಸಕಿ ಕಂಪನಿಯು ತನ್ನ ಹೊಸ ನಿಂಜಾ 400 ಬೈಕ್ ಅನ್ನು ಹೊಸ ಬಣ್ಣಗಳಲ್ಲಿ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳಾಗಲಿದ್ದು, ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

ಹೊಸ ಬಣ್ಣ ಹೊಂದಿರುವ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಕವಾಸಕಿ ನಿಂಜಾ 400 ಬೈಕ್ ಅನ್ನು ಮೊದಲ ಬಾರಿಗೆ 2017ರಲ್ಲಿ ಇಟಲಿಯಲ್ಲಿ ನಡೆದಿದ್ದ ಇಐಸಿಎಂಎ ಮೋಟಾರ್ ಸೈಕಲ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2018ರ ಏಪ್ರಿಲ್‍ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯ ನಂತರ ಜಪಾನ್ ಮೂಲದ ಕಂಪನಿಯ ಈ ಬೈಕ್, ಪ್ರಪಂಚಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು.

ಇದುವರೆಗೂ ನಿಂಜಾ 400 ಬೈಕ್ ಅನ್ನು ಸಾಂಪ್ರದಾಯಕ ಕವಾಸಕಿ ಹಸಿರು ಬಣ್ಣದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಕೆಲವು ಕವಾಸಕಿ ಪ್ರಿಯರು ಈ ಬೈಕುಗಳತ್ತ ಆಕರ್ಷಿತರಾದರೂ, ಬೇರೆ ಬಣ್ಣಗಳನ್ನು ಬಯಸಿದ್ದ ಉಳಿದವರು ಬೇರೆ ಕಂಪನಿಗಳ ಬೈಕುಗಳನ್ನು ಖರೀದಿಸಿದರು.

ಕವಾಸಕಿ ಹೆಚ್ಚಿನ ಬಣ್ಣಗಳನ್ನು ಬಯಸುವ ಖರೀದಿದಾರರನ್ನು ತನ್ನತ್ತ ಸೆಳೆಯಲು ಬಯಸಿದ್ದು, ಹೊಸ ಬಣ್ಣಗಳಲ್ಲಿ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಕವಾಸಕಿ ನಿಂಜಾ 400 ಈಗ ರೆಡ್ ಹೈಲೈಟ್‍ಗಳನ್ನು ಹೊಂದಿರುವ ಕಪ್ಪು - ಬಿಳಿ ಬಣ್ಣ ಮತ್ತು ಗೋಲ್ಡನ್ ಅಸ್ಸೆಂಟ್ ಹೊಂದಿರುವ ಕಪ್ಪು - ಬೂದು ಬಣ್ಣದಲ್ಲಿ ಲಭ್ಯವಿದೆ.

ಸಾಂಪ್ರದಾಯಕ ಕವಾಸಕಿ ಹಸಿರು ಬಣ್ಣದಲ್ಲಿಯೂ ಮಾರಾಟವಾಗಲಿದೆ. ಈ ಬಣ್ಣದ ಜೊತೆಗೆ ಈಗ ಹೊಸ ಗ್ರಾಫಿಕ್ಸ್, ಕೆಂಪು ಹಾಗೂ ಗೋಲ್ಡನ್ ಅಸ್ಸೆಂಟ್‍ಗಳನ್ನು ಹೊಂದಿರಲಿದೆ. ಬೈಕಿನ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಸಸ್ಪೆಂಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 310 ಎಂಎಂ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಗಳಿವೆ.

ಕವಾಸಕಿ ನಿಂಜಾ 400 ಬೈಕಿನಲ್ಲಿ ಲಿಕ್ವಿಡ್ ಕೂಲ್‍ನ, 399 ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 48.3 ಬಿಹೆಚ್‌ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 38 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಈ ಎಂಜಿನ್‍ನಲ್ಲಿ ಅಳವಡಿಸಲಾಗಿರುವ, ಸ್ಲಿಪರ್ ಕ್ಲಚ್ ಸಹಾಯ ಹೊಂದಿರುವ, 6 ಸ್ಪೀಡ್‍ನ ಗೇರ್ ಬಾಕ್ಸ್ ಹಿಂದಿನ ಚಕ್ರವನ್ನು ಚಲಾಯಿಸುತ್ತದೆ. ಕವಾಸಕಿ ನಿಂಜಾ 400 ಬೈಕ್ ವಿಶಿಷ್ಟವಾದ ಸ್ಟೈಲಿಂಗ್ ಹೊಂದಿದೆ. ಮುಂಭಾಗವು ಶಾರ್ಪ್ ಅನುಪಾತದ ಸ್ಟೈಲಿಂಗ್ ಹೊಂದಿರುವ ಟ್ವಿನ್ ಹೆಡ್‍ಲ್ಯಾಂಪ್ ಹೊಂದಿದೆ.
MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಬೈಕಿನ ಸೈಡಿನಲ್ಲಿ ಪೂರ್ಣ ಪ್ರಮಾಣದ ಫೇರಿಂಗ್ ಹಾಗೂ ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಪ್‍ಗಳಿವೆ. ಇನ್ಸ್ ಟ್ರೂಮೆಂಟೆಷನ್ ಕಾರ್ಯಗಳನ್ನು ಡಿಜಿಟಲ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಿರ್ವಹಿಸುತ್ತದೆ. ಹೊಸ ಬಣ್ಣಗಳು ಕವಾಸಕಿ ನಿಂಜಾ 400 ಬೈಕಿನ ಸೌಂದರ್ಯವನ್ನು ಹೆಚ್ಚಿಸಿವೆ.
MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬೈಕುಗಳು ಹೆಚ್ಚು ಬಣ್ಣಗಳಲ್ಲಿ ಮಾರಾಟವಾದರೆ ಹೆಚ್ಚಿನ ಜನರು ಅವುಗಳನ್ನು ಖರೀದಿಸಲಿದ್ದಾರೆ. ಕವಾಸಕಿ ನಿಂಜಾ 400 ಬೈಕ್ ಅದ್ಭುತ ಪ್ರದರ್ಶನ ನೀಡುವ ಅದ್ಭುತ ಬೈಕ್ ಆಗಿದೆ. ಕವಾಸಕಿ ಕಂಪನಿಯು ಈ ಬೈಕ್ ಅನ್ನು ಕೇವಲ ಒಂದು ಬಣ್ಣದಲ್ಲಿ ಮಾರಾಟ ಮಾಡುತ್ತಿತ್ತು. ಹೊಸದಾಗಿ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಖರೀದಿದಾರರನ್ನು ಆಕರ್ಷಿಸುವ ಸಾಧ್ಯತೆಗಳಿವೆ.


Click it and Unblock the Notifications