ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಬಿ‍ಎಸ್ 6 ಮಾಲಿನ್ಯ ನಿಯಮಗಳನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ವಾಹನ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುತ್ತಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಹಿನ್ನೆಲೆಯಲ್ಲಿ ಕವಾಸಕಿ ಕಂಪನಿಯು ಸಹ ತನ್ನ ಝಡ್ 650 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ. ಸದ್ಯಕ್ಕೆ ಈ ಬೈಕ್ ಅನ್ನು ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಈ ಹಿಂದಿನ ಆವೃತ್ತಿಯ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.69 ಲಕ್ಷಗಳಾಗಿತ್ತು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಝಡ್650 ಬೈಕಿನ ಬೆಲೆಯು ರೂ.6.25 ಲಕ್ಷದಿಂದ ರೂ.6.50 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಬೈಕಿನಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್, 4.3 ಇಂಚಿನ ಟಿ‍ಎಫ್‍‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍‍ಸ್ಪೋರ್ಟ್ ಟಯರ್‍‍ಗಳಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಬೈಕಿನಲ್ಲಿರುವ ಎಲ್‍ಇ‍‍ಡಿ ಹೆಡ್‍‍ಲೈಟ್ ಹಾಗೂ ಟಿಎಫ್‍‍ಟಿ ಇನ್ಸ್ ಟ್ರೂಮೆಂಟೆಷನ್ ಸ್ಕ್ರೀನ್‍‍ಗಳು ಈ ಬೈಕಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಸಸ್ಪೆಂಷನ್‍ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 41 ಎಂಎಂ‍‍ನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 200 ಎಂಎಂ ಡಿಸ್ಕ್ ಗಳಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಕವಾಸಕಿ ಕಂಪನಿಯು ಝಡ್ 900 ಬೈಕಿನ ಬಿಡುಗಡೆಯೊಂದಿಗೆ ಭಾರತದಲ್ಲಿ ಬಿ‍ಎಸ್ 6 ಅಪ್‍‍ಡೇಟ್‍‍ಗಳನ್ನು ಆರಂಭಿಸಿತ್ತು. ಈ ಬೈಕ್ ಸಹ ಹಲವಾರು ಹೆಚ್ಚುವರಿ ಫೀಚರ್‍‍ಗಳನ್ನು ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಹೊಸ ಝಡ್ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 68 ಬಿ‍ಹೆಚ್‍‍ಪಿ ಪವರ್ ಹಾಗೂ 6,700 ಆರ್‍‍ಪಿ‍ಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಮಾರುಕಟ್ಟೆಯಲ್ಲಿರುವ ಹಳೆಯ ಆವೃತ್ತಿಯ ಬಿ‍ಎಸ್ 4 ಎಂಜಿನ್ ಹೊಂದಿರುವ ಝಡ್ 650 ಬೈಕ್ ಸಹ ಇದೇ ಪ್ರಮಾಣದ ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿತ್ತು. ಆದರೆ ಬಿ‍ಎಸ್ 6 ಎಂಜಿನ್ ಹೊಂದಿರುವ ಬೈಕ್ 1.7 ಎನ್‍ಎಂ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಹಳೆಯ ಬೈಕಿನ ತೂಕವು 190 ಕೆ.ಜಿಗಳಾಗಿತ್ತು. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕಿನ ತೂಕವು 187 ಕೆ.ಜಿಗಳಾಗಿದೆ. ಇದರಲ್ಲಿರುವ ಫ್ಯೂಯಲ್ ಟ್ಯಾಂಕ್ 15 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕಿನಲ್ಲಿರುವ ಸೀಟಿನ ಎತ್ತರವು 790 ಎಂಎಂಗಳಾದರೆ, ಗ್ರೌಂಡ್ ಕ್ಲಿಯರೆನ್ಸ್ 130 ಎಂಎಂ ಆಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಝಡ್‍650 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಬಿ‍ಎಸ್ 6 ಎಂಜಿನ್ ಹೊಂದಿರುವ ಝಡ್ 650 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸಿ‍ಎಫ್ ಮೋಟೊ 650, ಬೆನೆಲ್ಲಿ ಟಿ‍ಎನ್‍‍ಟಿ 600 ಹಾಗೂ ಲಿಯಾನ್‍‍ಚಿನೊ 500 ಬೈಕ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Kawasaki Z650 BS6 Launched In India At Rs 6.25 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X