ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ತನ್ನ ಬೆರಗುಗೊಳಿಸುವ ವಿನ್ಯಾಸ, ಹೈ ಎಂಡ್ ಫೀಚರ್ಸ್, ಪವರ್‍‍ಫುಲ್ 373 ಸಿಸಿ ಎಂಜಿನ್ ಹಾಗೂ ಸ್ಪರ್ಧಾತ್ಮಕ ಬೆಲೆಗಳಿಂದಾಗಿ ಕೆ‍‍ಟಿ‍ಎಂ 390 ಡ್ಯೂಕ್ ಬೈಕ್, ಬೈಕ್ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಬೈಕ್ ಮಾಡಿಫೈಗೆ ಹೆಸರುವಾಸಿಯಾದ ಕೋಲ್ಟ್ ವ್ರಾಂಗ್ಲರ್ ಲಿಯನ್‍‍ರವರು 390 ಡ್ಯೂಕ್‍‍ನಂತಹ ಬೈಕ್ ಅನ್ನೇ ಮಾಡಿಫೈ ಮಾಡಿದ್ದಾರೆ.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಮಾಡಿಫೈ ಮಾಡಲು 70ರ ದಶಕದ ಯಮಹಾ ಮೋಟಾರ್‍‍ಸೈಕಲ್‍‍ನ ಬಿಡಿಭಾಗಗಳನ್ನು ಬಳಸಲಾಗಿದೆ. ಈ ಕಾರ್ಯಕ್ಕಾಗಿ 390 ಡ್ಯೂಕ್‍‍ನ ನೇಕೆಡ್ ಬಾಡಿಯನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿರುವ ಬಾಡಿ ಕ್ಲಾಡಿಂಗ್ ಅನ್ನು ಹೊರತೆಗೆಯಲಾಗಿದೆ, ಇದರಿಂದಾಗಿ ತೆಳುವಾದ ಸ್ಕ್ರಾಂಬ್ಲರ್‍‍ನಂತೆ ಕಾಣುತ್ತದೆ. ಸ್ಟಾಕ್ ಫ್ಯೂಯಲ್ ಟ್ಯಾಂಕ್ ಅನ್ನು ತೆಗೆದು, ಯಮಹಾ ಆರ್‍‍ಡಿ400 ಬೈಕಿನಲ್ಲಿದ್ದ ಟ್ಯಾಂಕ್ ಅನ್ನು ಅಳವಡಿಸಲಾಗಿದೆ.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಈ ಬೈಕಿನಲ್ಲಿದ್ದ ಹೆಡ್‍‍ಲೈಟ್, ಸೀಟ್, ಟಯರ್ ಹಗ್ಗರ್, ಎಕ್ಸ್ ಹಾಸ್ಟ್ ಯೂನಿಟ್, ರೇರ್ ಟೇಲ್ ಸೆಕ್ಷನ್ ಹಾಗೂ ರೇರ್ ವೀವ್ ಮಿರರ್‍‍ಗಳನ್ನು ತೆಗೆದು ಹಾಕಲಾಗಿದೆ. ಸ್ಟಾಕ್ ಟಯರ್‍‍ಗಳ ಬದಲಿಗೆ ಆಫ್ ರೋಡಿಗೆ ಅನುಕೂಲವಾಗುವಂತಹ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಕೋಲ್ಟ್ ರವರು ಮೊದಲಿಗೆ ಈ ಕೆಲಸವನ್ನು ಹವ್ಯಾಸಕ್ಕಾಗಿ ಶುರು ಮಾಡಿದರು, ನಂತರ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ 390 ಡ್ಯೂಕ್ ಬೈಕ್ ಅನ್ನು ಮಾಡಿಫೈ ಮಾಡುವುದಕ್ಕೂ ಮುಂಚೆ ಕೋಲ್ಟ್ ರವರು 1970ರ ಹೋಂಡಾ ಸ್ಕ್ರಾಂಬ್ಲರ್ ಬೈಕ್ ಅನ್ನು ಮಾಡಿಫೈ ಮಾಡಿದ್ದರು.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಕೋಲ್ಟ್ ರವರ ಗ್ರಾಹಕರೊಬ್ಬರು ಈ ಮಾಡಿಫೈ ಮಾಡಲಾದ ಬೈಕ್ ಅನ್ನು ನೋಡಿ ಪ್ರಭಾವಿತರಾಗಿ ತಮಗೂ ಈ ರೀತಿಯ ಬೈಕ್ ಬೇಕೆಂಬ ಬೇಡಿಕೆ ಇಟ್ಟರು. ಆ ಗ್ರಾಹಕರು ಮಾಡಿಫೈ ಮಾಡಲಾಗುವ ಬೈಕ್ 350 ಸಿಸಿಯ ಒಳಗಿರಬೇಕೆಂದು ಹಾಗೂ ಯು‍ಎಸ್‍‍ಡಿ ಫೋರ್ಕ್, ಮೋನೊಶಾಕ್ ಸಸ್ಪೆಂಷನ್ ಹೊಂದರಬೇಕೆಂದು ಕೇಳಿಕೊಂಡರು. ಇದಕ್ಕಾಗಿ ಅವರು ಕೆ‍‍ಟಿ‍ಎಂ 390 ಬೈಕ್ ಅನ್ನು ಆಯ್ಕೆ ಮಾಡಿಕೊಂಡರು. ಎಲ್ಲಾ ಬಿಡಿ ಭಾಗಗಳನ್ನು ಹೊರತೆಗೆದ ನಂತರ ಕೆಟಿ‍ಎಂ390 ಬೈಕ್ ಅಸ್ಥಿ ಪಂಜರದಂತೆ ಕಾಣಿಸುತ್ತಿತ್ತು.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಇದರಲ್ಲಿ ಕೇವಲ ಎಂಜಿನ್ ಭಾಗಗಳು, ಮೆಕಾನಿಕಲ್ ಬಿಡಿಭಾಗಗಳು ಹಾಗೂ ಲೈಟ್‍‍ವೇಟ್ ಟ್ರೆಲ್ಲಿಸ್ ಫ್ರೇಮ್‍‍ಗಳು ಮಾತ್ರವೇ ಉಳಿದಿದ್ದವು. ಬೈಕಿನ ತೂಕವನ್ನು ಕಡಿಮೆ ಮಾಡಿದ ಕಾರಣ, ಈ ಮಾಡಿಫೈಡ್ ಬೈಕ್ ಹೆಚ್ಚಿನ ಪವರ್ ಹೊಂದಲಿದೆ.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಹಲವು ಜನಗಳ ಅನಿಸಿಕೆಯಂತೆ ವೃತ್ತಿಪರ ಬೈಕ್ ಬಿಲ್ಡರ್‍‍ಗಳಿಗೆ ದಯೆ, ಕರುಣೆ ಎಂಬುದಿರುವುದಿಲ್ಲ. ಆದರೆ ಹೊಸ ಕೆಟಿ‍ಎಂ390 ಡ್ಯೂಕ್ ಬೈಕ್‍‍ನಲ್ಲಿದ್ದ ಬಿಡಿಭಾಗಗಳನ್ನು ಹೊರತೆಗೆದು ಮಾಡಿಫೈ ಮಾಡುವಾಗ ಕೋಲ್ಟ್ ರವರು ಸಹ ಬಾವುಕರಾಗಿದ್ದರು.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಈ ಕಾರ್ಯದಲ್ಲಿ ಕೋಲ್ಟ್ ರವರಿಗೆ ಹೆಚ್ಚು ಕಷ್ಟವಾದ ಕೆಲಸವೆಂದರೆ, 8 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ತೆಗೆಯುವುದಾಗಿತ್ತು. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ತೆಗೆದ ನಂತರ, ಅದನ್ನು ಆರ್‍‍ಡಿ 400 ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ಅಳವಡಿಸಲಾಯಿತು.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಬದಲಾಯಿಸಿದ ಟ್ಯಾಂಕ್ ಅನ್ನು ಮೊದಲಿಗೆ ಕೆಟಿ‍ಎಂ ಫ್ಯೂಯಲ್ ಪಂಪ್‍ ಹಾಗೂ ಇಗ್ನಿಷನ್ ಸ್ವಿಚ್‍‍ನ ಜೊತೆ ಜೋಡಿಸಲಾಯಿತು. ನಂತರ 8 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೇರವಾಗಿ ಫ್ಯೂಯಲ್ ಟ್ಯಾಂಕ್ ಮೇಲೆ ಅಳವಡಿಸಿ, ಪ್ಲಾಸ್ಟಿಕ್ ಕವರ್‍‍ನಿಂದ ಮುಚ್ಚಲಾಯಿತು.

ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಇನ್ನುಳಿದ ಮುಖ್ಯ ಬದಲಾವಣೆಗಳೆಂದರೆ ಏರ್ ಬಾಕ್ಸ್ ಹಾಗೂ ಎಮಿಷನ್ ರೆಗ್ಯುಲೇಷನ್ ಯೂನಿಟ್‍‍ಗಳನ್ನು ಹೊರತೆಗೆದು, ಅವುಗಳ ಬದಲಿಗೆ ಕೆ ಅಂಡ್ ಎನ್ ಫಿಲ್ಟರ್ ಹಾಗೂ ಕ್ರಾಂಕ್‍‍ಕೇಸ್ ಬ್ರೀಥರ್‍‍ಗಳನ್ನು ಅಳವಡಿಸಲಾಯಿತು. ಸ್ಟಾಕ್ ಎಕ್ಸಾಸ್ಟ್ ಅನ್ನು ಹೊರತೆಗೆದು ಅದರ ಜಾಗದಲ್ಲಿ ಸೀಟಿನ ಕೆಳಗೆ ಕೂರಬಲ್ಲ ಸ್ಟೈನ್‍‍ಲೆಸ್ ಸ್ಟೀಲ್ ಸ್ಲಿಪ್ ಯೂನಿಟ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Thursday, May 30, 2019, 18:31 [IST]
English summary
KTM 390 Duke modified with parts from Yamaha RD 400. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+