ಕೆಟಿಎಂ ಡ್ಯೂಕ್ ಬೈಕ್ ಎಕ್ಸಾಸ್ಟ್‌ಗೆ ಲೌಡ್ ಸ್ಪೀಕರ್ ಹಾಕಿದ ಭೂಪ..!
ಈಗಿನ ಯುವಕರಿಗೆ ಮಾಡಿಫೈ ಇಲ್ಲದ ಬೈಕ್‌ಗಳನ್ನು ಚಾಲನೆ ಮಾಡುವುದು ಒಂದು ಥರಾ ಅಲರ್ಜಿ ಇದ್ದಂತೆ. ಇದೇ ಕಾರಣಕ್ಕೆ ಇರೋ ಬರೋ ಬೈಕ್ ಮಾದರಿಗಳಲ್ಲೇ ಒಂದೊಳ್ಳೆ ಡಿಸೈನ್ ಮಾಡಿಸಿಕೊಂಡು ಪೋಸ್ ಕೊಡೊದು ಅಂದ್ರೆ ಅವರಿಗೆ ಎಲ್ಲಿಲ್ಲದ ಹೆಮ್ಮೆ ಅಂದ್ರೆ ತಪ್ಪಾಗುವುದಿಲ್ಲ.

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರು, ಬೈಕ್ ಮಾಡಿಫಿಕೇಷನ್ ಹೊಸತೆನಲ್ಲ. ಆದ್ರೆ ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ. ಇಲ್ಲೊಬ್ಬ ಕೆಟಿಎಂ ಡ್ಯೂಕ್ 200 ಬೈಕ್ ಸವಾರ ಕೂಡಾ ತನ್ನ ಬೈಕಿನ ಸೌಂಡ್ ಹೆಚ್ಚಿಸಲು ಲೌಡ್ ಸ್ಪೀಕರ್ ಮೊರೆಹೋಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ನೀವು ಇಷ್ಟು ದಿನಗಳ ಕಾಲ ದೊಡ್ಡದಾದ ಬೈಕ್ ಚಕ್ರಗಳನ್ನೋ, ಬೈಕ್ ಮುಂಭಾಗದಲ್ಲಿ ಸ್ಪೋರ್ಟಿ ವಿನ್ಯಾಸವನ್ನೋ ಇಲ್ಲವೇ ವಿಚಿತ್ರವಾದ ಬಾಡಿ ಡಿಸೈನ್ ಮಾಡಿಸಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿಯೇ ಇರುತ್ತಿರಿ. ಆದ್ರೆ ಈ ಬೈಕ್ ಮಾಲೀಕ ಮಾತ್ರ ಸೌಂಡ್ ಹೆಚ್ಚಿಸಲು ಲೌಡ್ ಸ್ಪೀಕರ್ ಹಾಕಿದ್ದಾನೆ.

ಬೈಕಿನ ಎಕ್ಸಾಸ್ಟ್‌ನಲ್ಲಿಯೇ ಜೋಡಿಸಬಹುದಾದ ಲೌಡ್ ಸ್ಪೀಕರ್ ಇದಾಗಿದ್ದು, ಬೈಕ್ ಚಾಲನೆ ವೇಳೆ ವಿಚಿತ್ರವಾದ ಸೌಂಡ್ ಬರುತ್ತದೆ. ಇತರೆ ಬೈಕ್‌ಗಳಿಂತ ನನ್ನ ತುಸು ಡಿಫರೆಂಟ್ ಆಗಿರಲಿ ಅಂತಾ ಹೀಗೆ ಮಾಡುವುದಾಗಿ ಬೈಕ್ ಸವಾರನು ಹೇಳಿಕೊಂಡಿದ್ದಾನೆ.

ಸಂಚಾರಿ ನಿಯಮಗಳಿಗೆ ಇದು ವಿರುದ್ದ ಎಂದು ಗೊತ್ತಿತ್ತದ್ದರೂ ಸಹ ಬೈಕಿಗೆ ಲೌಡ್ ಸ್ಪೀಕರ್ ಅಳವಡಿಸಿದ್ದಾನೆ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ನಗರಪ್ರದೇಶಗಳಲ್ಲಿ ಇದನ್ನು ಬಳಕೆ ಮಾಡಿದ್ರೆ ಸಿಕ್ಕಿಕೊಳ್ಳುವ ಭಯ ಅರಿತಿರುವ ಈ ಬೈಕ್ ಸವಾರನು ಬೇಕೆಂದಾಗ ಜೋಡಿಸಲು ಮತ್ತು ಬೇಡವಾದಾಗ ತೆಗೆದು ಹಾಕುವ ಸೌಲಭ್ಯವನ್ನು ಸಿದ್ದಪಡಿಸಿದ್ದಾನೆ.
ಆದ್ರೆ ಅದೇನೆ ಇರಲಿ ಈ ರೀತಿ ಬೈಕ್ ಮಾಡಿಫೈ ಮಾಡಿಸಿಕೊಳ್ಳುವುದರಿಂದ ಇತರರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೇ ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗಬಹುದು. ಒಂದು ವೇಳೆ ನೀವು ಕೂಡಾ ಮಾಡಿಫೈ ಪ್ರಿಯರಾಗಿ ಈ ರೀತಿ ಡಿಫೆರಂಟ್ ಆಗಿ ಯೋಚನೆ ಮಾಡುತ್ತಿದ್ದರೆ ಈಗಲೇ ಕೈಬಿಟ್ಟು ಕಾನೂನಿನ ಚೌಕಟ್ಟಿನಲ್ಲಿ ಮಾಡಿಫೈ ಮಾಡಿಸುವುದು ಒಳೀತು.


Click it and Unblock the Notifications








