ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ಸಂಸ್ಥೆಯು ಈ ಹಿಂದೆಯೆ ತಮ್ಮ ಬಜಾಜ್ ಡಾಮಿನಾರ್ ಬೈಕ್ ಅನ್ನು ಬಿಡುಗಡೆಗೊಳಿಸಿ, ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದೆ. ಈ ಕಾರಣದಿಂದಾಗಿ ಬಜಾಜ್ ಸಂಸ್ಥೆಯು ತಮ್ಮ ಡಾಮಿನಾರ್ ಬೈಕನ್ನು ನವೀಕರಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಸುಳಿವು ನೀಡಿತ್ತು.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಈ ಬಾರಿ ಬಿಡುಗಡೆಯಾಗಲಿರುವ ಹೊಸ ಬಜಾಜ್ ಡಾಮಿನಾರ್ ಬೈಕ್ ಬಿಎಸ್-VI ಎಂಜಿನ್ ಅನ್ನು ಪಡೆಯಲಿದ್ದು, ಇಂಡಿಯನ್ ಓವರ್ ಡ್ರೈವ್ ಮಾಹಿತಿ ಪ್ರಕಾರ ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಜೊತೆಗೆ ಹೊಸ ಗ್ರೀನ್ ಪೆಯಿಂಟ್ ಸ್ಕೀಮ್‍ನಲ್ಲಿ ಕಾಣಿಸಿಕೊಂಡಿದೆ. ಇದೀಗ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಶುರುವಾಗಿದೆ. ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಬಜಾಜ್ ಡೀಲರ್‍‍ನ ಬಳಿ ರೂ.5000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಹೀಗಾಗಿ ಹೊಸ ಎಮಿಷನ್ ಅನ್ನು ಪಡೆದುಕೊಂಡಿರುವ ಬಜಾಜ್ ಡಾಮಿನಾರ್ 400 ಬೈಕ್‍ಗಳು ಈ ಬಾರಿ ಹೆಚ್ಚು ಸಾಮರ್ಥ್ಯವನ್ನು ಹೊರಹಾಕಲಿದ್ದು, ಬಿಡುಗಡೆಯಾಗುವ ವರೆಗು ಎಷ್ಟು ಪವರ್ ಔಟ್‍‍ಪುಟ್ ನೀಡಲಿದೆ ಎಂದು ತಿಳಿಯಬೇಕಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಆದರೆ ಪ್ರಸ್ತುತ ಇರುವ ಬಜಾಜ್ ಡಾಮಿನಾರ್ 400 ಬೈಕ್ 373.3ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 35ಬಿಹೆಚ್‍ಪಿ ಮತ್ತು 34ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಹೊಸ ಬಜಾಜ್ ಡಾಮಿನಾರ್ 400 ಬೈಕಿಗೆ ಈ ಬಾರಿ ನೀಡಲಾದ ಎಂಜಿನ್ ಅನ್ನು 43.5 ಬಿಹೆಚ್‍ಪಿ ಸಾಮರ್ಥ್ಯವನ್ನು ನೀಡುವ ಕೆಟಿಎಂ 390 ಬೈಕಿನಿಂದ ಪಡೆಯಲಾಗಿದ್ದು, ಇದು ಹೆಚ್ಚಿನ ಸಂಕುಚಿತ ಅನುಪಾತದಿಂದಾಗಿ ಮತ್ತು ಬಜಾಜ್ ಆಟೊ ಅದರ ಒತ್ತಡ ಹೆಚ್ಚಾಗುವುದನ್ನು ಸ್ವಲ್ಪ ಹೆಚ್ಚಿನ ಶಕ್ತಿ ಪಡೆಯುವಂತೆ ಮಾಡುತ್ತದೆ ಎನ್ನಲಾಗಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಅಷ್ಟೆ ಅಲ್ಲದೇ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡುವ ಸುಳಿವು ನೀಡಿದ್ದು, ಹೊಸ ಎಕ್ಸಾಸ್ಟ್ ಸಿಸ್ಟಂ ಅನ್ನು ನೀಡಲಾಗಿತ್ತಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಪೋರ್ಟ್ಸ್, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ. ಜೊತೆಗೆ ಈ ಹೊಸ ಎಕ್ಸಾಸ್ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಹೊಸ ಫೀಚರ್ಸ್

ಪ್ರಸ್ತುತ ಇರುವ ಬೈಕಿನಲ್ಲಿ ನೀಡಲಾದ ಸ್ಕ್ರೀನ್ ಅನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಅನ್ನು ಪಡೆದುಕೊಳ್ಳಲಿದೆ. ಇಷ್ಟೆ ಅಲ್ಲದೆ ಈ ಬೈಕಿನಲ್ಲಿ ಸೆಕೆಂಡರಿ ಡಿಸ್ಪ್ಲೇ ಕೂಡಾ ಬಳಸಲಾಗಿದ್ದು, ಇದು ಫ್ಯುಯಲ್ ಟ್ಯಾಂಕ್‍ನ ಮೇಲೆ ಕಾಣಿಸಿಕೊಳ್ಳುತ್ತೆ. ಇದರಲ್ಲಿ ಗೇರ್ ಪೊಸಿಷನ್, ಟ್ರಿಪ್ ಮೀಟರ್ ಮತ್ತು ಟೈಮ್ ತೋರಿಸುತ್ತದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಪ್ರಸ್ಥುತ ಇರುವ ಬಜಾಜ್ ಡಾಮಿನಾರ್ 400 ಬೈಕ್ ಎಕ್ಸ್ ಶೋರಂ ಬೆಂಗಳೂರು ಪ್ರಕಾರ 2.02 ಲಕ್ಷದ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ನವೀಕರಣದೊಂದಿಗೆ ಬಿಡುಗಡೆಯಾಲಿರುವ ಬೈಕ್ ಇನ್ನು ರೂ. 15,000 ರಿಂದ ರೂ. 20,000 ಅಧಿಕವಾಗಿರಬಹುದೆಂದು ಹೇಳಲಾಗುತ್ತಿದೆ.

ಆರ್‍ಇ ಕ್ಲಾಸಿಕ್ 350 ಬೈಕ್‍ಗಳಿಗೆ ಟಾಂಗ್ ನೀಡಲು ಬರಲಿರುವ ಬಜಾಜ್ ಡಾಮಿನಾರ್ 400 ಬೈಕ್ ಇದೆ...

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಸಂಸ್ಥೆಯಲ್ಲಿನ ಜನಪ್ರಿಯ ಡಾಮಿನಾರ್ ಬೈಕ್ ಈ ಬಾರಿ ಹಲವಾರು ಬದಲಾವಣೆಗಳನ್ನು ಪಡೆದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಮತ್ತು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Source: OverDrive

Most Read Articles

Kannada
English summary
2019 Bajaj Dominar 400 Specifications And Details Revealed Ahead Of Launch. Read In Kannada
Story first published: Wednesday, March 6, 2019, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X