ಹೊಸ ಬಜಾಜ್ ಪಲ್ಸರ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ...

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಜನಪ್ರಿಯ ವಾಹನಗಳಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಇದೀಗ ಏಪ್ರಿಲ್‍ನಿಂಡ ಜಾರಿಯಾಗಲಿರುವ ಹೊಸ ಸುರಕ್ಷಾ ನಿಯಮಗಳ ಅನುಸಾರ ತಮ್ಮ ವಾಹನಗಳಿಗೆ ಎಬಿಎಸ್ ಮತ್ತು ಸಿಬಿಎಸ್ ಟೆಕ್ನಾಲಜಿಯನ್ನು ಅಳವಡಿಸುವ ಯೋಜನೆಯಲ್ಲಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಈ ನಿಟ್ಟಿನಲ್ಲಿ ಬಜಾಜ್ ಸಂಸ್ಥೆಯು ತಮ್ಮ ಜನಪ್ರಿಯ ಪಲ್ಸರ್ 150 ಬೈಕಿಗೆ ಎಬಿಎಸ್ ಅನ್ನು ಕೂಡಾ ಅಳವಡಿಸಲಾಗಿದ್ದು, ಇದೀಗ ಅದೇ ಬೈಕಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡಲು ಟ್ವಿನ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಟ್ವಿನ್ ಡಿಸ್ಕ್ ಬ್ರೇಕ್ ಪಡೆದ ಹೊಸ ಬಜಾಜ್ ಪಲ್ಸರ್ 150 ಎಬಿಎಸ್ ಬೈಕ್ ಇದೀಗ ಡೀಲರ್‍‍ಗಳ ಬಳಿ ಕಾಣಿಸಿಕೊಂಡಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಬಿಡಗಡೆಯಾಗಲಿದೆ ಎನ್ನಲಾಗಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಬಜಾಜ್ ಪಲ್ಸರ್ 150, ಪಲ್ಸರ್ 220ಎಫ್ ಮತ್ತು ಅವೆಂಜರ್ ಕ್ರೂಸ್ ಬೈಕ್‍‍ಗಳಾ ಮಾದರಿಯಲ್ಲೆ, ಬಜಾಜ್ 150 ಬೈಕ್ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ಅಳವಡಿಸಲಾದ ಎಬಿಎಸ್ ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಅನ್ನು ಹೊರತು ಪಡಿಸಿ ಈ ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್, ಎಬಿಎಸ್ ಬೈಕ್ ಸಾಧಾರಣ ಬೈಕಿನಂತೆಯೆ 149ಸಿಸಿ, ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 14ಬಿಹೆಚ್‍ಪಿ ಮತ್ತು 13.4ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಬಜಾಜ್ ಪಲ್ಸರ್ 150 ಎಬಿಎಸ್, ಟ್ವಿನ್ ಡಿಸ್ಕ್ ಬ್ರೇಕ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 260ಎಂಎಂ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್, ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಮತ್ತು ರಿಯರ್ ಲಿಫ್ಟ್ ಪ್ರೊಟೆಕ್ಷನ್ ಅನ್ನು ನೀಡಲಾಗಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಎಬಿಎಸ್ ಅನ್ನು ಅಳವಡಿಸಿದ ಕಾರಣ ಬಜಾಜ್ ಪಲ್ಸರ್ 150 ಬೈಕಿನ ಬೆಲೆಯಲ್ಲಿ ಸುಮಾರು ರೂ.2000 ರಿಂದ ರೂ.3000 ಬೆಲೆ ಹೆಚ್ಚಾಗಿರಲಿದ್ದು, ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್ ವೇರಿಯಂಟ್ ಬೈಕಿನ ಬೆಲೆಯು ರೂ. 80,794 ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಕೇವಲ ಬಜಾಜ್ ಆಟೋ ಸಂಸ್ಥೆ ಮಾತ್ರವಲ್ಲದೇ ಮಾರುಕಟ್ಟೆಯಲ್ಲಿರುವ ಹಲವಾರು ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಇದೇ ವರ್ಷದ ಎಪ್ರಿಲ್ 1ರೊಳಗೆ ತಮ್ಮ 150ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸುವ ಕಾರ್ಯದಲ್ಲಿದ್ದು, ಇನ್ನು ಎಬಿಎಸ್ ಅನ್ನು ಪಡೆಯಲಿರುವ ಸ್ಕೂಟರ್ ವಿಭಾಗದಲ್ಲಿ ಎಪ್ರಿಲಿಯಾ ಎಸ್‍150 ಮೊದಲನಯದಾಗಿದೆ.

ಹೊಸ ಬಜಾಜ್ 150 ಬೈಕ್ ಈಗ ಟ್ವಿನ್ ಡಿಸ್ಕ್ ಬ್ರೇಕ್‍‍ನ ಜೊತೆಗೆ..

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಬಜಾಜ್ ಆಟೋ ಇಂಡಿಯಾ ಸಂಸ್ಥೆಯು ಪ್ರಸ್ಥುತ ತಮ್ಮ ಲೈನ್ ಅಪ್‍ನಲ್ಲಿರುವ ಎಲ್ಲಾ ವಾಹನಗಳಿಗೆ ಸುರಕ್ಷಾ ವೈಶಿಷ್ಟ್ಯತೆಗಳನ್ನು ಅಳವಡಿಸುವ ಕಾರ್ಯದಲಿದ್ದು, ಇದನ್ನು ಹೊರತು ಪಡಿಸಿ ಬಜಾಜ್ ಸಂಸ್ಥೆಯು 2020ರಿಂದ ಜಾರಿಯಾಗಲಿರುವ ಬಿಎಸ್-VI ಎಮಿಷನ್ ನಾರ್ಮ್ಸ್ ಬಗ್ಗೆ ಕೂಡಾ ಯೋಜನೆಯನ್ನು ಮಾಡುತ್ತಿದೆ.

Source: Rushlane

More from DriveSpark

Article Published On: Friday, January 4, 2019, 10:15 [IST]
English summary
New Bajaj Pulsar 150 ABS Twin Disc Version Spotted In Dealership. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+